ನೀಟ್‌ ಅರ್ಜಿ ಸಲ್ಲಿಕೆಗೆ ಮತ್ತೆ ಅವಕಾಶ ನೀಡಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ; ಏಪ್ರಿಲ್‌ 13 ಕೊನೆ ದಿನ, ಈ ಲಿಂಕ್ ಬಳಸಿ ಅಪ್ಲೈ ಮಾಡಿ 

11-04-23 01:39 pm       HK News Desk   ದೇಶ - ವಿದೇಶ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಾದ ಎನ್‌ಟಿಎಯು UG 2023 ರ ನೋಂದಣಿ ಕಮ್ ಅಪ್ಲಿಕೇಶನ್ ವಿಂಡೋವನ್ನು ಇಂದು ಪುನಃ ತೆರೆದಿದೆ. ಈ ಹಿಂದೆ ನೀಟ್‌ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡು, ಅರ್ಜಿ ಸಲ್ಲಿಸಲಾಗದವರು ಅಥವಾ ಇದೇ ಮೊದಲ ಬಾರಿಗೆ ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸುವವರು ಈ ಅವಕಾಶವನ್ನು ಬಳಸಬಹುದು

ನವದೆಹಲಿ, ಏ 11: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಾದ ಎನ್‌ಟಿಎಯು UG 2023 ರ ನೋಂದಣಿ ಕಮ್ ಅಪ್ಲಿಕೇಶನ್ ವಿಂಡೋವನ್ನು ಇಂದು ಪುನಃ ತೆರೆದಿದೆ. ಈ ಹಿಂದೆ ನೀಟ್‌ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡು, ಅರ್ಜಿ ಸಲ್ಲಿಸಲಾಗದವರು ಅಥವಾ ಇದೇ ಮೊದಲ ಬಾರಿಗೆ ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸುವವರು ಈ ಅವಕಾಶವನ್ನು ಬಳಸಬಹುದು

ಇಂದಿನಿಂದ ಏಪ್ರಿಲ್ 13ರವರೆಗೆ neet.nta.nic.in ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಏಪ್ರಿಲ್‌ 13ರ ರಾತ್ರಿ 11:59 ರವರೆಗೆ ಅರ್ಜಿ ಸಲ್ಲಿಕೆ ವಿಂಡೋ ಸಕ್ರಿಯವಾಗಿರುತ್ತದೆ.

ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಇನ್ನು ಮುಂದೆ ಅರ್ಜಿ ಕರೆಕ್ಷನ್‌ಗೆ ಅವಕಾಶ ನೀಡುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ.

ವಿವಿಧ ಕಾರಣಗಳಿಂದ ಈ ಹಿಂದೆ ಅರ್ಜಿ ಸಲ್ಲಿಕೆ ಸಾಧ್ಯವಾಗದೆ ಇರುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಕೆ ವಿಂಡೋ ಮತ್ತೆ ತೆರೆಯಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.

NEET UG 2023ಗೆ ಅರ್ಜಿ ಸಲ್ಲಿಕೆ ಹೇಗೆ?

  • ಮೊದಲು ಎನ್‌ಟಿಎ ವೆಬ್‌ಸೈಟ್‌ neet.nta.nic.inಗೆ ಭೇಟಿ ನೀಡಿ
  • ಮುಖಪುಟದಲ್ಲಿ NEET 2023 application form ಲಿಂಕ್‌ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿ
  • ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಲಾಗಿನ್‌ ವಿವರ ನೀಡಿ.
  • ಲಾಗಿನ್‌ ವಿರ ನೀಡಿ, ಅಲ್ಲಿ ದೊರಕುವ ಅರ್ಜಿ ನಮೂನೆ ಭರ್ತಿ ಮಾಡಿ
  • ಎಲ್ಲಾ ವಿವರ ನೋಂದಾಯಿಸಿ, ದಾಖಲೆಗಳನ್ನು ಅಪ್ಲೋಡ್‌ ಮಾಡಿ, ಅರ್ಜಿ ಶುಲ್ಕ ಪಾವತಿಸಿ
  • ಅರ್ಜಿ ನಮೂನೆ ಸಲ್ಲಿಕೆ ಮಾಡಿ, ಕನ್‌ಫರ್ಮೆಷನ್‌ ಪುಟವನ್ನು ಡೌನ್‌ಲೋಡ್‌ ಮಾಡಿ.

ಮೇ 7, 2023ರಂದು NEET UG 2023 ಪರೀಕ್ಷೆ ನಡೆಯಲಿದೆ. ಅಡ್ಮಿಟ್‌ ಕಾರ್ಡ್‌ ಮತ್ತು ಪರೀಕ್ಷಾ ನಗರ ಮಾಹಿತಿ ಸ್ಲಿಪ್‌ ಸದ್ಯದಲ್ಲಿಯೇ ಪ್ರಕಟವಾಗಲಿದೆ.

ಇತ್ತೀಚೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಚಂದ್ ಬಿಂದ್ ಅವರು, ವೈದ್ಯಕೀಯ ಪದವಿ ಹಂತದ ಪ್ರವೇಶಕ್ಕಾಗಿ ಆಯೋಜಿಸಲಾಗುವ ನೀಟ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದೇ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್, ನೀಟ್‌ ಯುಜಿ ಪರೀಕ್ಷೆ ಕುರಿತು ಪ್ರಮುಖ ನವೀಕರಣವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಕೇಂದ್ರ ಸರ್ಕಾರವು ಪದವಿಪೂರ್ವ ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ನಡೆಸುವ ಯಾವುದೇ ಯೋಜನೆಯನ್ನು ಪ್ರಸ್ತುತ ಹೊಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್ ಸಂಸತ್ತಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ವರ್ಷದಲ್ಲಿ ಎರಡು ಬಾರಿ ನೆಟ್ ಯುಜಿ ಪರೀಕ್ಷೆ ನಡೆಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿವೆ ಎಂದು ಕೇಂದ್ರ ಸಚಿವರು ಹೇಳಿದರು.

The National Testing Agency (NTA) is reopening the registration window for the National Eligibility and Entrance Examination for Undergraduates (NEET-UG) 2023. The registration window will remain open till April 13, 2023.The National Testing Agency (NTA) is reopening the registration window for the National Eligibility and Entrance Examination for Undergraduates (NEET-UG) 2023. The registration window will remain open till April 13, 2023.