ವಿದ್ಯುತ್ ನಿಗಮದ ಕಚೇರಿಯಲ್ಲಿ ಉಗ್ರ ಲಾಡೆನ್ ಫೋಟೊ ; ಅಧಿಕಾರಿಯನ್ನು ವಜಾಗೊಳಿಸಿದ ಯುಪಿ ಸರ್ಕಾರ 

22-03-23 11:38 am       HK News Desk   ದೇಶ - ವಿದೇಶ

ತನ್ನ ಕಚೇರಿಯಲ್ಲಿ ಲಷ್ಕರ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ಫೋಟೋ ಹಾಕಿದ್ದ ಉತ್ತರ ಪ್ರದೇಶ ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪ ವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಲಕ್ನೋ, ಮಾ.21: ತನ್ನ ಕಚೇರಿಯಲ್ಲಿ ಲಷ್ಕರ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ಫೋಟೋ ಹಾಕಿದ್ದ ಉತ್ತರ ಪ್ರದೇಶ ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪ ವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ವಿಚಾರಣೆ ನಂತರ ಅಧಿಕಾರಿ ರವೀಂದ್ರ ಪ್ರಕಾಶ್ ಗೌತಮ್ ನನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಯುಪಿಸಿಎಲ್ ಅಧ್ಯಕ್ಷ ಎಂ. ದೇವರಾಜ್ ಆದೇಶಿಸಿದ್ದಾರೆ. 

ಹತ್ಯೆಗೀಡಾಗಿರುವ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಲಾಡೆನ್ ತನ್ನ ಆರಾಧ್ಯ ದೈವನಂತೆ ಆತನ ಪ್ರತಿಮೆ ಮತ್ತು ಫೋಟೋವನ್ನು ಗೌತಮ್ ತನ್ನ  ಕಚೇರಿಯಲ್ಲಿ ಹಾಕಿದ್ದ. ತನಿಖೆ ವೇಳೆಯಲ್ಲಿ ಈ ವಿಚಾರ ದೃಢಪಟ್ಟಿದೆ ಎಂದು ದಕ್ಷಿಣಾಂಚಲ್ ವಿದ್ಯುತ್ ವಿತರಣಾ ನಿಗಮದ ಎಂಡಿ ಅಮಿತ್ ಕಿಶೋರ್ ಪಿಟಿಐಗೆ ತಿಳಿಸಿದ್ದಾರೆ. 

ಜೂನ್ 2022ರಲ್ಲಿ  ಫರೂಕಾಬಾದ್ ಜಿಲ್ಲೆಯ ಕಾಯಮ್‌ಗಂಜ್ ಉಪ ವಿಭಾಗ-II ರಲ್ಲಿ ಗೌತಮ್ ನನ್ನು ಸೇವೆಗೆ ನಿಯೋಜಿಸಲಾಗಿತ್ತು. ಈ ವೇಳೆ, ಗೌತಮ್ ಲಾಡೆನ್ ಫೋಟೋ ಹಾಕಿದ್ದು, ಕೊಠಡಿಯ ವಿಡಿಯೋ ವೈರಲ್ ಆದ ನಂತರ ಪ್ರಾಥಮಿಕ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Lashkar Taiba photo in Uttar Pradesh Electricity office,  officer suspended.