ಮಕ್ಕಳ ಮೇಲಿನ ದೌರ್ಜನ್ಯ ; ದೇಶದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೂರನೇ ಸ್ಥಾನ !

16-10-20 10:31 am       Headline Karnataka News Network   ದೇಶ - ವಿದೇಶ

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಸಂಸ್ಥೆ 2019 ರ ವರ್ಷದಲ್ಲಿ ಸಂಭವಿಸಿದ ಅಪರಾಧಗಳ ಕ್ರೋಢಿಕೃತ ವರದಿ ನೀಡಿದ್ದು, ಈ ಪಟ್ಟಿಯಲ್ಲಿ ದೆಹಲಿ ಮೊದಲನೇ ಸ್ಥಾನದಲ್ಲಿದ್ದರೆ, ಬೆಂಗಳೂರಿಗೆ ಮೂರನೇ ಸ್ಥಾನದಲ್ಲಿದೆ.

ಬೆಂಗಳೂರು, ಅಕ್ಟೋಬರ್ 16: ಭಾರತದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದೆಹಲಿ ಮೊದಲನೇ ಸ್ಥಾನದಲ್ಲಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಸಂಸ್ಥೆ 2019 ರ ವರ್ಷದಲ್ಲಿ ಭಾರತದ 19 ಮಹಾನಗರಗಳಲ್ಲಿ ಸಂಭವಿಸಿದ ಅಪರಾಧಗಳ ಕ್ರೋಢಿಕೃತ ವರದಿ ನೀಡಿದ್ದು, ಈ ಪಟ್ಟಿಯಲ್ಲಿ ರಾಷ್ಟ್ರರಾಜಧಾನಿ ದೆಹಲಿ ಮೊದಲನೇ ಸ್ಥಾನದಲ್ಲಿದ್ದರೆ, ಮುಂಬೈ 2ನೇ ಸ್ಥಾನ, ಬೆಂಗಳೂರಿಗೆ ಮೂರನೇ ಸ್ಥಾನ ಲಭಿಸಿದ್ದು, ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ಹೆಚ್ಚಿಸಿದೆ.

ಎನ್ ಸಿಆರ್ ಬಿ ವರದಿ ಪ್ರಕಾರ, ದೆಹಲಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಸಂಖ್ಯೆ 7565 ಇದ್ದರೆ, ಮುಂಬೈನಲ್ಲಿ 3640 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 1488 ಪ್ರಕರಣಗಳು ದಾಖಲಾಗಿವೆ.

2017 ರಲ್ಲಿ ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 1582 ರಷ್ಟಿತ್ತು, 2018 ರಲ್ಲಿ ಈ ಸಂಖ್ಯೆ 1815 ಕ್ಕೆ ಏರಿಕೆಯಾಗಿತ್ತು, 2019 ರಲ್ಲಿ ಬೆಂಗಳೂರಿನಲ್ಲಿ ಮಕ್ಕಳ ವಿರುದ್ಧ ನಡೆದ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ 1488 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲಿ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆಯುವ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಲಭಿಸಿದೆ.