ಬ್ರೇಕಿಂಗ್ ನ್ಯೂಸ್
17-10-20 07:29 am Headline Karnataka News Network ದೇಶ - ವಿದೇಶ
ಜಮ್ಮು-ಕಾಶ್ಮೀರ, ಅಕ್ಟೋಬರ್ .17 : ಜಮ್ಮು ಕಾಶ್ಮೀರದಲ್ಲಿ ಜನರು ಉಗ್ರರ ಸಖ್ಯ ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ಸರಕಾರದ ಜೊತೆ ಕೈಜೋಡಿಸಬೇಕೆಂದು ಅಲ್ಲಿ ಅಭಿಯಾನಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿಯೇ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಭಯೋತ್ಪಾದಕನ ಮಗನೊಬ್ಬ ಮುಖ್ಯ ವಾಹಿನಿಗೆ ಬಂದು ಕೆಎಎಸ್ ಅಧಿಕಾರಿಯಾಗುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.
ಜಮ್ಮ-ಕಾಶ್ಮೀರದ ದೋಡಾ ಜಿಲ್ಲೆಯ ಗುಂಡ್ನಾ ಗ್ರಾಮ ಎಂದರೆ ಹಿಂದೆ ಭಯೋತ್ಪಾದಕರೇ ತುಂಬಿಕೊಂಡಿದ್ದ ಪ್ರದೇಶವಾಗಿತ್ತು. ಇದೇ ಏರಿಯಾದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಹಲವು ಉಗ್ರರು ಸಾವಿಗೀಡಾಗಿದ್ದರು. ಈ ಪೈಕಿ ಒಬ್ಬ ಉಗ್ರನ ಪುತ್ರ ಅಬ್ದುಲ್ಲಾ ಎಂಬಾತನನ್ನು ಶ್ರೀನಗರದ ಅನಾಥಾಶ್ರಮದಲ್ಲಿ ಬೆಳಸಲಾಗಿತ್ತು. ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತು ಸೇನಾಧಿಕಾರಿಗಳ ಪ್ರೋತ್ಸಾಹ ಪಡೆದ ಯುವಕ ಈಗ ಸರಕಾರದ ಕೆಎಎಸ್ ಎಕ್ಸಾಂ ಬರೆದು ಅಧಿಕಾರಿಯಾಗಿದ್ದಾನೆ.
ಆಲಿಗಢ ಮುಸ್ಲಿಂ ವಿವಿಯಲ್ಲಿ ಪದವಿ ಪಡೆದಿದ್ದ ಅಬ್ದುಲ್ಲಾ ಕೆಎಎಸ್ ಪಾಸ್ ಮಾಡಿದ್ದು ಜಮ್ಮು ಕಾಶ್ಮೀರದಲ್ಲಿ ಇತರೇ ಮಂದಿಗೆ ದೊಡ್ಡ ಪ್ರೇರಣೆಯಾಗಲಿದೆ ಎನ್ನಲಾಗುತ್ತಿದೆ. ಈತನ ಸಾಧನೆಯಿಂದ ಉತ್ತೇಜಿತರಾದ ಭಾರತೀಯ ಸೇನೆ ಕಾರ್ಯಕ್ರಮ ಹಮ್ಮಿಕೊಂಡು ಅಬ್ದುಲ್ಲಾ ಅವರನ್ನು ವಿಶೇಷವಾಗಿ ಸನ್ಮಾನಿಸಿ, ಕಾಶ್ಮೀರದ ಯುವಜನರು ಸರಕಾರಿ ಅಧಿಕಾರಿಯಾಗಲು ಮುಂದೆ ಬರುವಂತೆ ಕರೆ ನೀಡಿದೆ.
ಇದೆ ವೇಳೆ ಮಾತನಾಡಿದ ಅಬ್ದುಲ್ಲಾ, ಬಾಲ್ಯದಿಂದಲೂ ತುಂಬ ಸವಾಲುಗಳನ್ನು ಮೆಟ್ಟಿಕೊಂಡು ಮುಂದೆ ಬಂದಿದ್ದೇನೆ. ಕಷ್ಟಗಳು ಎದುರಾದರೂ, ಅಧಿಕಾರಿ ಆಗಬೇಕೆಂಬ ಗುರಿಯನ್ನು ಬಿಟ್ಟು ಕೊಡಲಿಲ್ಲ. ಉಗ್ರವಾದದಿಂದ ಮುಕ್ತವಾದ ಪ್ರದೇಶಗಳಲ್ಲಿ ಯುವ ಜನಾಂಗಕ್ಕೆ ಸಾಕಷ್ಟು ಅವಕಾಶಗಳಿದ್ದು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಠಿಣ ಪರಿಶ್ರಮ ಹೇಗೆ ವ್ಯಕ್ತಿಯ ಜೀವನವನ್ನು ಬದಲಿಸಬಹುದು ಎಂಬುದಕ್ಕೆ ಘಾಜಿ ಅಬ್ದುಲ್ಲಾ ಉತ್ತಮ ಉದಾಹರಣೆ ಎಂದು ಸೇನಾ ವಕ್ತಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm