ಮಹಾ ಪ್ರವಾಹದಲ್ಲಿ ಮುಳುಗಿದ ನ್ಯೂಜಿಲೆಂಡ್​ ; ಸಾವಿರಾರು ಮಂದಿ ನಾಪತ್ತೆ 

16-02-23 12:30 pm       HK News Desk   ದೇಶ - ವಿದೇಶ

ನ್ಯೂಜಿಲೆಂಡ್ ನಲ್ಲಿ ಪ್ರವಾಹ ಸಾಕಷ್ಟು ಸಮಸ್ಯೆ ತಂದಿಟ್ಟಿದೆ. ಕ್ಷಣಕ್ಷಣಕ್ಕೂ ಭೂಕುಸಿತವಾಗ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ವಿದ್ಯುತ್ ಕಡಿತ ಮಾಡಲಾಗಿದೆ.

ವೆಲ್ಲಿಂಗ್ಟನ್, ಫೆ.16: ನ್ಯೂಜಿಲೆಂಡ್ ನಲ್ಲಿ ಪ್ರವಾಹ ಸಾಕಷ್ಟು ಸಮಸ್ಯೆ ತಂದಿಟ್ಟಿದೆ. ಕ್ಷಣಕ್ಷಣಕ್ಕೂ ಭೂಕುಸಿತವಾಗ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ವಿದ್ಯುತ್ ಕಡಿತ ಮಾಡಲಾಗಿದೆ. ರಸ್ತೆ ಸಂಪರ್ಕ ಇಲ್ಲದೇ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ, ಚಂಡಮಾರುತದ ಜೊತೆಗೆ ಭೂಕಂಪ ಕೂಡ ನ್ಯೂಜಿಲೆಂಡ್​​ನಲ್ಲಿ ಭಯ ಹುಟ್ಟಿಸಿದೆ.

ಗ್ಯಾಬ್ರಿಯೆಲ್ ಚಂಡಮಾರುತಕ್ಕೆ ನ್ಯೂಜಿಲೆಂಡ್​ನಲ್ಲಿ ಹಾನಿ ಗ್ಯಾಬ್ರಿಯೆಲ್ ಅನ್ನೋ ಚಂಡಮಾರುತ, ನ್ಯೂಜಿಲೆಂಡ್​ ದೇಶವನ್ನ ಸಂಕಷ್ಟಕ್ಕೆ ದೂಡ್ತಿದೆ. ಏಕಾಏಕಿ ನುಗ್ಗಿದ ನೀರು ಎದುರಿಗೆ ಸಿಕ್ಕವರನ್ನ ಎಳೆದೊಯ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ರೆ, ಹಲವೆಡೆ ಭೂಕುಸಿತ ಸಾಕಷ್ಟು ಅನಾಹುತ ಮಾಡಿದೆ. ಪ್ರವಾಹ ಮತ್ತು ಏಕಾಏಕಿ ಬಂದ ಚಂಡಮಾರುತಕ್ಕೆ ನಾಲ್ವರು  ಸಾವನ್ನಪ್ಪಿದ್ದಾರೆ.

Cyclone Gabrielle lashes New Zealand with strong winds, rain: Top updates |  World News - Hindustan Times

ಗ್ಯಾಬ್ರಿಯೆಲ್ ಸೈಕ್ಲೋನ್​ನಿಂದಾಗಿ ಸುಮಾರು 1 ಸಾವಿರದ 440 ಜನ ನಾಪತ್ತೆಯಾಗಿದ್ದಾರೆ ಅಂತ ಅಲ್ಲಿನ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಪಡೆಗಳ ಕಾರ್ಯಾಚರಣೆ ನಡೆಸ್ತಿವೆ. ಇಸ್ಕಡಾಲೆ ನಗರದಲ್ಲಿ ಪುಟ್ಟ ಮಗುವಿನ ಶವ ಕೂಡ ಪತ್ತೆಯಾಗಿದೆ.

ಈಗಾಗಲೇ ಪ್ರವಾಹದಿಂದಾಗಿ, ನೂರಾರು ಮನೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ಭೂಕುಸಿತವಾಗಿ, ಹತ್ತಾರು ಬ್ರಿಡ್ಜ್​ಗಳು ಕುಸಿಯುತ್ತಿವೆ. ಮತ್ತೊಂದ್ಕಡೆ ದೇಶದಲ್ಲಿ 80 ಸಾವಿರ ಮನೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಇದರ ಜೊತೆಗೆ ನ್ಯೂಜಿಲೆಂಡ್​​ನಲ್ಲಿ ರಕ್ಷಣಾ ಕಾರ್ಯಾಚರಣೆ ಕೂಡ ಭರದಿಂದ ಸಾಗ್ತಿದೆ. ಈಗಾಗಲೇ ಸೈಕ್ಲೋನ್​ನಿಂದ 4-5 ನಗರಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಘೋಷಿಸಲಾಗಿದೆ. ರಸ್ತೆ, ವಿದ್ಯುತ್ ಸಂಪರ್ಕ ಕಡಿತದಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.

Cyclone Gabrielle: New Zealand declares state of emergency | World News -  Hindustan Times

ಮೊದಲೇ ಪ್ರವಾಹ, ಚಂಡಮಾರುತದಿಂದ ತತ್ತಿರಿಸಿರೋ ನ್ಯೂಜಿಲೆಂಡ್​ನಲ್ಲಿ ಪ್ರಬಲ ಭೂಕಂಪ ಕೂಡ ಸಂಭವಿದೆ. ವೆಲ್ಲಿಂಗ್​ಟನ್​ಲ್ಲಿ ಇಂದು 6.1 ತೀವ್ರತೆಗೆ ಭೂಕಂಪನವಾಗಿದೆ. ನಗರದ ಕಟ್ಟಡಗಳು ಅಲುಗಾಡಿನ ಅನುಭವವಾಗಿದೆ. ಒಟ್ಟಾರೆ, ಸೈಕ್ಲೋನ್ ಪೆಟ್ಟಿನ ನಡುವೆ ನ್ಯೂಜಿಲೆಂಡ್​​ಗೆ ಭೂಕಂಪ, ದೊಡ್ಡ ಹೊಡೆತ ನೀಡುತ್ತಿದೆ.

In Pics: New Zealand grapples with the aftermath of Cyclone Gabrielle as quake  hits nation | Rest of the World News

Cyclone Gabrielle lashes Auckland, New Zealand, as authorities order  nationwide state of emergency | CNN

ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ಕತ್ತಲಲ್ಲಿ: 

ಗಾರ್ಡಿಯನ್ ವರದಿ ಪ್ರಕಾರ ಗೇಬ್ರಿಯೆಲ್ ಚಂಡಮಾರುತದ ಪರಿಣಾಮ ನ್ಯೂಜಿಲೆಂಡ್​ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ನಾರ್ತ್​ಲ್ಯಾಂಡ್, ಆಕ್ಲೆಂಡ್ ಮತ್ತು ಹಾಕ್ಸ್​ಬೇ ಪ್ರದೇಶಗಳಿಂದ ಬಂದಿರುವ ಮಾಹಿತಿ. ಚಂಡಮಾರುತದಿಂದ ಬಹಳ ಹಾನಿಗೊಂಡಿರುವ ಗಿಸ್ಬೋರ್ನ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ ಎಂಬ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ ಕಾರ್ಯನಿರ್ವಹಣೆ ಎಷ್ಟು ಸ್ಥಗಿತಗೊಂಡಿದೆ, ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ತಪ್ಪಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ, ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿರುವ ಮನೆಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು. ನ್ಯೂಜಿಲೆಂಡ್​ನಲ್ಲಿ ಒಟ್ಟಾರೆ ಜನಸಂಖ್ಯೆ ಇರುವುದೇ ಸುಮಾರು 50 ಲಕ್ಷ. ಚಂಡಮಾರುತ ಅಪ್ಪಳಿಸಿರುವ ಬಹುತೇಕ ಪ್ರದೇಶಗಳು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿರುವ ಅಂದಾಜು ಇದೆ. ಈಗ ಬಂದಿರುವ ಮಾಹಿತಿ ಪ್ರಕಾರ ವಿದ್ಯುತ್ ಸರಬರಾಜು ಮರಳಿ ಬರಲು ಹಲವು ದಿನಗಳು ಅಥವಾ ಕೆಲ ವಾರಗಳೇ ಆಗಬಹುದು.

Cyclone Gabrielle Wreaks Havoc on New Zealand: Four Dead, Over 1,200  Uncontactable

ತುರ್ತುಸ್ಥಿತಿ ಘೋಷಣೆ: 

ನ್ಯೂಜಿಲೆಂಡ್​ನಲ್ಲಿ ಗೇಬ್ರಿಯೆಲ್ ಚಂಡಮಾರು ಅಪ್ಪಳಿಸಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿಯನ್ನು ಅಲ್ಲಿನ ಸರ್ಕಾರ ಘೋಷಿಸಿದೆ. ನಾರ್ತ್​ಲೆಂಡ್, ಆಕ್ಲೆಂಡ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ, ವೈಕಾಟೋ, ಹಾಕ್ಸ್​ಬೇ ಮತ್ತು ಟರರುವಾ ಪ್ರದೇಶಗಳಲ್ಲಿ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ.

New Zealand's capital Wellington was swayed by a strong earthquake Wednesday, with residents reporting feeling a sudden jolt and buildings quivering. The US Geological Survey said the quake measured 5.7 on the moment magnitude scale, with an epicentre in the Cook Strait between the country's two main islands.