ಬ್ರೇಕಿಂಗ್ ನ್ಯೂಸ್
22-10-22 05:40 pm HK News Desk ದೇಶ - ವಿದೇಶ
ಲಂಡನ್, ಅ.22: ಆರ್ಥಿಕ ಬಿಕ್ಕಟ್ಟಿಗೆ ಮದ್ದರೆಯಲು ವಿಫಲಗೊಂಡು ಪ್ರಧಾನಿ ಸ್ಥಾನಕ್ಕೆ ಕೇವಲ 45 ದಿನಗಳಲ್ಲಿ ರಾಜಿನಾಮೆಯಿತ್ತ ಲಿಜ್ ಟ್ರಸ್ ಬಳಿಕ ಮುಂದಿನ ಪ್ರಧಾನಿ ಯಾರು ಅನ್ನೋದ್ರ ಬಗ್ಗೆ ಜಗತ್ತಿನ ರಾಷ್ಟ್ರಗಳು ಕುತೂಹಲದ ಕಣ್ಣು ಹರಿಸಿವೆ. ಅ.24ರಂದು ಮುಂದಿನ ಪ್ರಧಾನಿ ಸ್ಥಾನಕ್ಕೆ ಮೊದಲ ಹಂತದ ಆಯ್ಕೆಗೆ ಮತದಾನ ನಡೆಯಲಿದ್ದು, ಭಾರತ ಮೂಲದ ರಿಷಿ ಸುನಕ್ ರೇಸಿನಲ್ಲಿ ಮುಂದಿದ್ದಾರೆ. ಆದರೆ, ರಿಷಿ ಸುನಕ್ ಪರ ಗಾಳಿ ಬೀಸುತ್ತಿರುವಾಗಲೇ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ ಪೆನ್ನಿ ಮೋರ್ಡಾಂಟ್ ಫೀಲ್ಡಿಗಿಳಿದಿದ್ದು ಪ್ರಧಾನಿಯಾಗಲು ಕಸರತ್ತು ನಡೆಸಿದ್ದಾರೆ.
ಮೊದಲ ಸುತ್ತಿನಲ್ಲಿ ಆಯ್ಕೆಗೊಳ್ಳಲು ಪ್ರಧಾನಿ ಅಭ್ಯರ್ಥಿ ಕನಿಷ್ಠ ನೂರು ಸಂಸದರ ಮತಗಳನ್ನು ಹೊಂದಿರಬೇಕಾಗುತ್ತದೆ. ರಿಷಿ ಸುನಕ್ ಒಂದೂವರೆ ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ 120 ಮತಗಳನ್ನು ಪಡೆದಿದ್ದ ಕಾರಣ ಅವರೇ ರೇಸಿನಲ್ಲಿ ಮುಂದಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ರಿಷಿಯ ಭಾರತ ಮೂಲದ ವಿಚಾರವೇ ಕೊನೆಕ್ಷಣದಲ್ಲಿ ಮೈನಸ್ ಆಗಿತ್ತು. ಅದೇ ಕಾರಣಕ್ಕೆ ಈ ಬಾರಿಯೂ ರಿಷಿ ಪ್ರಧಾನಿಯಾಗುತ್ತಾರೆ ಎಂದು ಗಾಳಿ ಸುದ್ದಿ ಹಬ್ಬಿರುವಾಗಲೇ ತಾವೂ ಪ್ರಧಾನಿ ಸ್ಥಾನಕ್ಕೇರುತ್ತೇವೆಂದು ಕೆಲವು ಸಂಸದರು ಅಪಸ್ವರ ಎತ್ತಲಾರಂಭಿಸಿದ್ದಾರೆ.
ಬೋರಿಸ್ ಮರಳುವುದಕ್ಕೆ ಸಂಸದರಲ್ಲೇ ವಿರೋಧ
ಸದ್ಯಕ್ಕೆ 22 ಸಂಸದರು ಪೆನ್ನಿ ಮೋರ್ಡಾಂಟ್ ಪರ ಬ್ಯಾಟಿಂಗ್ ಮಾಡಿದ್ದರೆ, ಬೋರಿಸ್ ಜಾನ್ಸನ್ ಪರವಾಗಿ 48 ಸಂಸದರು ಕೈ ಎತ್ತಿದ್ದಾರೆ ಎನ್ನಲಾಗುತ್ತಿದೆ. ಟೋರಿ ಪಕ್ಷದಲ್ಲಿ 357 ಸಂಸದರು ಸಂಸತ್ತಿನಲ್ಲಿದ್ದು, ಕನಿಷ್ಠ ಮೂರು ಮಂದಿ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿದೆ. ಬೋರಿಸ್ ಜಾನ್ಸನ್ ಪರವಾಗಿ ಆರು ಕ್ಯಾಬಿನೆಟ್ ಸಚಿವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಒಂದಷ್ಟು ಸಂಸದರು ಬೋರಿಸ್ ಮರಳುತ್ತಿರುವುದಕ್ಕೆ ಅದೊಂದು ಸಾವಿನ ಸುರುಳಿ ಎಂದು ಮೂದಲಿಸಿದ್ದಾರೆ. ಬೋರಿಸ್ ಕಳೆದ ಬಾರಿ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿದ್ದರು. ಅಲ್ಲದೆ, ಅದೇ ಆರೋಪದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವಂತಾಗಿತ್ತು. ಪ್ರಕರಣ ಸಂಸತ್ತಿನಲ್ಲಿ ತನಿಖಾ ಹಂತದಲ್ಲಿದ್ದು ಆನಂತರ ಸಂಸತ್ತಿಗೆ ಸುಳ್ಳು ಮಾಹಿತಿ ನೀಡಿದ ಆರೋಪಕ್ಕೂ ಒಳಗಾಗಿದ್ದರು. ಸಂಸತ್ತಿನಲ್ಲಿ ಆರೋಪ ಸಾಬೀತಾದರೆ, ಬೋರಿಸ್ ಪ್ರಧಾನಿಯಾದರೂ ಮತ್ತೆ ರಾಜಿನಾಮೆ ನೀಡಬೇಕಾಗುತ್ತದೆ. ಹೀಗಾಗಿ ಬೋರಿಸ್ ಮರಳುವುದಕ್ಕೆ ಹಲವರ ವಿರೋಧವೂ ಇದೆ.
ಸೋಮವಾರ ನಡೆಯುವ ಪಾರ್ಟಿ ಸಂಸದರ ಚುನಾವಣೆಯಲ್ಲಿ ನೂರಕ್ಕಿಂತ ಹೆಚ್ಚು ಪಡೆದವರನ್ನು ವಿಜಯಿ ಎಂದು ತೀರ್ಮಾನಿಸಲಾಗುತ್ತದೆ. ಆದರೆ ಮೂರು ಅಭ್ಯರ್ಥಿಗಳು ನೂರು ಸ್ಥಾನದ ಗಡಿ ದಾಟಿದರೆ, ಚುನಾವಣೆ ಸಂದರ್ಭದಲ್ಲಿಯೇ ಕಡಿಮೆ ಸ್ಥಾನ ಪಡೆದ ಒಬ್ಬರನ್ನು ಬದಿಗೆ ಸರಿಸಲಾಗುತ್ತದೆ. ಆನಂತರ, ಇಬ್ಬರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟು ಪ್ರಧಾನಿ ಆಯ್ಕೆ ನಡೆಯಲಿದೆ. ಅ.28ರ ವೇಳೆಗೆ ಹೊಸ ಪ್ರಧಾನಿ ಆಯ್ಕೆ ಆಗಲಿದೆ. ಅದರೊಂದಿಗೆ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬಂದು ಐದು ವರ್ಷಗಳಲ್ಲಿ ಆರನೇ ವ್ಯಕ್ತಿ ಪ್ರಧಾನಿ ಸ್ಥಾನಕ್ಕೇರಿದಂತಾಗುತ್ತದೆ.
ತೆರಿಗೆ ಕಡಿತ ಘೋಷಿಸಿ ಪದವಿ ತೊರೆದಿದ್ದ ಟ್ರಸ್
ಲಿಜ್ ಟ್ರಸ್ ಮೊನ್ನೆ ರಾಜಿನಾಮೆ ನೀಡಿದ್ದ ಬಳಿಕ ಕಳೆದ ಬಾರಿ ಪೈಪೋಟಿ ನೀಡಿದ್ದ ರಿಷಿ ಸುನಕ್ ಅವರೇ ಪ್ರಧಾನಿ ಸ್ಥಾನಕ್ಕೇರಬೇಕಿತ್ತು. ಆದರೆ ಬ್ರಿಟನ್ ಸಂಸದರ ಒಳಗಿನ ವೈಮನಸ್ಸು, ಭಾರತದಲ್ಲಿ ಸೋನಿಯಾಗೆ ಎದುರಾದ ರೀತಿಯಲ್ಲೇ ವಿದೇಶಿ ಮೂಲದ ವಿಚಾರ ರಿಷಿ ಸುನಕ್ ಪಾಲಿಗೆ ಮೈನಸ್ ಆಗುತ್ತಿದೆ. ಇದಕ್ಕಾಗಿ ಕೆಲವರು ಅಪಸ್ವರ ತೆಗೆದು ರಿಷಿ ಪರವಾಗಿರುವ ಅಲೆಯನ್ನು ಹಿಂದಕ್ಕಟ್ಟುತ್ತಿದ್ದಾರೆ. ನೂತನ ಪ್ರಧಾನಿಯಾಗಿದ್ದ ಲಿಟ್ ಟ್ರಸ್ ಇತ್ತೀಚೆಗೆ ಮಿನಿ ಬಜೆಟ್, ದೇಶದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ತೆರಿಗೆ ಕಡಿತದ ನಿರ್ಧಾರ ಘೋಷಿಸಿದ್ದರು. ಈ ವಿಚಾರದಲ್ಲಿ ಕ್ಯಾಬಿನೆಟ್ ಸಚಿವರ ಒಳಗೆ ಸಹಮತ ಬರಲಾಗದೆ ರಾಜಿನಾಮೆ ನೀಡಿದ್ದರು. ರಿಷ್ ಸುನಕ್ ಕೂಡ ಆರ್ಥಿಕ ಬಿಕ್ಕಟ್ಟಿಗೆ ತೆರಿಗೆ ಕಡಿತ ಮಾಡುವುದಕ್ಕೆ ವಿರೋಧ ಸೂಚಿಸಿದ್ದರು. ಅದರಿಂದ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಅಧೋಗತಿಗೆ ಇಳಿಯುತ್ತೆ ಎಂದಿದ್ದರು. ಈ ಹಿಂದೆ ಹಣಕಾಸು ಸಚಿವರಾಗಿದ್ದ ರಿಷಿ, ಆರ್ಥಿಕ ಸ್ಥಿತಿಗತಿ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಹೊಂದಿದ್ದರು.
Days after UK Prime Minister Liz Truss stepped down after a series of policy U-turns, Cabinet upheavals and an open revolt against her ability to lead a deeply divided Conservative Party, Penny Mordaunt officially launched her leadership bid saying she had been encouraged by support from her colleagues.Mordaunt, the former defence secretary, is among the hardcore pro-Brexit MPs who was in the race to replace Boris Johnson but lost out to Rishi Sunak and Liz Truss in the PM race.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm