ಬ್ರೇಕಿಂಗ್ ನ್ಯೂಸ್
17-10-20 06:10 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 17: ಸಾಮಾನ್ಯವಾಗಿ ಆನ್ ಲೈನ್ ಮಾರ್ಕೆಟ್ ನಲ್ಲಿ ಒಮ್ಮೆ ಕಳಕೊಂಡ ವಸ್ತುವನ್ನು ಮರಳಿ ಪಡೆಯೋದು ತುಂಬ ಕಷ್ಟದ ಕೆಲಸ. ಆದರೆ, ಇಲ್ಲೊಬ್ಬ ಅಮೆಜಾನ್ ಮುಖ್ಯಸ್ಥನಿಗೇ ಮೈಲ್ ಹಾಕಿ ತನ್ನ ಕಳವಾದ ವಸ್ತುವನ್ನು ಮರಳಿ ಪಡೆದಿದ್ದಾನೆ.
ಮುಂಬೈ ನಿವಾಸಿ ಓಂಕಾರ್ ಹನ್ಮಾಂಟೆ, ಅಮೆಜಾನ್ ಮೂಲಕ ತನ್ನ ಅಜ್ಜಿಗೆ ಫೋನ್ ಒಂದನ್ನು ಖರೀದಿಸಿದ್ದರು. ಆದರೆ ಫೋನ್ ಅವರ ಕೈ ಸೇರದೆ ವಿತರಣೆ ಮಾಡುವ ಯುವಕನ ಅಜಾಗರೂಕತೆಯಿಂದ ಫೋನ್ ಕಳವಾಗಿತ್ತು. ಈ ಬಗ್ಗೆ ಅಮೆಜಾನ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಓಂಕಾರ್, ಅಮೆಜಾನ್ ಸಿಇಓ ಬೆಜೋಸ್ ಅವರಿಗೆ ಇಮೇಲ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದ.

ಅಮೆಜಾನ್‌ನಿಂದ ಆರ್ಡರ್ ಮಾಡಿದ ಫೋನ್ ಅನ್ನು ನನಗೆ ಹಸ್ತಾಂತರಿಸಿಲ್ಲ. ಸೊಸೈಟಿ ಗೇಟ್ ಬಳಿ ಆರ್ಡರ್ ಇಟ್ಟುಹೋಗಿದ್ದು , ಕಳ್ಳರು ಅದನ್ನು ಕದ್ದಿದ್ದಾರೆ. ವಿತರಣೆಯ ಬಗ್ಗೆ ನನಗೆ ಕರೆಯನ್ನೂ ಮಾಡಿಲ್ಲ. ವಿತರಣೆ ಮಾಡಿದ್ದ ಆರ್ಡರ್ ಅನ್ನು ಕಳವಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ನಿಮ್ಮ ಆನ್ ಲೈನ್ ಮಾರುಕಟ್ಟೆಯಿಂದ ಖರೀದಿಸುವ ಮುನ್ನ ಎರಡು ಬಾರಿ ಯೋಚಿಸುತ್ತೇನೆ ಎಂದು ಪತ್ರ ಬರೆದಿದ್ದ.
ಅಮೆಜಾನ್ ಸಿಇಒ ಜೆಫ್ ಬೆಜೋಸ್ ಗ್ರಾಹಕರ ಮೇಲ್‌ಗಳನ್ನು ಓದುತ್ತಾರೆ. ಗ್ರಾಹಕರಿಗೆ ನೇರವಾಗಿ ಪ್ರತ್ಯುತ್ತರ ನೀಡದಿದ್ದರೂ, ಅವರು ಉಸ್ತುವಾರಿ ಅಧಿಕಾರಿಗಳಿಗೆ ರವಾನಿಸುತ್ತಾರೆ. ಆದರೆ, ಓಂಕಾರ್ ಗೆ ಅಮೆಜಾನ್ ರಿಲೇಶನ್ ಶಿಪ್ ತಂಡದಿಂದ ಉತ್ತರ ಬಂದಿತ್ತು. ಓಂಕಾರ್ ಈ ಹಿಂದೆ ಒದಗಿಸಿದ್ದ ಕಳ್ಳತನದ ಪುರಾವೆಗಳನ್ನು ಅಮೆಜಾನ್ ಅಧಿಕಾರಿಗಳು ಪರಿಶೀಲಿಸಿದಾಗ, ಫೋನ್ ಸರಿಯಾದ ವಿಳಾಸಕ್ಕೆ ತಲುಪಿತ್ತು. ಆದರೆ ಪಾರ್ಸೆಲ್ ಅನ್ನು ಪ್ರವೇಶ ದ್ವಾರದಲ್ಲಿ ಬಿಟ್ಚಿದ್ದರಿಂದ ಅದು ಮಾಲೀಕರ ಕೈಗೆ ಸಿಗಲಿಲ್ಲ. ಸಿಸಿಟಿವಿ ದೃಶ್ಯದಲ್ಲಿ ಫೋನ್ ಕದ್ದಿರುವುದು ಸಾಬೀತಾಗಿದ್ದರಿಂದ ಅಮೆಜಾನ್ ಫೋನಿನ ಪೂರ್ತಿ ಹಣವನ್ನು ವಾಪಾಸ್ ಮಾಡಿದೆ.
Recently when a customer from Mumbai wrote to Amazon founder Bezos about a missing package, within days Amazon executives contacted him and settled his issue.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm