'ಕಮಲ'ಕ್ಕೆ ಮೆತ್ತಿದ ಕೆಸರನ್ನು 'ಕೈ'ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಪೊರಕೆಯೇ ಬೇಕು ; ಗುಜರಾತಿನಲ್ಲಿ ಕೇಜ್ರಿವಾಲ್ 

25-09-22 06:03 pm       HK News Desk   ದೇಶ - ವಿದೇಶ

'ಕಮಲ'ದ ಸುತ್ತ ಸಾಕಷ್ಟು 'ಕೆಸರು' ಮೆತ್ತಿಕೊಂಡಿದೆ. ಆ ಕೆಸರನ್ನು “ಕೈ”ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅದಕ್ಕೆ ಪೊರಕೆಯೇ ಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. 

ವಡೋದರಾ, ಸೆ.25: 'ಕಮಲ'ದ ಸುತ್ತ ಸಾಕಷ್ಟು 'ಕೆಸರು' ಮೆತ್ತಿಕೊಂಡಿದೆ. ಆ ಕೆಸರನ್ನು “ಕೈ”ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅದಕ್ಕೆ ಪೊರಕೆಯೇ ಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. 

ಗುಜರಾತ್ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಕೇಜ್ರಿವಾಲ್, ಟೌನ್‌ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್‌ ಯುವ ಸಮುದಾಯದೊಂದಿಗೆ ಸಂವಾದ ನಡೆಸಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗುಜರಾತ್‌ನಲ್ಲಿ 80 ಶೇ. ಖಾಸಗಿ ಉದ್ಯೋಗಗಳನ್ನು ಗುಜರಾತಿಗಳಿಗೆ ಮೀಸಲು ಮಾಡುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

Ahead of Telangana polls, BJP gears up for national executive meeting in  Hyderabad - India News

ಇದೇ ವೇಳೆ, ಬಿಜೆಪಿ ಆಡಳಿತದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಕಮಲ'ದ ಸುತ್ತ ಸಾಕಷ್ಟು 'ಕೆಸರು' ಬಿದ್ದಿದೆ. ಆ ಕೆಸರನ್ನು ಬರೀಯ “ಕೈ”ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅದನ್ನು “ಪೊರಕೆ ” ಹಿಡಿದೇ ಸ್ವಚ್ಛ ಮಾಡಬೇಕಾಗುತ್ತದೆ. ಹೀಗೆಂದು ನಾನು ಹೇಳುತ್ತಿಲ್ಲ. ಬಿಜೆಪಿ ಸಚಿವರೊಬ್ಬರು ತಮ್ಮ ಕಾರ್ಯಕರ್ತರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ ಎಂದು ಅದನ್ನು ತೋರಿಸಿದರು. 

AAP denies that Bhagwant Mann was deplaned in Germany because he was drunk

ಕಳೆದ ವಾರ ನಾವು ವಡೋದರಾದಲ್ಲಿ ಶಿಕ್ಷಣದ ಬಗ್ಗೆ ಸಂವಾದ ನಡೆಸಿದ್ದೇವೆ. ಬಿಜೆಪಿಯವರು ನಮಗೆ 13 ಹಾಲ್‌ಗಳನ್ನು ಸಿಗದಂತೆ ಮಾಡಿದ್ದಾರೆ. ಆಗ ನವನೀತ್ ಕಾಕಾ ಧೈರ್ಯವಾಗಿ ತಮ್ಮ ಸಭಾಂಗಣವನ್ನು ನಮಗೆ ನೀಡಿದ್ದರು. ನಿನ್ನೆ ಈ ಜನರು ಬುಲ್ಡೋಜರ್ ತೆಗೆದುಕೊಂಡು ನವನೀತ್ ಕಾಕಾ ಅವರ ಸಭಾಂಗಣವನ್ನು ಒಡೆಯಲು ಬಂದಿದ್ದರು. ಇದಕ್ಕಿಂತ ದೊಡ್ಡ ಅಪರಾಧ ಇನ್ನೇನಿದೆ? ಎಂದು ಕೇಜ್ರಿವಾಲ್ ಪ್ರಶ್ನಿಸಿದರು. ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

A group of people, mostly youths, greeted Delhi Chief Minister Arvind Kejriwal with chants of “Modi-Modi” outside Gujarat’s Vadodara airport as he landed earlier this week for a daylong campaign for his Aam Aadmi Party in the BJP-ruled state where polls are due later this year.