ಕೇರಳದಲ್ಲಿ ಹಿಂಸೆಗೆ ತಿರುಗಿದ ಹರತಾಳ ; ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ, ಹೈಕೋರ್ಟ್ ಸ್ವಯಂಪ್ರೇರಿತ ಕೇಸು, ಕಠಿಣ ಕ್ರಮಕ್ಕೆ ಸೂಚನೆ  

23-09-22 01:13 pm       HK News Desk   ದೇಶ - ವಿದೇಶ

ಪಿಎಫ್ಐ ನಾಯಕರ ಬಂಧನ ಖಂಡಿಸಿ ಕೇರಳ ರಾಜ್ಯದಲ್ಲಿ ನಡೆಸುತ್ತಿರುವ ಹರತಾಳ ಹಲವೆಡೆ ಹಿಂಸೆಗೆ ತಿರುಗಿದೆ. ತಿರುವನಂತಪುರ, ಕೊಲ್ಲಂ, ವಯನಾಡ್, ಕೊಟ್ಟಾಯಂ, ಆಲಪ್ಪುಳದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ಮೇಲೆ ಕಲ್ಲೆಸೆದು ಹಾನಿ ಮಾಡಲಾಗಿದೆ.

Photo credits : ANI news

ತಿರುವನಂತಪುರಂ, ಸೆ.23: ಪಿಎಫ್ಐ ನಾಯಕರ ಬಂಧನ ಖಂಡಿಸಿ ಕೇರಳ ರಾಜ್ಯದಲ್ಲಿ ನಡೆಸುತ್ತಿರುವ ಹರತಾಳ ಹಲವೆಡೆ ಹಿಂಸೆಗೆ ತಿರುಗಿದೆ. ತಿರುವನಂತಪುರ, ಕೊಲ್ಲಂ, ವಯನಾಡ್, ಕೊಟ್ಟಾಯಂ, ಆಲಪ್ಪುಳದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ಮೇಲೆ ಕಲ್ಲೆಸೆದು ಹಾನಿ ಮಾಡಲಾಗಿದೆ.

ಹಿಂಸಾಚಾರದ ಬೆನ್ನಲ್ಲೇ ಹೈಕೋರ್ಟ್ ಗರಂ ಆಗಿದ್ದು, ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದೆ. ಹರತಾಳ ನಡೆಸುವುದನ್ನು ಹೈಕೋರ್ಟ್ ನಿಷೇಧಿಸಿದ್ದು, ಸಾರ್ವಜನಿಕ ಆಸ್ತಿ ನಷ್ಟವಾದರೆ ಅದಕ್ಕೆ ಸಂಘಟನೆಯೇ ಜವಾಬ್ದಾರಿ ಎಂದು ಈ ಹಿಂದೆ ಆದೇಶ ಮಾಡಿತ್ತು. ಅದರಂತೆ, ಪಿಎಫ್ಐ ನಾಯಕರ ಮೇಲೆ ಸ್ವಯಂ ಕೇಸು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೆ, ಹಿಂಸೆಗಿಳಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಹೈಕೋರ್ಟ್ ಆದೇಶದ ಪ್ರಕಾರ, ಏಳು ದಿನಗಳ ಮೊದಲು ಸರಕಾರಕ್ಕೆ ನೋಟೀಸು ನೀಡಿ ಹರತಾಳ ನಡೆಸಬೇಕೆಂದಿದೆ. ದಿಢೀರ್ ಹರತಾಳಕ್ಕೆ ಕರೆ ಕೊಡುವಂತಿಲ್ಲ.

Image

Image

ತಿರುವನಂತಪುರದಲ್ಲಿ ಕಾರು, ಆಟೋಗಳಿಗೆ ಕಲ್ಲು ತೂರಿ ಹಾನಿ ಮಾಡಲಾಗಿದೆ. ಆಲುವಾ, ಕೊಟ್ಟಾಯಂನಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳಿಗೂ ಕಲ್ಲು ತೂರಲಾಗಿದೆ. ಕಣ್ಣೂರಿನಲ್ಲಿ ಪತ್ರಿಕೆ ವಿತರಿಸುತ್ತಿದ್ದ ಸಿಬಂದಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಬಗ್ಗೆ ವರದಿಗಳಿವೆ. ಆಲಪ್ಪುಳದಲ್ಲಿ ಸರಕಾರಿ ಬಸ್, ಟ್ಯಾಂಕರ್ ಮೇಲೆ ಕಲ್ಲು ತೂರಲಾಗಿದೆ. ಪೊಲೀಸ್ ಸಿಬಂದಿಗೂ ಕಲ್ಲು ತೂರಲಾಗಿದೆ. ಕೋಜಿಕ್ಕೋಡಿನಲ್ಲಿ ಆಟೋ ರಿಕ್ಷಾದ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ 15 ವರ್ಷದ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ. ಕೊಲ್ಲಂನಲ್ಲಿ ಆಂಟನಿ ಮತ್ತು ನಿಖಿಲ್ ಎಂಬ ಇಬ್ಬರು ಪೊಲೀಸ್ ಸಿಬಂದಿ ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಬೈಕಿನಲ್ಲಿ ಬಂದಿದ್ದ ಯುವಕರನ್ನು ಪೊಲೀಸರು ನಿಲ್ಲಿಸಿದಾಗ, ಪೊಲೀಸರನ್ನು ದೂಡಿ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಎಲ್ಲ ಕಡೆಯೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Image

Image

ಪಿಎಫ್ಐ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಕೇರಳ ರಾಜ್ಯದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಹರತಾಳಕ್ಕೆ ಕರೆ ನೀಡಿದ್ದು ರಾಜ್ಯದಾದ್ಯಂತ ವ್ಯಾಪಾರ ವಹಿವಾಟು, ಬಸ್ ಸಂಚಾರ ಬಂದ್ ಆಗಿದೆ. 

The bandh called by the Popular Front of India (PFI) in Kerala against the pre-dawn raids and arrest of its key leaders by central agencies turned violent on Friday. Several incidents of vandalism and violence have been reported across the state and stones were pelted in various districts such as Thiruvananthapuram, Kollam, Kozhikode, Wayanad and Alappuzha.