ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಕಣದಿಂದ ಹಿಂದಕ್ಕೆ ; ತರೂರ್- ದಿಗ್ವಿಜಯ್ ಸಿಂಗ್ ಮಧ್ಯೆ ನೇರ ಸೆಣಸಾಟ ಸಾಧ್ಯತೆ, ರಾಜಸ್ಥಾನ ಬಿಕ್ಕಟ್ಟು ಅಂತ್ಯ 

29-09-22 05:41 pm       HK News Desk   ದೇಶ - ವಿದೇಶ

ರಾಜಸ್ಥಾನ ರಾಜಕೀಯದಲ್ಲಿ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಕೊನೆಗೂ ಅಂತ್ಯ ಕಂಡಿದೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಹೇಳುವುದರೊಂದಿಗೆ ಗೊಂದಲಕ್ಕೆ ತೆರೆಬಿದ್ದಿದೆ.

ನವದೆಹಲಿ, ಸೆ.29: ರಾಜಸ್ಥಾನ ರಾಜಕೀಯದಲ್ಲಿ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಕೊನೆಗೂ ಅಂತ್ಯ ಕಂಡಿದೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಹೇಳುವುದರೊಂದಿಗೆ ಗೊಂದಲಕ್ಕೆ ತೆರೆಬಿದ್ದಿದೆ.

ಗೆಹ್ಲೋಟ್​ ಸಿಎಂ ಸ್ಥಾನ ತ್ಯಜಿಸಿದರೆ ಹೊಸ ಸಿಎಂ ಯಾರಾಗುತ್ತಾರೆಂಬ ವಿಚಾರದಲ್ಲಿ ಗೊಂದಲ ಎದ್ದಿತ್ತು. ಸಚಿನ್ ಪೈಲಟ್ ಸಿಎಂ ಆದಲ್ಲಿ ತಾವು ರಾಜಿನಾಮೆ ನೀಡುತ್ತೇವೆಂದು 90 ರಷ್ಟು ಶಾಸಕರು ಬೆದರಿಕೆ ಹಾಕಿದ್ದರು. ಇದರಿಂದ ಹೈಕಮಾಂಡ್​ ಕಡೆಯಿಂದ ಬಂದಿದ್ದ ವೀಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆಗೆ, ರಾಜಸ್ಥಾನ ಕಾಂಗ್ರೆಸ್​ ಇಬ್ಭಾಗವಾಗುವುದನ್ನು ತಪ್ಪಿಸಲು ಗೆಹ್ಲೋಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೇ ಹಿಂದೆ ಸರಿಯಲೇಬೇಕಾಗಿತ್ತು. 

Shashi Tharoor, Karti Chidambaram Among Five MPs To Seek Transparency,  Fairness In Congress President's Election

Congress race opens up: Digvijaya Singh in running, Ashok Gehlot heads to  Delhi | India News,The Indian Express

ಈಗೇನಿದ್ದರೂ ಸಂಸದರಾದ ಶಶಿ ತರೂರ್​ ಮತ್ತು ದಿಗ್ವಿಜಯ ಸಿಂಗ್​ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ ಎನ್ನಲಾಗುತ್ತಿದೆ. ಎರಡು ದಶಕಗಳ ಬಳಿಕ ಗಾಂಧಿಯೇತರ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದ್ದು ಮಧ್ಯೆ ಸೆಣಸಾಟ ಇರಲಿದೆ ಎಂದು ಸೆ.30 ರ ಸಂಜೆ ವೇಳೆಗೆ ಖಚಿತವಾಗಲಿದೆ. 

'ರಾಜಸ್ಥಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ರಾಜ್ಯದಲ್ಲಿ ನಡೆದ ಘಟನೆಗಳಿಂದ ನನಗೆ ತೀವ್ರ ನೋವಾಗಿದೆ. ಈ ನೋವನ್ನು ನನ್ನ ಜೀವನದ ಉದ್ದಕ್ಕೂ ನಾನು ಅನುಭವಿಸುತ್ತೇನೆ' ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಅಶೋಕ್​ ಗೆಹ್ಲೋಟ್ ಮಾಧ್ಯಮಗಳಿಗೆ ಹೇಳಿದ್ದಾರೆ. 

Self-obsessed govt hell-bent on trivialising freedom fighters' sacrifices: Sonia  Gandhi | India News – India TV

ಈ ನಡುವೆ ಶಶಿ ತರೂರ್​ ಟ್ವೀಟ್​ ಮಾಡಿದ್ದು, 'ನನ್ನದು ಮತ್ತು ದಿಗ್ವಿಜಯ ಸಿಂಗ್​ ಅವರ ನಡುವಿನದ್ದು ಪ್ರತಿಸ್ಪರ್ಧಿಗಳ ನಡುವೆ ನಡೆಯುವಂತಹ ಯುದ್ಧವಲ್ಲ. ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ ಅಷ್ಟೇ ಎಂಬುದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಯಾರೇ ಗೆದ್ದರೂ ಅದು ಭಾರತದ ಗೆಲುವಾಗಲಿದೆ' ಎಂದು ಹೇಳಿಕೊಂಡಿದ್ದು, ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಕೇರಳದಲ್ಲಿ ಶಶಿ ತರೂರ್​ ಅವರ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಸಿಡಿದೆದ್ದಿದ್ದು, ತಮಗೆ ರಾಹುಲ್​ ಗಾಂಧಿಯ ನಾಯಕತ್ವವೇ ಬೇಕು ಎಂದಿದ್ದಾರೆ.

Rajasthan Chief Minister Ashok Gehlot announced Thursday thathe will not contest the Congress presidential polls.After meeting party president Sonia Gandhi in New Delhi, Gehlot said that he apologised to Gandhi for the developments on Sunday when MLAs supporting him defied the high command and skipped the Congress Legislature Party (CLP). When asked if he will continue as chief minister, Gehlot said Sonia Gandhi would decide on the issue.