ಬ್ರೇಕಿಂಗ್ ನ್ಯೂಸ್
08-02-23 01:13 pm HK News Desk ದೇಶ - ವಿದೇಶ
ನವದೆಹಲಿ, ಫೆ.8 : ಸತತ ಆರನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ರೆಪೋ ದರವನ್ನು ಏರಿಕೆ ಮಾಡಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಬುಧವಾರ 25 ಅಂಶಗಳ ಏರಿಕೆಯೊಂದಿಗೆ ಶೇ. 6.5ಕ್ಕೆ ರೆಪೋ ದರ ಹೆಚ್ಚಿಸಿದ್ದು ಇದರಿಂದ ಸಾಮಾನ್ಯ ಗ್ರಾಹಕರಿಗೆ ಹೊಡೆತ ಬೀಳಲಿದೆ.
ರೆಪೋ ದರ ಏರಿಕೆಯಿಂದಾಗಿ ನೇರವಾಗಿ ಗೃಹ, ವಾಹನ ಸಾಲಗಳ ಬ್ಯಾಂಕ್ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಆದರೆ, ನಿಶ್ಚಿತ ಠೇವಣಿಗಳಿಗೆ ರೆಪೋ ದರ ಏರಿಕೆಯಿಂದ ತುಸು ಪ್ರಯೋಜನ ಸಿಗಲಿದೆ.

ಆರ್ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ಪ್ರಕಟಿಸಿದ್ದಾರೆ. ಆರು ಸದಸ್ಯರ ಸಮಿತಿಯಲ್ಲಿ ನಾಲ್ವರು ಸದಸ್ಯರು ರೆಪೋ ದರ ಏರಿಕೆ ಪರವಾಗಿ ಮತ ಚಲಾಯಿಸಿದರು ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
ಸದ್ಯದ ಆರ್ಥಿಕ ಪರಿಸ್ಥಿತಿ ಮತ್ತು ಹಣದುಬ್ಬರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಹಣಕಾಸು ನೀತಿ ಸಮಿತಿ ರೆಪೋ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷದ ಮೇ ತಿಂಗಳಿನಿಂದ ಈವರೆಗೂ ಒಟ್ಟು 250 ಮೂಲ ಅಂಶವನ್ನು ಆರ್ಬಿಐ ಏರಿಕೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷ 2022-2023ಕ್ಕೆ ಹಣದುಬ್ಬರವನ್ನು ಶೇ. 6.5 ಎಂದು ಅಂದಾಜಿಸಿದ್ದು, 2023-24ನೇ ಹಣಕಾಸು ವರ್ಷಕ್ಕೆ ಶೇ. 5.3 ಎಂದು ನಿರೀಕ್ಷೆ ಮಾಡಿದ್ದು ಜೊತೆಗೆ ಹಣದುಬ್ಬರ ಇಳಿತದ ನಿರೀಕ್ಷೆಯನ್ನೂ ಹೊಂದಿದೆ.
The Reserve Bank of India hiked its key repo rate by 25 basis points (bps) on Wednesday as expected, saying core inflation remained high. The central bank said that its policy stance remains focused on the withdrawal of accommodation. In its December monetary policy review, the central bank had raised the key benchmark interest rate by 35 basis points (bps). Since May last year, the Reserve Bank has increased the short-term lending rate by 250 basis points, including today's, to contain inflation.
10-04-26 03:25 pm
HK News Desk
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm