ಜಮ್ಮು - ಕಾಶ್ಮೀರದಲ್ಲಿ ಉಗ್ರರ ನೆಲೆಗೆ ಭಾರತೀಯ ಸೇನೆ ಅಟ್ಯಾಕ್ ; ಇಬ್ಬರು ಲಷ್ಕರ್ ಎ ತೊಯ್ಬಾ ಭಯೋತ್ಪಾದಕರ ಬಂಧನ, 2 ಕೆಜಿ ತೂಕದ ರಿಮೋಟ್ ಕಂಟ್ರೋಲ್ ಡಿವೈಸ್ ವಶಕ್ಕೆ

11-04-23 01:30 pm       HK News Desk   ದೇಶ - ವಿದೇಶ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕ ನೆಲೆಯ ಮೇಲೆ ದಾಳಿ ಮಾಡಿ ನಾಶಪಡಿಸಿದ್ದಾರೆ.

ಕಾಶ್ಮೀರ, ಎ.11: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕ ನೆಲೆಯ ಮೇಲೆ ದಾಳಿ ಮಾಡಿ ನಾಶಪಡಿಸಿದ್ದಾರೆ.

ಮಂಗಳವಾರ ನಸುಕಿನ ಜಾವ ನಡೆದ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೋಲೀಸರು ಮತ್ತು ಭಾರತೀಯ ಸೇನೆಯು ಬಾರಾಮುಲ್ಲಾದಲ್ಲಿ ಉಗ್ರರ ನೆಲೆಯನ್ನು ನಾಶಪಡಿಸಿದೆ.

ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಇಬ್ಬರು ಭಯೋತ್ಪಾದಕ ಸಹಚರರಾದ ಫಾರೂಕ್ ಅಹ್ಮದ್ ಪರ್ರಾ ಮತ್ತು ಸೈಮಾ ಬಶೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಖಚಿತ ಮಾಹಿತಿಯ ಮೇರೆಗೆ ಬಾರಾಮುಲ್ಲಾ ಪೊಲೀಸ್, ಆರ್ಮಿ 29 ಆರ್ಆರ್ ಮತ್ತು 2 ಬಿಎನ್ ಎಸ್ಎಸ್ಬಿ ಜಂಟಿ ಪಡೆಗಳು ಬಾರಾಮುಲ್ಲಾ ಪಟ್ಟಣದಲ್ಲಿ ಭಯೋತ್ಪಾದನಾ ಘಟಕವನ್ನು ಭೇದಿಸಿದೆ.  ಭಯೋತ್ಪಾದಕರ ಬಳಿ ಇದ್ದ 1 ಪಿಸ್ತೂಲ್, 2 ಪಿಸ್ತೂಲ್ ಮ್ಯಾಗಜೀನ್‌ಗಳು, ಸ್ಫೋಟಕ ಸಾಧನಗಳು ಮತ್ತು ಸುಮಾರು 2 ಕೆಜಿ ತೂಕದ ಒಂದು ರಿಮೋಟ್ ಕಂಟ್ರೋಲ್ ಡಿವೈಸ್ ಹಾಗೂ ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಅಬಿದ್ ಖಯೂಮ್ ಲೋನ್ ಎಂಬ ಸಕ್ರಿಯ ಭಯೋತ್ಪಾದಕನೊಂದಿಗೆ ಸಹಚರರಾಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

 A terror module on Monday was busted by the security forces in Jammu and Kashmir's Baramulla area. In a major success, two terrorist associates of the Lashkar-e-Taiba (LeT) have been also arrested along with arms and ammunition. The police release informed that the terrorist associates have been identified as Farooq Ahmad Parra and Saima Bashir.