ಶೌರ್ಯಚಕ್ರ ವಿಜೇತ ಮಾಜಿ ಯೋಧನನ್ನು ಗುಂಡಿಕ್ಕಿ ಹತ್ಯೆ

16-10-20 05:02 pm       Headline Karnataka News Network   ದೇಶ - ವಿದೇಶ

ಮಾಜಿ ಯೋಧ ಬಲ್ವಿಂದರ್ ಸಿಂಗ್‌ರನ್ನು ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡ ಶುಕ್ರವಾರ ಗುಂಡಿಕ್ಕಿ ಸಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂಡಿಗಡ, ಅಕ್ಟೋಬರ್ 16 : ಶೌರ್ಯ ಪ್ರಶಸ್ತಿ ವಿಜೇತ ಮಾಜಿ ಯೋಧ ಬಲ್ವಿಂದರ್ ಸಿಂಗ್‌ರನ್ನು ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡ ಶುಕ್ರವಾರ ಗುಂಡಿಕ್ಕಿ ಸಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಭಿಖಿವಿಂದ್ ಗ್ರಾಮದಲ್ಲಿ ಬಲ್ವಿಂದರ್ ಸಿಂಗ್ ತಮ್ಮ ಮನೆ ಸಮೀಪದ ಕಚೇರಿಯಲ್ಲಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಯೋಧ ಬಲ್ವಿಂದರ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

62 ವರ್ಷದ ಸಿಂಗ್ ಅವರು ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ಧೈರ್ಯದಿಂದ ಹೋರಾಡಿ ಅವರನ್ನು ಸದೆಬಡಿದಿದ್ದರು. ಇದೇ ಕಾರಣಕ್ಕೆ ಅವರ ಸಾಧನೆಯನ್ನು ಗೌರವಿಸಿ 1993ರಲ್ಲಿ ಕೇಂದ್ರ ಸರಕಾರ ದೇಶದ ಅತ್ಯುನ್ನತ ಗೌರವವಾದ ಶೌರ್ಯ ಚಕ್ರ ಪ್ರಶಸ್ತಿ ನೀಡಿತ್ತು.