ಕಾಂಗ್ರೆಸ್ ಅಧ್ಯಕ್ಷ ಗಾದಿಯತ್ತ ಮಲ್ಲಿಕಾರ್ಜುನ ಖರ್ಗೆ ; ಲಕ್ಷ್ಮಣ ರೇಖೆ ಮೀರದ, ಗಾಂಧಿ ಕುಟುಂಬದ ನಿಷ್ಠನಿಗೆ ಒಲಿದುಬಂತೇ ಪಟ್ಟ?

30-09-22 06:32 pm       HK News Desk   ದೇಶ - ವಿದೇಶ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಮಧ್ಯೆ ನೇರ ಸ್ಪರ್ಧೆ ನಡೆಯುವುದು ಬಹುತೇಕ ಪಕ್ಕಾ ಆಗಿದೆ.

ನವದೆಹಲಿ, ಸೆ.30: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಮಧ್ಯೆ ನೇರ ಸ್ಪರ್ಧೆ ನಡೆಯುವುದು ಬಹುತೇಕ ಪಕ್ಕಾ ಆಗಿದೆ.

ಸೆ.30ರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಎರಡು ದಿನಗಳ ಹಿಂದೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮ ದಿನ ಸ್ಪರ್ಧಾ ಕಣಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಮುಂಚೂಣಿಯಲ್ಲಿ ಬಂದಿದ್ದು, ಗಾಂಧಿ ಪರಿವಾರದ ಕಡೆಯಿಂದ ಖರ್ಗೆ ಹೆಸರನ್ನು ಸೂಚಿಸಲಾಗಿದೆ. ಹಾಗಾಗಿ ಎಐಸಿಸಿ ಮತ್ತು ಗಾಂಧಿ ಪರಿವಾರದಿಂದ ಖರ್ಗೆ ಹೆಸರನ್ನು ಅಂತಿಮಗೊಳಿಸಿದ್ದು, ದಿಗ್ವಿಜಯ್ ಸಿಂಗ್ ಹೆಸರನ್ನು ಕೈಬಿಡಲಾಗಿದೆ. ಈಗಾಗಲೇ ಜಿ-23 ನಾಯಕರ ಕಡೆಯಿಂದ ಶಶಿ ತರೂರ್ ಅಭ್ಯರ್ಥಿಯಾಗುವುದು ಫೈನಲ್ ಆಗಿದ್ದು ಶುಕ್ರವಾರ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಸ್ಪರ್ಧಾ ಕಣದಲ್ಲಿ ತರೂರ್ ಮತ್ತು ಖರ್ಗೆ ನಡುವೆ ನೇರ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ. ಅ.10 ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು ಅವಿರೋಧ ಆಯ್ಕೆಯಾಗದಿದ್ದಲ್ಲಿ 17ರಂದು ಚುನಾವಣೆ ನಡೆಯಲಿದೆ.

Shashi Tharoor news: Tharoor backs petition seeking Congress president to  reform party

ತಳಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಖರ್ಗೆ ಹಾದಿ

ಮೊನ್ನೆ ಜುಲೈ 21ರಂದು 80ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಎಂಟು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿ ಸುದೀರ್ಘ ಅವಧಿಗೆ ರಾಜಕಾರಣದಲ್ಲಿದ್ದು, ಕಾಂಗ್ರೆಸ್ ಪಕ್ಷದ ಮತ್ತು ಗಾಂಧಿ ಕುಟುಂಬದ ಕಟ್ಟಾ ಅನುಯಾಯಿಯಾಗಿ ಬೆಳೆದುಬಂದವರು. 1969ರಲ್ಲಿ ಮೊದಲ ಬಾರಿಗೆ ಗುಲ್ಬರ್ಗ ನಗರ ಕಾಂಗ್ರೆಸ್ ಸೇರ್ಪಡೆ. 1972ರಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ತನ್ನ 27ರ ಹರೆಯದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲ ಅವಧಿಯಲ್ಲೇ ದಲಿತ ಹುಡುಗನ ಚಾತುರ್ಯ ನೋಡಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಖರ್ಗೆಗೆ ಸಚಿವ ಸ್ಥಾನ ಕೊಟ್ಟಿದ್ದರು. ಆನಂತರ, ನಿರಂತರ ಶಾಸಕರಾಗಿ ಆಯ್ಕೆಯಾಗಿದ್ದ ಖರ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಪ್ರತಿ ಬಾರಿಯೂ ಸಚಿವರಾಗಿದ್ದಾರೆ.

ಎಂಟು ಬಾರಿ ಶಾಸಕ, ಪ್ರತಿಬಾರಿ ಸಚಿವ !

ಎಸ್ಸೆಂ ಕೃಷ್ಣ, ಬಂಗಾರಪ್ಪ, ಎಂ.ವೈ, ಘೋರ್ಪಡೆ, ವೀರಪ್ಪ ಮೊಯ್ಲಿ, ಕೆಎಚ್ ರಂಗನಾಥ್ ಅವರಿಂದ ಹಿಡಿದು ಪ್ರತಿ ಮುಖ್ಯಮಂತ್ರಿಯ ಕಾಲದಲ್ಲಿಯೂ ಖರ್ಗೆ ಸಚಿವರಾಗಿದ್ದರು. ಆದರೆ, ತಾನು ಮಾತ್ರ ಮುಖ್ಯಮಂತ್ರಿಯಾಗಲು ಅವಕಾಶ ಸಿಕ್ಕಿರಲಿಲ್ಲ. 2008ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಸಿಎಂ ಅಭ್ಯರ್ಥಿಯೆಂದು ಬಿಂಬಿತವಾಗಿದ್ದರೂ, ಯಡಿಯೂರಪ್ಪ ನೇತೃತ್ವದ ಬಿಜೆಪಿ ವಿರುದ್ಧ ಸೋಲು ಕಂಡಿದ್ದರು. 2004ರಲ್ಲಿ ಬಿಜೆಪಿಯನ್ನು ದೂರ ಇಡುವುದಕ್ಕಾಗಿ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಸರಕಾರ ರಚಿಸಿತ್ತು. ಆಗಲೂ ಖರ್ಗೆ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಬೀದರ್ ಭಾಗದ ಸೋಲಿಲ್ಲದ ಸರದಾರ ಧರಂ ಸಿಂಗ್ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದರು. ಇದರಿಂದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ತೋರಿಸುವಂತೆ ಅವರ ಬೆಂಬಲಿಗರು ಸಲಹೆ ನೀಡಿದ್ದರು. ಆದರೆ ಖರ್ಗೆ ಹಾಗೆ ಮಾಡದೆ, ತಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ ಎನ್ನುತ್ತಲೇ ಗಾಂಧಿ ಪರಿವಾರಕ್ಕೆ ಬೆಂಬಲ ತೋರಿದ್ದರು.

Do not forget the 'dark period' of Emergency: PM Modi in 90th Mann ki Baat  address - India News

2014ರಲ್ಲಿ ಮೋದಿ ಪ್ರಧಾನಿಯಾದ ಸಂದರ್ಭದಲ್ಲಿ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ವಿಪಕ್ಷ ನಾಯಕರಾಗಿ ಕಾಂಗ್ರೆಸ್ ನೇಮಕ ಮಾಡಿತ್ತು. ಆನಂತರ, ಕಳೆದ ಅವಧಿಯಲ್ಲಿ ಖರ್ಗೆ ಸೋಲು ಕಂಡರೂ, ಅವರನ್ನು ರಾಜ್ಯಸಭೆಗೆ ತಂದು ಅಲ್ಲಿ ವಿಪಕ್ಷ ನಾಯಕರನ್ನಾಗಿ ಕಾಂಗ್ರೆಸ್ ಮಾಡಿದೆ. ಹೀಗಾಗಿ ಖರ್ಗೆ ಏನಿದ್ದರೂ, ಗಾಂಧಿ ಕುಟುಂಬದ ನಿಷ್ಠಾವಂತನಾಗಿಯೇ ಹಿಂದಿನಿಂದಲೂ ಬೆಳೆದು ಬಂದವರು. ಸಾಮಾನ್ಯ ಅಕ್ಕಿ ಮಿಲ್ ಕೆಲಸಗಾರನ ಮಗನಾಗಿದ್ದ ಖರ್ಗೆ, ಗುಲ್ಬರ್ಗದ ಹಳ್ಳಿಗಾಡಿನಿಂದ ಬಂದು ರಾಜಧಾನಿ ದೆಹಲಿಯಲ್ಲಿ ರಾಜಕಾರಣ ನಡೆಸಿದ್ದಲ್ಲದೆ, ಪಕ್ಷದ ಉತ್ತುಂಗದ ಸ್ಥಾನಕ್ಕೇರುವ ಹಂತಕ್ಕೆ ಹೋಗಿದ್ದಾರೆ. ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷರಾಗಬೇಕು ಎನ್ನುತ್ತಿದ್ದವರನ್ನು ಗಾಂಧಿ ಕುಟುಂಬ ತಾವೇ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯೆಂದು ಆಯ್ಕೆ ಮಾಡಿದ್ದು ವಿಶೇಷವೇ ಸರಿ. ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಕರ್ನಾಟಕದ ಮೊದಲ ವ್ಯಕ್ತಿ ಆ ಹುದ್ದೆಗೇರಿದ ಶ್ರೇಯವೂ ಖರ್ಗೆಗೆ ಸಿಗಲಿದೆ.

In a late but the most potent entry in the contest so far, senior Congress leader Mallikarjun Kharge filed the nomination to run for Congress president on Friday, setting up a clash of the titans against Thiruvananthapuram MP Shashi Tharoor.With Digvijaya Singh beating a retreat after announcing his candidature and Ashok Gehlot extricating himself after realising it would cost him Rajasthan chief ministership, the fog is lifting off the race to replace Sonia Gandhi. It’s Kharge versus Tharoor, and the former has the edge being the pick of the Gandhis.