ಬಿಜೆಪಿ ಮುಖಂಡನ ರೆಸಾರ್ಟಿನಲ್ಲಿ ಹಿಂದೆಯೂ ಯುವತಿಯ ನಾಪತ್ತೆ ; ಗ್ರಾಮಸ್ಥರ ಆರೋಪ ಬೆನ್ನಲ್ಲೇ ತನಿಖೆಗೆ ಆದೇಶಿಸಿದ ಸಿಎಂ ಪುಷ್ಕರ್ ಸಿಂಗ್

25-09-22 07:30 pm       HK News Desk   ದೇಶ - ವಿದೇಶ

ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯ ನಡೆಸುತ್ತಿದ್ದ ರೆಸಾರ್ಟಿನಲ್ಲಿ ಯುವತಿಯ ಕೊಲೆ ಪ್ರಕರಣದ ಹಿನ್ನೆಲೆ ರಾಜ್ಯದಾದ್ಯಂತ ಪ್ರತಿಭಟನೆಯ ಕಿಚ್ಚು ಎದ್ದಿರುವಾಗಲೇ ಅದೇ ರೆಸಾರ್ಟಿನಲ್ಲಿ ಎಂಟು ತಿಂಗಳ ಹಿಂದೆ ಮತ್ತೊಬ್ಬ ಯುವತಿಯೂ ಕಾಣೆಯಾಗಿದ್ದಳು.

ಋಷಿಕೇಶ, ಸೆ.25: ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯ ನಡೆಸುತ್ತಿದ್ದ ರೆಸಾರ್ಟಿನಲ್ಲಿ ಯುವತಿಯ ಕೊಲೆ ಪ್ರಕರಣದ ಹಿನ್ನೆಲೆ ರಾಜ್ಯದಾದ್ಯಂತ ಪ್ರತಿಭಟನೆಯ ಕಿಚ್ಚು ಎದ್ದಿರುವಾಗಲೇ ಅದೇ ರೆಸಾರ್ಟಿನಲ್ಲಿ ಎಂಟು ತಿಂಗಳ ಹಿಂದೆ ಮತ್ತೊಬ್ಬ ಯುವತಿಯೂ ಕಾಣೆಯಾಗಿದ್ದಳು. ಆ ಪ್ರಕರಣವನ್ನು ಪುಲ್ಕಿತ್ ಆರ್ಯ ಪ್ರಭಾವ ಬಳಸಿ ಮುಚ್ಚಿ ಹಾಕಿದ್ದ ಎನ್ನುವ ಆರೋಪ ಕೇಳಿಬಂದಿದೆ.

ಈಗ ಕೊಲೆಯಾಗಿರುವ ಅಂಕಿತ್ ಭಂಡಾರಿ ವಾಸವಿದ್ದ ಪೌರಿ ಗ್ರಾಮದ್ದೇ ನಿವಾಸಿಯಾಗಿದ್ದ ಯುವತಿಯೊಬ್ಬಳು ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಆದರೆ ಮನೆಯವರು ಕೇಳಿದಾಗ ಪುಲ್ಕಿತ್ ಆರ್ಯ, ಆಕೆ ತನ್ನ ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದಾಳೆ, ಎಲ್ಲಿ ಹೋಗಿದ್ದಾಳೆಂದು ಗೊತ್ತಿಲ್ಲವೆಂದು ಹೇಳಿದ್ದ. ಆದರೆ ಈಗ ಯುವತಿ ಸಾವಿನ ಪ್ರಕರಣದಲ್ಲಿ ಇಡೀ ರಾಜ್ಯದಲ್ಲಿ ಪ್ರತಿಭಟನೆ ಶುರುವಾಗಿದ್ದು ಆಡಳಿತಾರೂಢ ಸರಕಾರದ ವಿರುದ್ಧವೇ ಜನರು ತಿರುಗಿ ಬಿದ್ದಿದ್ದಾರೆ.

Ankita Bhandari Case Live Updates: Last rites performed after family agrees  for cremation - The Times of India

Murdered Uttarakhand Teen's Family Asks Why Resort Was Razed, Seeks  Peaceful Cremation

ಇದೇ ಸಂದರ್ಭದಲ್ಲಿ ಹಳೆ ಪ್ರಕರಣವೂ ಎದ್ದು ಬಂದಿದ್ದು, ರಾಜ್ಯ ಸರಕಾರ ಆ ಪ್ರಕರಣದ ಬಗ್ಗೆಯೂ ತನಿಖೆ ನಡೆಸಲು ಆದೇಶ ಮಾಡಿದೆ. ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ರೆಸಾರ್ಟ್ ಮ್ಯಾನೇಜರ್ ಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ, ಯುವತಿಯನ್ನು ಗ್ರಾಹಕರಿಗೆ ವಿಶೇಷ ಸೇವೆ ನೀಡಲು ಒಪ್ಪದೇ ಇದ್ದುದಕ್ಕಾಗಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

Ankita Bhandari Case Live Updates: Last rites performed after family agrees  for cremation - The Times of India

Ankita Murder Case: अंकिता हत्याकांड पर उत्तराखंड में उबाल, श्रीनगर में  बद्रीनाथ-ऋषिकेश राजमार्ग जाम, मोर्चरी बिल्डिंग का घेराव - डाइनामाइट न्यूज़

ರಿಸೆಪ್ಶನಿಸ್ಟ್ ಆಗಿದ್ದ ಯುವತಿ ನಾಪತ್ತೆಯಾದ ಏಳು ದಿನಗಳ ಬಳಿಕ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದೇ ಸಂದರ್ಭದಲ್ಲಿ ಹಳೆಯ ಪ್ರಕರಣವನ್ನು ಕೆದಕಿರುವ ಗ್ರಾಮಸ್ಥರು, ಪುಲ್ಕಿತ್ ಆರ್ಯ ಬಗ್ಗೆಯೇ ಆರೋಪ ಮಾಡಿದ್ದಾರೆ. ಪುಲ್ಕಿತ್ ಇದೇ ರೀತಿಯ ಪ್ರವೃತ್ತಿ ಹೊಂದಿದ್ದ ವ್ಯಕ್ತಿ. ಈ ಹಿಂದೆಯೂ ಹಲವರಿಗೆ ಮೋಸ ಮಾಡಿದ್ದಾನೆ. ತನ್ನೊಂದಿಗೆ ಸಹಕರಿಸದವರನ್ನು ಸಂಬಳವನ್ನೂ ಕೊಡದೆ ಓಡಿಸಿದ್ದಾನೆ. ಕೆಲವರು ರೆಸಾರ್ಟಿನಲ್ಲಿ ಕೆಲಸಕ್ಕಿದ್ದವರು ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ಬಿಟ್ಟೋ ಭಂಡಾರಿ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದಾರೆ.

Uttarakhand Teen Murder Case LIVE: Father to Take Body for Last Rites; Massive  Protest Outside Srinagar Mortuary

Ankita Bhandari murder case: Uttarakhand CM assures no attempt to erase  evidence, top updates

ಈ ನಡುವೆ, ಅಂಕಿತಾ ಭಂಡಾರಿಯ ಪೋಸ್ಟ್ ಮಾರ್ಟಂ ಕುರಿತ ಪ್ರಾಥಮಿಕ ವರದಿ ಬಂದಿದ್ದು, ಸಾಯುವುದಕ್ಕೂ ಮುನ್ನ ಆಕೆಯ ಮೇಲೆ ಹಲ್ಲೆ ಮಾಡಲಾಗಿತ್ತು. ಆನಂತರ ಕಾಲುವೆ ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿತ್ತು ಎನ್ನುವ ವರದಿ ಇದೆ. ಶನಿವಾರ ಅಂಕಿತಾ ಕುಟುಂಬಸ್ಥರು, ಪೋಸ್ಟ್ ಮಾರ್ಟಂ ವರದಿ ಬಾರದೆ ಮೃತದೇಹದ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಭಾನುವಾರ ಪೋಸ್ಟ್ ಮಾರ್ಟಂ ಕುರಿತ ಪ್ರಾಥಮಿಕ ವರದಿ ಬಂದಿದ್ದು, ಅದರಂತೆ ಭಾನುವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಮನವಿ ಪರಿಗಣಿಸಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದಾರೆ. ಇದೇ ವೇಳೆ, ರಾಜ್ಯದ ಹಲವೆಡೆ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಯೂ ನಡೆದಿದೆ. 

Massive protest erupts outside mortuary in Srinagar, Pauri Garwhal dist, where Ankita Bhandari's father arrived to take her body for last rites She was allegedly murdered in Rishikesh by now expelled BJP leader Vinod Arya's son Pulkit Arya who was arrested yesterday. Watch the video and stay connected for more updates.