ಲೆಬನಾನ್ ಪ್ರಧಾನಿಯಾಗಿ ಹರೀರಿ ಮರು ನೇಮಕ

23-10-20 10:24 am       Headline Karnataka News Network   ದೇಶ - ವಿದೇಶ

ದೇಶದಲ್ಲಿ ನೆಲೆಸಿರುವ ತೀವ್ರ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಮಾಜಿ ಪ್ರಧಾನಿ ಸಅದ್ ಅಲ್-ಹರೀರಿಯನ್ನು ಗುರುವಾರ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.

ಬೈರೂತ್, ಅಕ್ಟೋಬರ್.23 : 1975-90ರ ಅವಧಿಯ ಆಂತರಿಕ ಯುದ್ಧದ ಬಳಿಕ ದೇಶದಲ್ಲಿ ಪ್ರಸಕ್ತ ನೆಲೆಸಿರುವ ತೀವ್ರ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಮಾಜಿ ಪ್ರಧಾನಿ ಸಅದ್ ಅಲ್-ಹರೀರಿಯನ್ನು ಗುರುವಾರ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.

ನೂತನ ಪ್ರಧಾನಿ ಹುದ್ದೆಗಾಗಿ ಅಧ್ಯಕ್ಷರು ಸಂಸದರೊಂದಿಗೆ ನಡೆಸಿದ ಸಮಾಲೋಚನೆಯ ವೇಳೆ, ಹೆಚ್ಚಿನ ಸಂಸದರು ಹರೀರಿ ಪರ ಒಲವು ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯಾಗಿ ಅವರು ದೇಶದ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ರಚನೆಯ ಮಹತ್ವದ ಸವಾಲನ್ನು ಎದುರಿಸುತ್ತಿದ್ದಾರೆ. ಬಳಿಕ, ಬ್ಯಾಂಕಿಂಗ್ ಬಿಕ್ಕಟ್ಟು, ಕರೆನ್ಸಿ ಬೆಲೆ ಕುಸಿತ, ಹೆಚ್ಚುತ್ತಿರುವ ಬಡತನ ಮತ್ತು ಹೆಚ್ಚುತ್ತಿರುವ ಸರಕಾರಿ ಸಾಲದ ಸಮಸ್ಯೆಗಳತ್ತ ಅವರು ಗಮನ ಹರಿಸಬೇಕಾಗಿದೆ.

 ಹರೀರಿಯ ಹಿಂದಿನ ಮೈತ್ರಿ ಸರಕಾರವನ್ನು ಸರಿಯಾಗಿದೆ ಒಂದು ವರ್ಷದ ಹಿಂದೆ ಉರುಳಿಸಲಾಗಿತ್ತು. ಲೆಬನಾನ್‌ನ ಆಡಳಿತಾರೂಢ ಕುಲೀನರ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಳಿಕ ದೇಶದ ಅಧ್ಯಕ್ಷರು ಹರೀರಿ ಸರಕಾರವನ್ನು ವಜಾಗೊಳಿಸಿದ್ದರು.