ಬ್ರೇಕಿಂಗ್ ನ್ಯೂಸ್
15-10-20 02:01 pm Headline Karnataka News Network ದೇಶ - ವಿದೇಶ
ಭುವನೇಶ್ವರ , ಅಕ್ಟೋಬರ್ 15: ಮದುವೆಯ ದಿನ ಸಾವಿರಾರು ಜನರನ್ನು ಕರೆಸಿ ವಧು ವರರಿಗೆ ಆಶೀರ್ವದಿಸುವ ಜೊತೆಗೆ ಆಹ್ವಾನಿತರಿಗೆ ಭೋಜನದ ವ್ಯವಸ್ಥೆ ಮಾಡುವುದು ಭಾರತೀಯ ಸಂಪ್ರದಾಯ.ಆದರೆ ಒಡಿಶಾದ ಈ ಜೋಡಿಯೊಂದು ತಮ್ಮ ಮದುವೆ ದಿನದಂದು 500 ಕ್ಕೂ ಹೆಚ್ಚು ಶ್ವಾನಗಳಿಗೆ ಊಟ ಹಾಕುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಸೆಪ್ಟೆಂಬರ್ 25ರಂದು ಭುವನೇಶ್ವರದ ಟ್ಯಾಂಗಿ ಬಳಿಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಇದೇ ದಿನದಂದು ಪ್ರಾಣಿ ಸಂರಕ್ಷಣಾ ಸಂಸ್ಥೆಯ ಸಹಾಯದಿಂದ ನಗರದ ಸುಮಾರು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿದ್ದಾರೆ.
ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡಗೆಯನ್ನು ನೀಡಬೇಕು ಎಂಬುದು ಇಬ್ಬರ ತೀರ್ಮಾನವಾಗಿತ್ತು, ಹಾಗಾಗಿ ನಾವು ಪ್ರಾಣಿ ಸಂರಕ್ಷಣಾ ಸಂಸ್ಥೆಯ(ಎಡಬ್ಲ್ಯೂಟಿಇ) ಸಂಸ್ಥಾಪಕಿ ಪೂರ್ವಿ ಅವರೊಂದಿಗೆ ಭುವನೇಶ್ವರದಾದ್ಯಂತ ಸುಮಾರು 500ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಹಾರ ನೀಡಲು ನಿರ್ಧರಿಸಿದೆವು, ಎಂದು ಜೋವಾನ್ನಾ ವಾಂಗ್ ತಿಳಿಸಿದ್ದಾರೆ.
ಎಡಬ್ಲ್ಯೂಟಿಇನಿಂದ ಮಾಡಲ್ಪಟ್ಟ ಕೆಲಸದಿಂದ ಅವರು ಸ್ಫೂರ್ತಿ ಪಡೆದಿದ್ದು, ಹೀಗಾಗಿ ದಂಪತಿ ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದರು. ಪ್ರತಿಯೊಬ್ಬರೂ ಆಪ್ತಾ ಮತ್ತು ವಾಂಗ್‍ನಂತೆಯೇ ಯೋಚಿಸಲು ಪ್ರಾರಂಭಿಸಿದರೆ, ಈ ಜಗತ್ತಿನಲ್ಲಿ ಒಂದು ಬದಲಾವಣೆ ಸಂಭವಿಸುತ್ತದೆ. ಅಲ್ಲದೆ ಅದು ಅನೇಕ ಪ್ರಾಣಿಗಳ ಜೀವ ಉಳಿಸುವಂತಹ ಕೆಲಸವಾಗುತ್ತದೆ. ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Newlywed couple from Odisha feeds 500 stray dogs to celebrate their wedding. Eureka Apta and Joanna Wang got married on Sep 25 but their wedding treat was for stray dogs.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm