ವಾಯುಪಡೆ ಬತ್ತಳಿಕೆ ಸೇರಲಿದೆ ಮತ್ತೆ ನಾಲ್ಕು ರಫೇಲ್ ಜೆಟ್ !

16-10-20 10:15 pm       Headline Karnataka News Network   ದೇಶ - ವಿದೇಶ

ನವೆಂಬರ್ ಮೊದಲ ವಾರದಲ್ಲಿ ಹರಿಯಾಣದ ಅಂಬಲಾ ವಾಯುನೆಲೆಗೆ ನಾಲ್ಕು ರಫೇಲ್ ಯುದ್ಧ ವಿಮಾನಗಳ ಆಗಮನವಾಗಲಿದ್ದು ಭಾರತೀಯ ವಾಯುಪಡೆಯ ಸಾಮರ್ಥ್ಯ ಮತ್ತಷ್ಟು ಪ್ರಬಲವಾಗಲಿದೆ.

ನವದೆಹಲಿ, ಅಕ್ಟೋಬರ್ 16: ಭಾರತೀಯ ವಾಯುಪಡೆಯು (ಐಎಎಫ್‌) ಎರಡನೇ ಹಂತದಲ್ಲಿ ನಾಲ್ಕು ರಫೇಲ್ ಜೆಟ್​ ಯುದ್ಧ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳುವ ತಯಾರಿಯಲ್ಲಿದ್ದು, ಈಗಾಗಲೇ ಫ್ರಾನ್ಸ್‌ಗೆ ತಂಡವನ್ನು ಕಳುಹಿಸಿದೆ.

ಫ್ರಾನ್ಸ್‌ನ ಫೈಟರ್ ಜೆಟ್ ರಾಫೆಲ್ ಒಪ್ಪಂದದಡಿಯಲ್ಲಿ ಮೊದಲ ಬ್ಯಾಚಿನ ವಿಮಾನಗಳು ಜುಲೈ 29ಕ್ಕೆ ಭಾರತಕ್ಕೆ ಆಗಮಿಸಿದ್ದು, ಸೆಪ್ಟೆಂಬರ್​ 10ರಂದು ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತ್ತು.

ಎರಡನೇ ಬ್ಯಾಚಿನ ಯುದ್ಧ ವಿಮಾನಗಳನ್ನು ಸ್ವೀಕರಿಸಲು ಅಗತ್ಯ ಸಿದ್ಧತೆ ನಡೆದಿದ್ದು ಪ್ರಾಜೆಕ್ಟ್​ ನ ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ ನೇತೃತ್ವದ ಪರಿಣತರ ತಂಡ ಫ್ರಾನ್ಸ್​ಗೆ ತೆರಳಿದೆ. ವಾಯುಪಡೆಯ ಪೈಲಟ್​ಗಳಿಗೆ ಬ್ಯಾಚ್​ಗಳಲ್ಲಿ ಫ್ರಾನ್ಸ್​ನ ಸೇಂಟ್ ಡಿಝಿಯೆರ್ ವಾಯುನೆಲೆಯಲ್ಲಿ ತರಬೇತಿ ಒದಗಿಸಲಾಗುತ್ತಿದೆ.

ಇದರೊಂದಿಗೆ ಭಾರತೀಯ ವಾಯುಪಡೆಗೆ 9 ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾದಂತಾಗಿದೆ.   ಮೊದಲ ಬ್ಯಾಚ್ ನಲ್ಲಿ ಬಂದ ರಫೇಲ್‌ ಯುದ್ಧ ವಿಮಾನಗಳನ್ನು ಲಡಾಖ್‌ನಲ್ಲಿ ನಿಯೋಜಿಸಲಾಗಿದೆ.

Amid the ongoing China border conflict, Indian Air Force's (IAF) offensive capabilities will get a boost as 3-4 Rafale fighter jets would be arriving at the Ambala air base in Haryana by the first week of November.