ಅಂಕೋಲಾದಲ್ಲಿ ಹಣ್ಣು ಮಾರುವ ಮಹಿಳೆಯ ಪರಿಸರ ಕಾಳಜಿ  ; ಕಸವನ್ನೆಲ್ಲಾ ಹೆಕ್ಕಿ ಬುಟ್ಟಿಗೆ ಹಾಕುವ ವಿಡಿಯೋ ವೈರಲ್, ಆನಂದ್ ಮಹೀಂದ್ರಾ ಮೆಚ್ಚುಗೆ 

13-04-23 06:15 pm       HK News Desk   ದೇಶ - ವಿದೇಶ

ಇಲ್ಲೊಬ್ಬರು ಹಣ್ಣು ಮಾರಾಟಗಾರ್ತಿ ತನ್ನ ಅದ್ಭುತ ಕಾರ್ಯದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಇವರ ನಿಸ್ವಾರ್ಥ ಕಾರ್ಯ ಎಲ್ಲರಿಗೂ ಮಾದರಿಯೂ ಹೌದು.

ಅಂಕೋಲಾ, ಎ.13 : ಇಲ್ಲೊಬ್ಬರು ಹಣ್ಣು ಮಾರಾಟಗಾರ್ತಿ ತನ್ನ ಅದ್ಭುತ ಕಾರ್ಯದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಇವರ ನಿಸ್ವಾರ್ಥ ಕಾರ್ಯ ಎಲ್ಲರಿಗೂ ಮಾದರಿಯೂ ಹೌದು. ಇದೇ ಕಾರಣದಿಂದ ಅಂಕೋಲಾದ ಈ ಮಹಿಳೆ ಈಗ ತನ್ನ ಕಾರ್ಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಮಾಜದಲ್ಲಿ ಕೆಲವರು ತೋರುವ ನಿಸ್ವಾರ್ಥ ಸೇವೆ ನಿಜಕ್ಕೂ ನಮಗೆ ಸ್ಫೂರ್ತಿ ತುಂಬುತ್ತದೆ. ನಾವು ಮಾಡುವ ಒಂದೊಂದು ಒಳ್ಳೆಯ ಕೆಲಸವೂ ಸಮಾಜದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಅದಕ್ಕೆ ಈ ಮಹಿಳೆ ಸಾಕ್ಷಿ. ಇವರ ಕಾರ್ಯವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಕೊಂಡಾಡಿದ್ದಾರೆ.

This woman selling fruits at Karnataka bus stop has Anand Mahindra's  attention. Here's why - India Today

ಟ್ವಿಟ್ಟರ್ ಬಳಕೆದಾರರಾರ ಆದರ್ಶ್ ಹೆಗ್ಡೆ ಎಂಬವರು ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದು ಅಂಕೋಲಾ ಬಸ್ ನಿಲ್ದಾಣದಲ್ಲಿ ಸೆರೆಯಾಗಿದ್ದ ದೃಶ್ಯ. ಮಹಿಳೆಯೊಬ್ಬರು ನಿಲ್ದಾಣದ ಕಸವನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುವ ದೃಶ್ಯವಿದು. ಇಷ್ಟಕ್ಕೂ ಈಕೆ ಹಣ್ಣುಗಳ ಮಾರಾಟಗಾರ್ತಿ. ಎಲೆಗಳಲ್ಲಿ ಕಟ್ಟಿ ಈಕೆ ಹಣ್ಣನ್ನು ಮಾರಾಟ ಮಾಡುತ್ತಾರೆ. ಆದರೆ, ಕೆಲ ಗ್ರಾಹಕರು ಹಣ್ಣನ್ನು ತಿಂದು ಈ ಎಲೆಗಳು ಮತ್ತು ಸಿಪ್ಪೆಯನ್ನು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಹೀಗೆ ತನ್ನ ಗ್ರಾಹಕರು ಎಸೆದ ಕಸವನ್ನು ಈಕೆ ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಾರೆ.ಈ ಕೆಲಸ ತನ್ನದಲ್ಲ ಎಂದು ಇವರು ಸುಮ್ಮನಾಗಬಹುದಿತ್ತು. ಆದರೆ, ತಾನು ಹಣ್ಣು ಮಾರಾಟ ಮಾಡುವ ನಿಲ್ದಾಣದ ಸ್ವಚ್ಛತೆಯ ಬಗ್ಗೆ ಈ ಮಹಿಳೆ ಕಾಳಜಿ ತೋರಿದ್ದಾರೆ. ಇದೇ ಕಾರಣಕ್ಕೆ ಇವರು ಈಗ ಎಲ್ಲರ ಗಮನ ಸೆಳೆದಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಈಕೆಯ ಕಾರ್ಯವನ್ನು ಮೆಚ್ಚಿಕೊಂಡಿದ್ದಲ್ಲದೆ ಸಹಾಯ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಹೆಸರು ಮೋಹಿನಿ ಕೃಷ್ಣ ಗೌಡ ಎಂದು ಗೊತ್ತಾಗಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಜತೆಗೆ, ಮೋಹಿನಿ ಅವರ ಕಾರ್ಯವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇವರ ಕಾರ್ಯ ಮಾದರಿಯೂ ಆಗಿದೆ.

Anand Mahindra retweeted a video of a woman who was seen cleaning up a bus stand in Karnataka. Adarsh Hegde, who initially shared this video, mentioned that she is a fruit seller who operates in Ankola bus stand. She serves chopped fruits in a plate made of leaves. However, once the customers are done eating, they litter the bus stop by throwing them in and around the premises.