ಬ್ರೇಕಿಂಗ್ ನ್ಯೂಸ್
28-03-23 08:46 pm HK News Desk ದೇಶ - ವಿದೇಶ
ನವದೆಹಲಿ, ಮಾ.28 : ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡಲು ನೀಡಿದ್ದ ಮಾರ್ಚ್ 31ರ ಗಡುವನ್ನು ಸಾರ್ವಜನಿಕರ ವಿರೋಧ ಬಳಿಕ ಕಡೆಗೂ ವಿಸ್ತರಣೆ ಮಾಡಲಾಗಿದೆ. ಎರಡೂ ಗುರುತಿನ ಕಾರ್ಡ್ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರ ವರೆಗೂ ವಿಸ್ತರಿಸಿದೆ.
ಒಂದು ಸಾವಿರ ರೂ. ದಂಡ ಸಹಿತ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರ ವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿತ್ತು. ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.
ಆಧಾರ್ ಕಾರ್ಡ್ ಮತ್ತು ಪಾನ್ ಜೋಡಣೆಗೆ 2017ರಿಂದಲೂ ಕೇಂದ್ರ ಸರ್ಕಾರ ಸೂಚನೆ ನೀಡುತ್ತಾ ಬಂದಿತ್ತು. 2022ರ ಏಪ್ರಿಲ್ 1ರ ಬಳಿಕ 500 ರೂ. ಶುಲ್ಕ ವಿಧಿಸಲಾಗಿತ್ತು. 2022ರ ಜುಲೈ 1ರಿಂದ ಶುಲ್ಕವನ್ನು 1,000 ರೂಪಾಯಿಗೆ ಹೆಚ್ಚಿಸಲಾಗಿತ್ತು. ಒಂದು ವೇಳೆ ಮುಂದಿನ ಜೂನ್ 30ರ ಒಳಗೂ ಈ ದಾಖಲೆಗಳನ್ನು ಜೋಡಣೆ ಮಾಡದೆ ಇದ್ದರೆ ಆದಾಯ ತೆರಿಗೆ ಪಾವತಿದಾರರಿಗೆ ಸಮಸ್ಯೆ ಎದುರಾಗಲಿದೆ.
'ಆಧಾರ ಇಲ್ಲದ' ಪಾನ್ ಕಾರ್ಡ್ ನಿಷೇಧ
ತೆರಿಗೆ ತಪ್ಪಿಸಲು 2-3 ಪ್ರತ್ಯೇಕ ಪಾನ್ ಕಾರ್ಡ್ ಬಳಸುವ ಮಂದಿಯನ್ನು ಪತ್ತೆ ಮಾಡಲು ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಮಾಡಲು ಸೂಚಿಸಲಾಗಿತ್ತು. 2017ರ ಬಳಿಕ ಬ್ಯಾಂಕ್ ಖಾತೆ ಹೊಂದಿರುವವರು, ಖಾತೆಯಲ್ಲಿ ವಹಿವಾಟು ನಡೆಸುವ ಹೆಚ್ಚಿನ ಮಂದಿ ಪಾನ್ ಕಾರ್ಡ್ ಜೋಡಣೆ ಮಾಡಿರುತ್ತಾರೆ. ಅಂದಾಜು 50 ಶೇಕಡಾ ಜನ ಈ ಜೋಡಣೆ ಮಾಡಿದ್ದಾರೆ. ಒಂದ್ವೇಳೆ, 2023ರ ಜೂನ್ ವೇಳೆಗೂ ಆಧಾರ್ ಜೋಡಣೆಯಾಗದಿದ್ದರೆ ಅಂತಹ ಪಾನ್ ಕಾರ್ಡ್ ಅಸ್ತಿತ್ವ ಕಳಕೊಳ್ಳುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯೇನೂ ಆಗಲ್ಲ. ತೆರಿಗೆ ತಪ್ಪಿಸಲು ಯತ್ನಿಸುವ ಮಂದಿಗಷ್ಟೆ ಸಮಸ್ಯೆ.
ಹತ್ತು ಸಾವಿರ ದಂಡ ಎಲ್ಲರಿಗೂ ಇರಲ್ಲ !
ಜನಸಾಮಾನ್ಯರು ಬಳಸುವ ಪಾನ್ ಕಾರ್ಡ್ ಒಂದು ವೇಳೆ ನಿಷೇಧಗೊಂಡರೂ, ಬ್ಯಾಂಕ್ ವಹಿವಾಟಿಗೆ ಹೊಸತಾಗಿ ಪಾನ್ ಕಾರ್ಡ್ ಮಾಡಿಸಬಹುದು. ಪಾನ್ ಕಾರ್ಡ್ ನಿಷೇಧ ಆದಮಾತ್ರಕ್ಕೆ ಯಾರಿಗೂ ಹತ್ತು ಸಾವಿರ ದಂಡ ಹಾಕುವುದಿಲ್ಲ. ಪಾನ್ ಕಾರ್ಡ್ ಜೋಡಣೆಯಾಗದಿದ್ದಲ್ಲಿ ಜನಸಾಮಾನ್ಯರಿಗೆ ಸರ್ಕಾರದ ಸಬ್ಸಿಡಿ, ವಿವಿಧ ಯೋಜನೆಗಳಲ್ಲಿ ಬ್ಯಾಂಕ್ ಮೂಲಕ ಸಿಗುವ ಸೌಲಭ್ಯಗಳಿಗೆ ತೊಂದರೆಯಾಗುತ್ತದೆ. ಆ ಸಂದರ್ಭದಲ್ಲಿ ಬ್ಯಾಂಕಿನ ಸೂಚನೆ ಮೇರೆಗೆ ಪಾನ್ ಕಾರ್ಡ್ ಮಾಡಿಸಲು ಅವಕಾಶ ಇರುತ್ತದೆ. ಆದರೆ ಪಾನ್ ಕಾರ್ಡ್ ಇಲ್ಲದೆ, ತೆರಿಗೆ ತಪ್ಪಿಸಲು ಯತ್ನಿಸುವ ಉದ್ಯಮದಾರರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಪಾನ್ ಕಾರ್ಡ್ ಇಲ್ಲದೆ ದೊಡ್ಡ ಮಟ್ಟದ ವಹಿವಾಟು ನಡೆಸುವುದು ಪತ್ತೆಯಾದಲ್ಲಿ ಹತ್ತು ಸಾವಿರ ವರೆಗೂ ಆದಾಯ ತೆರಿಗೆ ಅಧಿಕಾರಿಗಳು ದಂಡ ವಿಧಿಸಬಹುದು ಅಷ್ಟೆ.
The Central Board of Direct Taxes (CBDT) has extended the last date to link Permanent Account Number (PAN) with Aadhaar to June 30, 2023. In a press release released on March 28, 2023, CBDT said, "In order to provide some more time to the taxpayers, the date for linking PAN and Aadhaar has been extended to 30th June 2023, whereby persons can intimate their Aadhaar to the prescribed authority for Aadhaar-PAN linking without facing repercussions."
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am