ತಾಯಿ ಗರ್ಭದಲ್ಲೇ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ; ದೆಹಲಿ ಏಮ್ಸ್ ವೈದ್ಯರ ಸಾಧನೆ, ಕೇವಲ 90 ಸೆಕೆಂಡಿನ ಸರ್ಜರಿ ಬಗ್ಗೆ ಅಚ್ಚರಿ ! 

15-03-23 02:41 pm       HK News Desk   ದೇಶ - ವಿದೇಶ

​​​​​ತಾಯಿ ಗರ್ಭದಲ್ಲೇ ಶಿಶುವಿಗೆ ದೆಹಲಿ ವೈದ್ಯರು ಅಪರೂಪದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು ಅಚ್ಚರಿ ಮೂಡಿಸಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರು ಅಪಾಯಕಾರಿ ಶಸ್ತ್ರಚಿಕಿತ್ಸೆಯನ್ನು ಕೇವಲ 90 ಸೆಕೆಂಡುಗಳಲ್ಲಿ ನೆರವೇರಿಸಿದ್ದಾರೆ. 

ದೆಹಲಿ, ಮಾ.15 : ತಾಯಿ ಗರ್ಭದಲ್ಲೇ ಶಿಶುವಿಗೆ ದೆಹಲಿ ವೈದ್ಯರು ಅಪರೂಪದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು ಅಚ್ಚರಿ ಮೂಡಿಸಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರು ಅಪಾಯಕಾರಿ ಶಸ್ತ್ರಚಿಕಿತ್ಸೆಯನ್ನು ಕೇವಲ 90 ಸೆಕೆಂಡುಗಳಲ್ಲಿ ನೆರವೇರಿಸಿದ್ದಾರೆ. 

ಶಸ್ತ್ರಚಿಕಿತ್ಸೆಯ ನಂತರ ಗರ್ಭಿಣಿ ಮಹಿಳೆ ಮತ್ತು ಆಕೆಯ ಗರ್ಭದಲ್ಲಿರುವ ಮಗು ಆರೋಗ್ಯವಾಗಿದ್ದಾರೆ. ಬಲೂನ್ ಹಿಗ್ಗಿಸುವ ಪ್ರಕ್ರಿಯೆಯಿಂದ ಮಗುವಿನ ಹೃದಯದಲ್ಲಿ ರಕ್ತನಾಳಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

28 ವರ್ಷದ ಮಹಿಳೆ ಗರ್ಭಿಣಿಯಾಗಿದ್ದು ಭ್ರೂಣ ಇರುವಾಗಲೇ ವೈದ್ಯರು ಮಗುವಿಗೆ ಸಮಸ್ಯೆ ಇರುವುದನ್ನು ತಿಳಿಸಿದ್ದರು.  ಗರ್ಭವನ್ನು ಮುಂದುವರಿಸಿದ್ದಲ್ಲದೆ, ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿದ್ದಾರೆ. ದ್ರಾಕ್ಷಿ ಗಾತ್ರದ ತಾಯಿ ಗರ್ಭದಲ್ಲಿದ್ದ ಮಗುವಿನ ಹೃದಯಕ್ಕೆ ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತಾಯಿ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿ ಮಾದರಿಯನ್ನು ಕಳಿಸಿ ಬಲೂನ್ ಕ್ಯಾತಿಟರ್ ಮೂಲಕ ಅಡಚಣೆಯಾಗಿದ್ದ ಹೃದಯದ ಕವಾಟ ತೆರೆದಿದ್ದಾರೆ.

ಹೃದಯದ ಕವಾಟಗಳಲ್ಲಿ ಯಾವುದೇ ಅಡಚಣೆಯನ್ನು ತೆಗೆದುಹಾಕಲು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಈ ವಿಧಾನ ಅನುಸರಿಸಲಾಗುತ್ತದೆ. ಈ ಪ್ರಕ್ರಿಯೆ ತುಂಬಾ ಸವಾಲಿನದ್ದಾಗಿತ್ತು, ಭ್ರೂಣದ ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇರುತ್ತದೆ. ಏಮ್ಸ್ ಆಸ್ಪತ್ರೆಯ ಹೃದಯ ತಜ್ಞರು, ಗೈನಕಾಲಜಿ ವೈದ್ಯರು ಸೇರಿ ಈ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೇವಲ ಒಂದೂವರೆ ನಿಮಿಷದಲ್ಲಿ ಕೆಲಸ ಪೂರೈಸಲಾಗಿದೆ ಎಂದು ವೈದ್ಯರೊಬ್ಬರು ಪಿಟಿಐ ಸಂಸ್ಥೆಗೆ ತಿಳಿಸಿದ್ದಾರೆ.

AIIMS Delhi performed successful balloon dilation in a grape-sized baby's heart in the mother's womb. A 28-year-old pregnant patient was admitted to the hospital with three previous pregnancy losses. The parents wished to continue the current pregnancy after the doctors communicated about the child's heart condition and consented to the procedure with a wish to improve the outcome.