ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಸೇರಿ 100ಕ್ಕೂ ಹೆಚ್ಚು ಬಂಧನ, ಕೇಂದ್ರ ಗೃಹ ಸಚಿವಾಲಯದ್ದೇ ಸೂಚನೆ, ಭಯೋತ್ಪಾದಕ ಕೃತ್ಯಕ್ಕಾಗಿ ಗಲ್ಫ್ ರಾಷ್ಟ್ರಗಳಲ್ಲಿ ದೇಣಿಗೆ, ನಿರ್ದಿಷ್ಟ ಜನರನ್ನು ಕೊಲ್ಲಲು ಟಾರ್ಗೆಟ್! 

22-09-22 07:15 pm       HK News Desk   ದೇಶ - ವಿದೇಶ

ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೇಶದ ಹತ್ತು ರಾಜ್ಯಗಳಲ್ಲಿ ಜಂಟಿಯಾಗಿ ದಾಳಿ ನಡೆಸಿದ್ದು, ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಓ.ಎಂ.ಎ ಸಲಾಂ ಸೇರಿದಂತೆ 100ಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂಧಿಸಿದ್ದಾರೆ.

ನವದೆಹಲಿ, ಸೆ.22: ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೇಶದ ಹತ್ತು ರಾಜ್ಯಗಳಲ್ಲಿ ಜಂಟಿಯಾಗಿ ದಾಳಿ ನಡೆಸಿದ್ದು, ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಓ.ಎಂ.ಎ ಸಲಾಂ ಸೇರಿದಂತೆ 100ಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಪಿಎಫ್ಐ ಕೇರಳ ರಾಜ್ಯ ಘಟಕದ ಅಧ್ಯಕ್ಷ ಸಿಪಿ ಮಹಮ್ಮದ್ ಬಶೀರ್, ದೆಹಲಿ ಘಟಕದ ಅಧ್ಯಕ್ಷ ಪರ್ವೇಜ್ ಅಹ್ಮದ್ ಕೂಡ ಸೇರಿದ್ದಾರೆ.

ಓ.ಎಂ.ಎ ಸಲಾಂ ಮತ್ತು ಮಹಮ್ಮದ್ ಬಶೀರ್ ಅವರನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇತ್ತೀಚೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಸಿಕ್ಕಿಬಿದ್ದ ಪಿಎಫ್ಐ ಕಾರ್ಯಕರ್ತರನ್ನು ತನಿಖೆ ನಡೆಸಿದ ವೇಳೆ ಹಲವಾರು ಸ್ಫೋಟಕ ವಿಚಾರಗಳು ಬಯಲಿಗೆ ಬಂದಿದ್ದವು. ಈ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖಾ ವರದಿ ರೆಡಿ ಮಾಡಿದ್ದು ಕೇಂದ್ರ ಮತ್ತು ತೆಲಂಗಾಣ ಡಿಜಿಪಿಗೆ ಸಲ್ಲಿಸಿದ್ದರು.

NIA, ED raids 10 states, around 100 PFI members arrested

ಭಯೋತ್ಪಾದನಾ ಕೃತ್ಯಗಳಿಗೆ ಯುವಕರಿಗೆ ಪ್ರೇರಣೆ

ಪಿಎಫ್ಐ ತನ್ನ ಯುವಕರಿಗೆ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ ನೀಡುತ್ತಿರುವುದು ಮತ್ತು ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಟ್ಟು ಕೊಲ್ಲುವುದಕ್ಕೆ ತರಬೇತಿ ನೀಡುತ್ತಿರುವ ಬಗ್ಗೆಯೂ ಅದರಲ್ಲಿ ಉಲ್ಲೇಖವಾಗಿತ್ತು. ಅಲ್ಲದೆ, ದೇಶದ್ರೋಹದ ಕೆಲಸಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೊಡ್ಡ ಮೊತ್ತದ ಹಣವನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದ್ದು ಕೊಲ್ಲುವುದು, ಸಮಾಜದಲ್ಲಿ ಭಯೋತ್ಪಾದನೆ ಉಂಟು ಮಾಡುವ ಕೃತ್ಯಗಳಿಗಾಗಿ ವಿನಿಯೋಗ ಮಾಡುತ್ತಿದೆ ಎಂಬುದಾಗಿ ತನಿಖೆಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಎನ್ಐಎ ಅಧಿಕಾರಿಗಳು ಹೈದರಾಬಾದ್ ಠಾಣೆಯಲ್ಲಿ ದೇಶದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

Nia Raids At Pfi Offices Trigger Protests, Over 100 Arrested, Amit Shah  Chairs Key Meet | Latest Updates

ಪಿಎಫ್ಐ ಬೇರು ಬಿಟ್ಟಿರುವ ರಾಜ್ಯದಲ್ಲಿ ದಾಳಿ

ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೇರು ಬಿಟ್ಟಿರುವ ದೇಶದ ಹತ್ತು ರಾಜ್ಯಗಳಲ್ಲಿ ಎನ್ಐಎ ಮತ್ತು ಇಡಿ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದ್ದಾರೆ. ಪಿಎಫ್ಐ ಸಂಘಟನೆಯನ್ನು ಕೇಂದ್ರೀಕರಿಸಿ ನಡೆಸಿದ ಅತ್ಯಂತ ದೊಡ್ಡ ದಾಳಿ ಇದಾಗಿದ್ದು, ಆಂಧ್ರ ಪ್ರದೇಶ 5, ಕರ್ನಾಟಕ 20, ಅಸ್ಸಾಂ 9, ದೆಹಲಿ 3, ಕೇರಳ 22, ಮಧ್ಯಪ್ರದೇಶ 4, ಮಹಾರಾಷ್ಟ್ರ 20, ಪುದುಚೇರಿ 4, ರಾಜಸ್ಥಾನ 2, ತಮಿಳುನಾಡು 10, ಉತ್ತರ ಪ್ರದೇಶದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ.

ಭಯೋತ್ಪಾದನಾ ಕೃತ್ಯಗಳಿಗೆ ದೇಣಿಗೆ ಸಂಗ್ರಹಿಸುವುದು, ತರಬೇತಿ ಶಿಬಿರ ಏರ್ಪಡಿಸುವುದು, ಯುವಕರನ್ನು ಪಿಎಫ್ಐ ಮಾದರಿಯ ಸಂಘಟನೆಗಳಿಗೆ ಸೇರುವಂತೆ ಪ್ರಚೋದಿಸುವುದು, ದೇಶದ್ರೋಹದ ಕೃತ್ಯಗಳಿಗೆ ಪ್ರೇರಣೆ ನೀಡುವುದು ಇತ್ಯಾದಿ ಚಟುವಟಿಕೆಯ ಕಾರಣಕ್ಕೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕೇರಳದಲ್ಲಿ ಆರಂಭಗೊಂಡಿದ್ದ ಪಿಎಫ್ಐ ಸಂಘಟನೆ ಕಳೆದ ಕೆಲವು ವರ್ಷಗಳಲ್ಲಿ ದೆಹಲಿ, ತಮಿಳುನಾಡು, ಕರ್ನಾಟಕ, ಅಸ್ಸಾಂ, ಬಿಹಾರ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಕ್ರಿಯವಾಗಿತ್ತು. ಕಳೆದ ಬಾರಿ ಸಿಎಎ ಮ್ತತು ಎನ್ನಾರ್ಸಿ ಕಾನೂನು ಜಾರಿ ವೇಳೆ ದೇಶಾದ್ಯಂತ ಪ್ರತಿಭಟನೆಗಳನ್ನು ಪಿಎಫ್ಐ ಕಾರ್ಯಕರ್ತರು ಆಯೋಜಿಸಿದ್ದರು.

Pan-India ED, NIA raids at PFI premises - Mangalorean.com

ಗಲ್ಫ್ ರಾಷ್ಟ್ರಗಳಿಂದ ಪಿಎಫ್ಐ ದೇಣಿಗೆ ಸಂಗ್ರಹ

ಇತ್ತೀಚೆಗೆ ಕೇಂದ್ರೀಯ ಏಜನ್ಸಿಗಳು ಗೃಹ ಸಚಿವಾಲಯಕ್ಕೆ ಮಹತ್ವದ ಮಾಹಿತಿಗಳನ್ನು ರವಾನೆ ಮಾಡಿದ್ದವು. ಗಲ್ಫ್ ರಾಷ್ಟ್ರಗಳಿಂದ ಪಿಎಫ್ಐ ಸಂಘಟನೆಗಳಿಗೆ ಹಣ ರವಾನೆ ಆಗುತ್ತಿರುವುದು, ದೇಣಿಗೆ ಸಂಗ್ರಹ ಆಗುತ್ತಿರುವ ಬಗ್ಗೆ ಮಾಹಿತಿಗಳಿದ್ದವು. ಪಿಎಫ್ಐ ಸಂಘಟನೆಯ ಬಗ್ಗೆ ಮೃದು ಧೋರಣೆ ಉಳ್ಳ ಅಮಾಯಕರ ಖಾತೆಗಳ ಮೂಲಕ ಹಣ ರವಾನೆ ಮಾಡುತ್ತಿರುವ ಬಗ್ಗೆಯೂ ಮಾಹಿತಿಗಳಿದ್ದವು. ಭಯೋತ್ಪಾದಕ ಸಂಚಿನ ಭಾಗವಾಗಿ ಅತ್ಯಂತ ನಿಗೂಢವಾಗಿ ಪಿಎಫ್ಐ ಪರವಾಗಿ ದೇಣಿಗೆ ಸಂಗ್ರಹ ಆಗುತ್ತಿರುವ ಬಗ್ಗೆ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಗುಪ್ತಚರ ಮೂಲಗಳು ತಿಳಿಸಿದ್ದವು. ಅಮಾಯಕರ ಹೆಸರಿಗೆ ವಿದೇಶದಿಂದ ರವಾನೆಯಾಗುತ್ತಿದ್ದ ಹಣವನ್ನು ಆನಂತರ, ಪಿಎಫ್ಐ ನಾಯಕರ ಖಾತೆಗಳಿಗೆ ಹಂಚಿಕೆ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿತ್ತು. ಪಿಎಫ್ಐ ಸಂಘಟನೆಯ ಹಣಕಾಸು ಮೂಲದ ಬಗ್ಗೆ ಎರಡು ವರ್ಷಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

The National Investigation Agency (NIA) and the Enforcement Directorate (ED) conducted searches at multiple locations across India. Residences and offices of Popular Front of India (PFI) leaders were raided, and over 100 PFI members have been arrested so far. As per sources, raids began at midnight at the houses of PFI state, district level leaders including the house of OMA Salam, PFI chairman in Manjeri, Malappuram district, and at PFI offices. Not just in Kerala, the raids are underway across 10 states including Maharashtra, Assam, Karnataka, and Gujarat, among others. NIA, ED along with state police have arrested over 100 cadres of PFI, said sources. Sources said this is the largest ever probe conducted by NIA to date.