ಪಠಾಣ್ ಸಿನಿಮಾ ನಿಷೇಧಕ್ಕೆ ಮತಾಂಧರ ಪಡೆಯೇ ಮುಂದಾಗಿತ್ತು, ಸಾಧ್ಯವಾಗಲಿಲ್ಲ ; ಪ್ರಕಾಶರಾಜ್ 

09-02-23 02:53 pm       HK News Desk   ದೇಶ - ವಿದೇಶ

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪಠಾಣ್‌, ಪಠಾಣ್ ಸಿನಿಮಾ ಟೀಕಿಸಿದವರ ಬಗ್ಗೆ, ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಂಡಾಡಿದವರ ಬಗ್ಗೆ ಮಾತನಾಡಿದ್ದಾರೆ.

ಕೇರಳ, ಫೆ.9 : ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪಠಾಣ್‌, ಪಠಾಣ್ ಸಿನಿಮಾ ಟೀಕಿಸಿದವರ ಬಗ್ಗೆ, ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಂಡಾಡಿದವರ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ಮಾತೃಭೂಮಿ ಅಂತಾರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದ ಪ್ರಕಾಶ್‌ ರಾಜ್, ಪಠಾಣ್‌ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಶಾರುಖ್‌ ಖಾನ್‌ ಅವರ ಪಠಾಣ್‌ ಚಿತ್ರವನ್ನು ಬ್ಯಾನ್‌ ಮಾಡಬೇಕೆಂದು ಮೂರ್ಖರು, ಮತಾಂಧರ ಒಂದು ದೊಡ್ಡ ಪಡೆಯೇ ಮುಂದೆ ಬಂದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇತ್ತ ಪಠಾಣ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿತು. ಇದೇ ಮೂರ್ಖರಿಗೆ ಪ್ರಧಾನಿ ಮೋದಿ ಚಿತ್ರ ಬಿಡುಗಡೆ ಆದಾಗ ಕೇವಲ 30 ಕೋಟಿ ಗಳಿಕೆ ಮಾಡಿಸಲು ಆಗಲಿಲ್ಲ.. ಹಾಗಾಗಿ ಇದು ಕೇವಲ ಬೊಗಳುವಿಕೆ ಮಾತ್ರವೇ ಹೊರತು ಕಚ್ಚುವಿಕೆಯಲ್ಲ ಎಂದಿದ್ದಾರೆ.

Explained: 'The Kashmir Files' and the 'propaganda' controversy - Telangana  Today

ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕೂ ಟೀಕೆ

ಅದೇ ರೀತಿ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಬಗ್ಗೆಯೂ ಮಾತನಾಡಿದ ಪ್ರಕಾಶ್‌ ರಾಜ್, "ಕಾಶ್ಮೀರ್ ಫೈಲ್ಸ್ ಒಂದು ನಾನ್‌ಸೆನ್ಸ್‌ ಸಿನಿಮಾ. ಆದರೆ, ಆ ಚಿತ್ರವನ್ನು ನಿರ್ಮಿಸಿದವರು ಯಾರು ಎಂಬುದು ನಮಗೆ ತಿಳಿದಿದೆ. ಈ ನಾಚಿಗೆ ಇಲ್ಲದ ಚಿತ್ರಕ್ಕೆ ಅಂತಾರಾಷ್ಟ್ರೀಯ ಸಿನಿಮಾ ತೀರ್ಪುಗಾರರು ಉಗಿದಿದ್ದಾರೆ. ಇತ್ತ ನನಗೇಕೆ ಆಸ್ಕರ್‌ ಸಿಗುತ್ತಿಲ್ಲ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಿದ್ದಾರೆ. ಆಸ್ಕರ್‌ ಅಲ್ಲ, ಇವರಿಗೆ ಭಾಸ್ಕರ್‌ ಕೂಡ ಸಿಗುವುದಿಲ್ಲ. ಈ ಥರದ ಸಿನಿಮಾ ಮಾಡುವ ಸಲುವಾಗಿಯೇ ಅವರು 2000 ಕೋಟಿ ಹಣವನ್ನು ತೆಗೆದಿಟ್ಟಿದ್ದಾರೆ. ಆದರೆ, ಎಲ್ಲ ಸಮಯದಲ್ಲೂ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

How to Watch 'Pathaan' full movie in HD online free: Shah Rukh Khan movie  available on

ಪಠಾಣ್‌ ಬಾಕ್ಸ್‌ ಆಫೀಸ್‌ ಕಮಾಯಿ 

ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ವಿರೋಧ ಎದುರಿಸಿತ್ತು. ಆದರೆ, ಬಿಡುಗಡೆ ಬಳಿಕ ಅದು ಬೇರೆಯದೇ ಸ್ವರೂಪ ಪಡೆಯಿತು. ಚಿತ್ರ ಬಿಡುಗಡೆಯಾಗಿ15 ದಿನಗಳಾದರೂ ಕಲೆಕ್ಷನ್‌ ಇನ್ನೂ ನಿಂತಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿ, ಹಿಟ್ ಪಟ್ಟಿ ಸೇರಿದೆ. ಅಷ್ಟೇ ಅಲ್ಲ ಸೋಲಿನ ಸುಳಿಗೆ ಸಿಲುಕಿದ್ದ ಶಾರುಖ್‌ಗೂ ಪಠಾಣ್‌ ಕೈ ಹಿಡಿದಿದೆ. ಹಿಂದಿಯಲ್ಲಿಯೇ 430 ಕೋಟಿ ಗಳಿಕೆ ಮಾಡುವ ಮೂಲಕ ಈ ಹಿಂದಿನ ಕೆಜಿಎಫ್‌ ಚಾಪ್ಟರ್‌ 2 ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದು ಎರಡನೇ ಸ್ಥಾನವನ್ನು ಪಠಾಣ್ ಸಿನಿಮಾ ಅಲಂಕರಿಸಿದೆ.‌

Prakash Raj also added that the director badly needs an Oscar for this. He further added that creators like him cannot fool people all the time. The Kashmir Files was one of the highest-grossing films in Bollywood in 2022. Prakash Raj has been vocal in supporting Pathaan and spoke about the 'Boycott Pathaan' trend several times on his official Twitter page. Recently, he attended Mathrubhumi International Festival of Letters in Kerala.