ಕಾರ್ಪೊರೇಷನ್ನಿಗೂ ಮೋದಿ ಹೆಸರಲ್ಲಿ ಮತ ಕೇಳುತ್ತೀರಿ, ಮೋದಿಗೇನು 100 ತಲೆಗಳಿವೆಯೇ ? ಖರ್ಗೆ ಪ್ರಶ್ನೆ 

29-11-22 07:52 pm       HK News Desk   ದೇಶ - ವಿದೇಶ

ಗುಜರಾತ್ ವಿಧಾನಸಭಾ ಚುನಾವಣೆಗೆ ಎರಡು ದಿನ ಇರುವಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ. 

ಅಹ್ಮದಾಬಾದ್, ನ.29: ಗುಜರಾತ್ ವಿಧಾನಸಭಾ ಚುನಾವಣೆಗೆ ಎರಡು ದಿನ ಇರುವಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ. 

ಅಹಮದಾಬಾದ್ನಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿ ತಮ್ಮ ಕೆಲಸವನ್ನು ಮರೆತು, ಕಾರ್ಪೊರೇಷನ್ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಪ್ರಚಾರ ಮಾಡುತ್ತಾರೆ ಮತ್ತು ತಮ್ಮ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ಆದರೆ ನಾವು ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬೇಕು? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ.  

The Raavan | Facebook

PM modi Covid meeting: PM Narendra Modi interacts with CMs over Covid  situation - The Economic Times

ನೀವು ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ನಾನು ನೋಡಿದ್ದೇನೆ, ಕಾರ್ಪೊರೇಷನ್ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ ನಿಮ್ಮ ಅಭ್ಯರ್ಥಿಯ ಹೆಸರಿನಲ್ಲಿ ಮತ ಕೇಳಿ. ಮೋದಿ ಅವರು ಪುರಸಭೆಗೆ ಬಂದು ಕೆಲಸ ಮಾಡುತ್ತಾರೆಯೇ? ನಿಮ್ಮ ಕಷ್ಟದ ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆಯೇ? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.

Bhupendra Patel elected new Chief Minister of Gujarat - The Hindu

ಖರ್ಗೆ ಅವರ "ರಾವಣ" ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, ಯಾವುದೇ ಅಭಿವೃದ್ಧಿ ಅಜೆಂಡಾ ಮತ್ತು ಜನರ ಬೆಂಬಲವಿಲ್ಲದೆ, ಕಾಂಗ್ರೆಸ್ ಗುಜರಾತ್ ಮತ್ತು ಗುಜರಾತಿಗಳನ್ನು ನಿಂದಿಸಲು ಹೊರಟಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ವಿರುದ್ಧ ಖರ್ಗೆ ಅವರು ನೀಡಿದ ಹೇಳಿಕೆ ಸಾಕ್ಷಿಯಾಗಿದೆ. ಗುಜರಾತಿಗಳ ಮೇಲಿನ ಅವರ ದ್ವೇಷಕ್ಕೆ ಇದು ಸಾಕ್ಷಿ. ಗುಜರಾತ್ ಜನರು ಈ ಬಾರಿಯೂ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ. 

ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ಗುಜರಾತ್ನಲ್ಲಿ 182 ಸದಸ್ಯ ಬಲದ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿ.1 ರ‌ ಚುನಾವಣೆ ನಡೆಯುವ ಪ್ರದೇಶದಲ್ಲಿ ಕೊನೆಯ ದಿನದ ಪ್ರಚಾರ ಇಂದಿಗೆ ಕೊನೆಯಾಗಿದೆ.‌

A fresh political row has erupted after Congress president Mallikarjun Kharge's 'Ravan' remark about prime minister Narendra Modi. The Congress veteran made the remarks during a campaign rally in Ahmedabad on Monday, days before the Gujarat Assembly election.