ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ; ಶಿಕ್ಷಣ ಕೇಂದ್ರದಲ್ಲಿದ್ದ ಹೆಣ್ಮಕ್ಕಳೇ ಟಾರ್ಗೆಟ್, 23 ಸಾವು ! 

30-09-22 05:02 pm       HK News Desk   ದೇಶ - ವಿದೇಶ

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಶಿಕ್ಷಣ ಕೇಂದ್ರದ ಆವರಣದಲ್ಲಿ ಬಾಂಬ್ ಸ್ಫೋಟ ಆಗಿದ್ದು 23 ಮಂದಿ ಸಾವನ್ನಪ್ಪಿದ್ದಾರೆ. 

ಕಾಬೂಲ್, ಸೆ.30 : ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಶಿಕ್ಷಣ ಕೇಂದ್ರದ ಆವರಣದಲ್ಲಿ ಬಾಂಬ್ ಸ್ಫೋಟ ಆಗಿದ್ದು 23 ಮಂದಿ ಸಾವನ್ನಪ್ಪಿದ್ದಾರೆ. 

ಕಾಬೂಲ್ ಬಳಿಯ ಕಾಜ್ ಎಜುಕೇಶನ್ ಸೆಂಟರ್ ನಲ್ಲಿ ಘಟನೆ ನಡೆದಿದೆ‌. ಮೃತಪಟ್ಟವರಲ್ಲಿ ಹೆಚ್ಚಿನವರು ಹದಿಹರೆಯದ ಹೆಣ್ಮಕ್ಕಳಿದ್ದಾರೆ. ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ 7.30ರ ವೇಳೆಗೆ ವಿದ್ಯಾರ್ಥಿಗಳು ಯುನಿವರ್ಸಿಟಿ ಅರ್ಹತಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿದ್ದಾನೆ. 23 ಮಂದಿ ಸಾವನ್ನಪ್ಪಿದ್ದು, 36 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.‌ 

Kabul, Afghanistan: At least 23 dead after suicide bomb blast at Kaaj educational  center | CNN

Kabul blast: 19 killed, 27 injured in suicide bombing at educational  institute | World News,The Indian Express

19 killed in suicide bombing at Kabul education centre, say cops - World  News

A suicide attack in an educational center in Kabul causes at least 19 deaths  | International | The USA Print - The USA Print

ಆತ್ಮಹತ್ಯಾ ಬಾಂಬ್ ದಾಳಿ ನಡೆಸಿರುವ ಗುಂಪು ಯಾರದ್ದು ಎನ್ನುವುದು ತಿಳಿದುಬಂದಿಲ್ಲ.‌ ಕಾಜ್ ಎಜುಕೇಶನ್ ಸೆಂಟರ್ ನಲ್ಲಿ ಹೆಚ್ಚಿನವರು ಹಜಾರಾ ಎನ್ನುವ ಮುಸ್ಲಿಮರಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಕಲಿಯುತ್ತಿದ್ದರು. ಹಜಾರಾ ಕಮ್ಯುನಿಟಿಯನ್ನು ಗುರಿಯಾಗಿಸಿ ಐಸಿಸ್ ಖೊರಸಾನ್ ಉಗ್ರರು ಈ ಹಿಂದೆಯೂ ದಾಳಿ ನಡೆಸಿದ್ದರು. ಅಫ್ಘಾನಿಸ್ತಾನ ಆಡಳಿತವು ಬಾಂಬ್ ದಾಳಿ ಘಟನೆಯನ್ನು ಖಂಡಿಸಿದ್ದು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಮೆರಿಕ ಕೂಡ ಘಟನೆಯನ್ನು ಖಂಡಿಸಿದ್ದು ವಿದ್ಯಾರ್ಥಿಗಳು ಕೊಠಡಿಯಲ್ಲಿರುವಾಗ ಅವರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸುವುದು ಅತ್ಯಂತ ಹೀನಾಯ ಮತ್ತು ಘೋರ ಕೃತ್ಯ ಎಂದು ಹೇಳಿದೆ.

A suicide bomb attack on an education center in Kabul has killed at least 23 people, most of whom are believed to be young women, in the latest sign of the deteriorating security situation in the Afghan capital.The explosion took place on Friday at the Kaaj education center, in a predominantly Hazara neighborhood – an ethnic minority group that has long faced oppression.Students were taking a practice university entrance exam at 7:30 a.m., local time (11 p.m. ET) when the blast first took place, Kabul Police Spokesman Khalid Zadran told CNN.