ಬ್ರೇಕಿಂಗ್ ನ್ಯೂಸ್
22-03-23 10:00 pm HK News Desk ದೇಶ - ವಿದೇಶ
ನವದೆಹಲಿ, ಮಾ.22 : ಪಾಕಿಸ್ಥಾನದ ಗಡಿಭಾಗ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದರು.
1948 ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಎರಡು ವರ್ಷಗಳ ಹಿಂದೆ ಆರ್ಟಿಕಲ್ 370ರ ವಿಶೇಷ ಕಾಯ್ದೆ ರದ್ದತಿ ನಂತರ ಪುನರ್ ನಿರ್ಮಿಸಿದ್ದು ಯುಗಾದಿಯ ಶುಭ ದಿನದಂದೇ ಲೋಕಾರ್ಪಣೆಗೊಳಿಸಿದ್ದಾರೆ. ಕರ್ನಾಟಕದ ಬಿಡದಿ ಮೂಲದ ಗ್ರಾನೈಟ್ ಬಳಕೆಯಿಂದ ನಿರ್ಮಿತವಾಗಿರುವ ಶಾರದಾ ಮಂದಿರದಲ್ಲಿ ಶೃಂಗೇರಿ ಶಾರದಾ ಮಠದಿಂದ ಒಯ್ಯಲಾದ ಪಂಚಲೋಹದ ಶಾರದಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಜನವರಿ 24 ರಿಂದ ಶಾರದಾ ವಿಗ್ರಹ ದೇಶಾದ್ಯಂತ ಸಂಚರಿಸಿ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತೀತ್ವಾಲ್ ತಲುಪಿತ್ತು. ನಮಸ್ತೇ ಶಾರದೆ, ಕಾಶ್ಮೀರ ಪುರವಾಸಿನಿ ಎಂಬ ಶ್ಲೋಕ ಇದೆ. ಶೃಂಗೇರಿ ಶಾರದೆಯೂ ಶಂಕರಾಚಾರ್ಯರ ಕಾಲದಲ್ಲಿ ಕಾಶ್ಮೀರದಿಂದ ತರಲಾಗಿದ್ದ ವಿಗ್ರಹ. ಕ್ರಿಸ್ತ ಶಕ ಆರಂಭಕ್ಕೂ ಮೊದಲೇ ಅಶೋಕನ ಕಾಲದಲ್ಲಿ ಕಾಶ್ಮೀರದಲ್ಲಿ ಅತಿ ಪುರಾತನ ಶಾರದಾ ದೇವಾಲಯ ಇತ್ತು. ಆ ಜಾಗ ಈಗ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿದೆ. ಪಾಕ್ ಗಡಿಭಾಗದಲ್ಲಿ ಮತ್ತೊಂದು ಶಾರದಾ ದೇವಸ್ಥಾನ ಇದ್ದುದು ಸ್ವಾತಂತ್ರ್ಯ ಕಾಲದಲ್ಲಿ ಮತಾಂಧ ಮೂಲಭೂತವಾದಿಗಳ ಆಕ್ರಮಣದಿಂದ ನಾಶವಾಗಿತ್ತು. ಕಾಶ್ಮೀರಿ ಪಂಡಿತರ ಕುಲದೇವಿಯಾಗಿದ್ದ ಈ ಶಾರದೆಯ ಮಂದಿರವನ್ನು ಇದೀಗ ಕುಪ್ವಾರಾದಲ್ಲಿ ಮತ್ತೆ ಪುನರ್ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾರದಾ ಮಂದಿರದ ಲೋಕಾರ್ಪಣೆ ಅತ್ಯಂತ ಮಹತ್ವದ್ದು. ಒಂದು ಕಾಲದಲ್ಲಿ ಉತ್ಕೃಷ್ಟ ಜ್ಞಾನ ಕೇಂದ್ರವೆಂದು ಪರಿಗಣಿಸಲಾಗುತ್ತಿದ್ದ ಶಾರದಾ ಪೀಠಕ್ಕೆ ಭರತ ಖಂಡದ ಸಮಸ್ತ ಭಾಗಗಳಿಂದ ಜ್ಞಾನಾರ್ಜನೆಗಾಗಿ ಪಂಡಿತರು ಆಗಮಿಸುತ್ತಿದ್ದುದರಿಂದ ಮಹಾಶಕ್ತಿ ಪೀಠವೆಂದು ಕರೆಯಲ್ಪಡುತ್ತಿತ್ತು. ಆದಿ ಶಂಕರರು ಇಲ್ಲಿ ತಾಯಿ ಶಾರದೆ ಕುರಿತಾಗಿ ಅನೇಕ ಸ್ತುತಿಗಳನ್ನು ರಚಿಸಿದ್ದು ಕೂಡ ಉಲ್ಲೇಖನೀಯ. ಆರ್ಟಿಕಲ್ 370 ರದ್ದತಿ ನಂತರ ಇಡೀ ಕಾಶ್ಮೀರ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸನಾತನ, ಸಾಂಸ್ಕೃತಿಕ ಪುನರುತ್ಥಾನ ಕೂಡ ಇಲ್ಲಿ ನಡೆಯುತ್ತಿದ್ದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಶಾರದಾ ಪೀಠಕ್ಕೆ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ಅಮಿತ್ ಶಾ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕದ ಸಂಸದ ತೇಜಸ್ವೀ ಸೂರ್ಯ ಪಾಲ್ಗೊಂಡಿದ್ದರು. ಜಮ್ಮು ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಶಾರದಾ ಮಂದಿರವು ಲೋಕಾರ್ಪಣೆಗೊಂಡಿದ್ದು, ದಕ್ಷಿಣ ಭಾರತದ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದವಿದೆ. ಒಂದು ಸಾವಿರ ವರ್ಷದ ಹಿಂದೆ ಆದಿ ಶಂಕರಾಚಾರ್ಯರು ಸನಾತನ ಪರಂಪರೆಯ ಪುನರುತ್ಥಾನದ ಉದ್ದೇಶದಿಂದ ದೇಶದ ನಾಲ್ಕೂ ಭಾಗಗಳಲ್ಲಿ ಪೀಠ ಸ್ಥಾಪನೆ ಮಾಡಿ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಬುನಾದಿ ಹಾಕಿದ್ದರು. ಇಂದು ಕರ್ನಾಟಕದ ತುಂಗಾ ತೀರದಿಂದ ಕಾಶ್ಮೀರದ ಕಿಶನ್ ಗಂಗಾ ನದಿ ದಡಕ್ಕೆ ತಾಯಿ ಶಾರದಾಂಬೆಯನ್ನು ತಂದು ಪ್ರತಿಷ್ಡೆ ಮಾಡಲಾಗಿದೆ. ಈ ಕಾರ್ಯಕ್ಕಾಗಿ ನಾನು ಸಮಸ್ತ ಕನ್ನಡಿಗರ ಪರವಾಗಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ , ಜಮ್ಮು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷರಾದ ರವೀಂದ್ರ ರೈನಾ ಮತ್ತು ಸೇವ್ ಶಾರದಾ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
Union Home Minister Amit Shah on Wednesday e-inaugurated the Mata Sharda Devi temple near the Line of Control (LoC) in Karnah sector of Jammu and Kashmir, saying the abrogation of Article 370 is taking the Union Territory back to its old traditions, culture and the “Ganga-Jamuna Tehzeeb”. Shah said the opening of the temple was the beginning of the new dawn and quest for reviving the Sharda culture.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm