ಭಾರತದಲ್ಲಿ 5ಜಿ ಸೇವೆಗೆ ಪ್ರಧಾನಿ ಮೋದಿ ಚಾಲನೆ, ಮೊದಲ ಹಂತದಲ್ಲಿ 13 ನಗರಗಳಲ್ಲಿ ಮಾತ್ರ ಸೇವೆ

01-10-22 03:48 pm       HK News Desk   ದೇಶ - ವಿದೇಶ

ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ವೇಗದ ಇಂಟರ್ನೆಟ್ 5ನೇ ತಲೆಮಾರಿನ ದೂರಸಂಪರ್ಕ ಸೇವೆಗೆ ಚಾಲನೆ ನೀಡಿದ್ದಾರೆ. ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ದೂರಸಂಪರ್ಕ ಸೇವೆಗಳಿಗೆ ಚಾಲನೆ ನೀಡಿದರು.

ನವದೆಹಲಿ, ಅ.1: ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ವೇಗದ ಇಂಟರ್ನೆಟ್ 5ನೇ ತಲೆಮಾರಿನ ದೂರಸಂಪರ್ಕ ಸೇವೆಗೆ ಚಾಲನೆ ನೀಡಿದ್ದಾರೆ. ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ದೂರಸಂಪರ್ಕ ಸೇವೆಗಳಿಗೆ ಚಾಲನೆ ನೀಡಿದರು.

ಮೊದಲ ಹಂತದಲ್ಲಿ ದೇಶದ ಎಂಟು ನಗರಗಳಲ್ಲಿ ಮಾತ್ರವೇ 5ಜಿ ಸೇವೆ ಲಭ್ಯವಾಗಲಿದೆ. ಆನಂತರ, ಎರಡು ವರ್ಷಗಳಲ್ಲಿ ದೇಶಾದ್ಯಂತ 5ಜಿ ಸೇವೆ ಜನರ ಕೈಗೆಟುಕಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಸದ್ಯ ಜಗತ್ತಿನ 75 ದೇಶಗಳ 1947 ನಗರಗಳಲ್ಲಿ 5ಜಿ ಸೇವೆ ಲಭ್ಯ ಇದೆ. ಈ ಪೈಕಿ ಟಾಪ್ ಟೆನ್ ದೇಶಗಳೆಂದರೆ ಚೀನಾ(356 ನಗರಗಳು), ಅಮೆರಿಕ(296 ನಗರ), ಫಿಲಿಪೈನ್ಸ್(98), ದಕ್ಷಿಣ ಕೊರಿಯಾ(85), ಕೆನಡಾ(84), ಸ್ಪೇನ್(71), ಇಟಲಿ(65), ಜರ್ಮನಿ(58), ಯುನೈಟೆಡ್ ಕಿಂಗ್ ಡಮ್(57) ಮತ್ತು ಸೌದಿ ಅರೇಬಿಯಾ(48).

This is not just India's decade, it is the century of India: PM Modi on 5G  launch

ಭಾರತದಲ್ಲಿ ಮುಕೇಶ್ ಅಂಬಾನಿ ಒಡೆತನದ ಜಿಯೋ, ಸುನಿಲ್ ಭಾರ್ತಿ ಮಾಲಕತ್ವದ ಏರ್ಟೆಲ್ ಮತ್ತು ವೊಡಾಫೋನ್- ಐಡಿಯಾ ಕಂಪನಿಗಳು 5ಜಿ ಸೇವೆ ಜಾರಿಗೆ ಮುಂದಾಗಿದ್ದು, ಅಗತ್ಯವಿರುವ ತರಂಗಾಂತರಗಳನ್ನು ಖರೀದಿಸಿವೆ. ಖಾಸಗಿ ನೆಟ್ವರ್ಕ್ ಸ್ಥಾಪಿಸಲು ಅಗತ್ಯವಿರುವ ತರಂಗಾಂತರಗಳನ್ನು ಅದಾನಿ ಕಂಪನಿ ಖರೀದಿಸಿದೆ. 5ಜಿ ಸೇವೆಯ ತರಂಗಾಂತರ ಮಾರಾಟದಿಂದ ಭಾರತ ಸರಕಾರಕ್ಕೆ ಒಂದೂವರೆ ಲಕ್ಷ ಕೋಟಿ ಆದಾಯ ಸಿಗಲಿದೆ.

India will lead industry revolution 4.0,' PM Modi says at 5G launch: Key  points - Times of India

ಮೊದಲಿಗೆ ದೇಶದ 13 ನಗರಗಳಲ್ಲಿ ಮಾತ್ರ 5ಜಿ ಸೇವೆ ಲಭ್ಯವಾಗಲಿದೆ. ಅವುಗಳೆಂದರೆ, ದೆಹಲಿ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಮುಂಬೈ, ಪುಣೆ, ಲಕ್ನೋ, ಚಂಡೀಗಢ, ಅಹ್ಮದಾಬಾದ್, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್ ಮತ್ತು ಜಾಮ್ ನಗರದಲ್ಲಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.

Prime Minister Narendra Modi on October 1, 2022 launched the 5G telephony services in the country, ushering in an era of ultra high-speed internet on mobile phones.Mr. Modi launched the 5G services in select cities at the IMC 2022 conference. The services will progressively cover the entire country over the next couple of years.Capable of supporting ultra-high-speed internet, the fifth generation or 5G service is expected to unleash new economic opportunities and societal benefits, serving as a transformational force for Indian society.