ಭಾರತ್ ಜೋಡೊ ಯಾತ್ರೆ ಪೋಸ್ಟರಲ್ಲಿ ಸಾವರ್ಕರ್ ಚಿತ್ರ ; ವೈರಲ್ ಆಗುತ್ತಿದ್ದಂತೆ ಗಾಂಧೀಜಿ ಚಿತ್ರ ಅಂಟಿಸಿದ ಕಾರ್ಯಕರ್ತರು ! 

21-09-22 09:32 pm       HK News Desk   ದೇಶ - ವಿದೇಶ

ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರ ಪೋಸ್ಟರ್‌ನಲ್ಲಿ ವಿ.ಡಿ. ಸಾವರ್ಕರ್ ಫೋಟೊ ಕಾಣಿಸಿಕೊಂಡಿದೆ. ಇದರಿಂದ ಕಾಂಗ್ರೆಸ್ ನಾಯಕರು ತೀವ್ರ ಮುಜುಗರಕ್ಕೀಡಾಗಿದ್ದು, ಪಕ್ಷದ ನಾಯಕರಿಂದಲೇ ಪ್ರಮಾದದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 

ಕೊಚ್ಚಿ, ಸೆ.21 : ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರ ಪೋಸ್ಟರ್‌ನಲ್ಲಿ ವಿ.ಡಿ. ಸಾವರ್ಕರ್ ಫೋಟೊ ಕಾಣಿಸಿಕೊಂಡಿದೆ. ಇದರಿಂದ ಕಾಂಗ್ರೆಸ್ ನಾಯಕರು ತೀವ್ರ ಮುಜುಗರಕ್ಕೀಡಾಗಿದ್ದು, ಪಕ್ಷದ ನಾಯಕರಿಂದಲೇ ಪ್ರಮಾದದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 

ಕೇರಳದ ಕೊಚ್ಚಿಯ ಆಲುವಾದಲ್ಲಿ ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆ ಸಾಗುವ ರಸ್ತೆಯಲ್ಲಿ ಪ್ರಚಾರಕ್ಕೆಂದು ಪೋಸ್ಟರ್ ಹಾಕಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಿದ್ದ ಬೃಹತ್ ಪೋಸ್ಟರ್‌ಗಳಲ್ಲಿ ಸಾವರ್ಕರ್ ಚಿತ್ರವೂ ನಡುವೆ ಕಾಣಿಸಿಕೊಂಡಿದೆ. 

ಸಾವರ್ಕರ್ ಚಿತ್ರ ಇರುವುದು ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ಕಾಂಗ್ರೆಸ್ ಬೆಂಬಲಿಗರು ಆ ಪೋಸ್ಟರ್ ಮೇಲೆ ಮಹಾತ್ಮ ಗಾಂಧಿ ಚಿತ್ರವನ್ನು ಅಂಟಿಸಿದ್ದಾರೆ. ಕಾರ್ಯಕರ್ತರು ಗಾಂಧೀಜಿ ಚಿತ್ರವನ್ನು ಅಂಟಿಸುವ ವೀಡಿಯೊ ಹರಿದಾಡುತ್ತಿದೆ. ಈ ಮಧ್ಯೆ, ಸಾವರ್ಕರ್ ಚಿತ್ರ ಬಂದಿರುವುದಕ್ಕೆ ಮುದ್ರಣ ತಪ್ಪು ಎಂದು ಹೇಳಿದೆ.  ಪ್ರಿಂಟಿಂಗ್ ವೇಳೆ ಆಗಿರುವ ಪ್ರಮಾದ ಇದಾಗಿದೆ ಎಂದು ಕಾಂಗ್ರೆಸ್ ಸ್ಥಳೀಯ ನಾಯಕರು ಸಮಜಾಯಿಷಿ ನೀಡಿದ್ದಾರೆ.

The Congress said that it was left to firefight a major gaffe on Day 14 of their ambitious rally, the Bharat Jodo Yatra. The top leadership of the party has joined grassroots-level workers to walk shoulder-to-shoulder. However, as their rally reached Kerala’s Ernakulum district, the party was faced with a blunder it had not anticipated, it said.