ಭಾರತದ ಗಡಿಯಲ್ಲಿ ಚೀನಿ ಸೈನಿಕ ಸೆರೆ

19-10-20 03:21 pm       Headline Karnataka News Network   ದೇಶ - ವಿದೇಶ

ಲಡಾಖ್ ನ ಡೆಮ್ಚೊಕ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಚೀನಾ ಸೈನಿಕನನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ನವದೆಹಲಿ, ಅಕ್ಟೋಬರ್ 19 : ಭಾರತ ಮತ್ತು ಚೀನಾ ನಡುವೆ ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ನಡುವೆಯೇ ಲಡಾಖ್ ನ ಡೆಮ್ಚೊಕ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಚೀನಾ ಸೈನಿಕನನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ಭಾರತೀಯ ಸೇನೆ ವಶದಲ್ಲಿದ್ದು, ಭಾರತೀಯ ಏಜೆನ್ಸಿಗಳು ಗೂಢಲಿಪಕ್ಕೆ ಸಂಬಂಧಿಸಿದರೇ ಎನ್ನುವನ್ನು ಕಂಡು ಹಿಡಿಯಲು ತನಿಖೆ ನಡೆಸುತ್ತಿದ್ದಾರೆ ಎಂದು ಟಿವಿ ಟುಡೇ ನೆಟ್ ವರ್ಕ್ ವರದಿ ತಿಳಿಸಿದೆ.

ಚೀನಾ ಸೈನಿಕನು ಅಜಾಗರೂಕವಾಗಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿರಬಹುದು ಎಂದು ಸುದ್ದಿ ಸಂಸ್ಥೆ ಎಎನ್ ಐ ತನ್ನ ವರದಿಯಲ್ಲಿ ತಿಳಿಸಿದೆ. 'ಸೂಕ್ತ ವಿಧಿವಿಧಾನಗಳನ್ನು ಅನುಸರಿಸಿ, ಸ್ಥಾಪಿತ ಶಿಷ್ಟಾಚಾರದ ಪ್ರಕಾರ ಅವರನ್ನು ಚೀನಾ ಸೇನೆಗೆ ಅವರನ್ನು ವಾಪಸ್ಸು ಕಳುಹಿಸಲಾಗುವುದು ಎನ್ನಲಾಗಿದೆ.

The Indian Army apprehended a Chinese army soldier near Demchok area of Ladakh on Monday morning.