ಐಎನ್ಎಸ್ ಮೀಡಿಯಾ ಲಂಚ ಪ್ರಕರಣ ; ಕೊಡಗಿನಲ್ಲಿ ಕಾರ್ತಿ ಚಿದಂಬರಂ 11 ಕೋಟಿ ಆಸ್ತಿ ಇಡಿ ಮುಟ್ಟುಗೋಲು 

19-04-23 11:03 pm       HK News Desk   ದೇಶ - ವಿದೇಶ

ಐಎನ್ಎಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ್ದೆನ್ನಲಾದ, ಕೊಡಗು ಜಿಲ್ಲೆಯಲ್ಲಿರುವ 11.04 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. 

ನವದೆಹಲಿ, ಎ.19 : ಐಎನ್ಎಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ್ದೆನ್ನಲಾದ, ಕೊಡಗು ಜಿಲ್ಲೆಯಲ್ಲಿರುವ 11.04 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. 

ಈ ಕುರಿತು ಪ್ರಕಟಣೆ ನೀಡಿರುವ ಜಾರಿ ನಿರ್ದೇಶನಾಲಯ, “ಕೊಡಗಿನಲ್ಲಿ ಕಾರ್ತಿಯವರು ಒಟ್ಟು ನಾಲ್ಕು ಆಸ್ತಿಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ಸ್ಥಿರಾಸ್ತಿಯಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ನ್ಯಾಯಾಲಯದಿಂದ ಜಪ್ತಿ ಆದೇಶವನ್ನು ತಂದು ಈ ಕ್ರಮ ಕೈಗೊಳ್ಳಲಾಗಿದೆ’’ ಎಂದು ಹೇಳಿದೆ. 

ಐಎನ್ ಎಕ್ಸ್ ಮೀಡಿಯಾ ಪಿ. ಚಿದಂಬರಂ ವಿರುದ್ಧ ಕೇಂದ್ರದಲ್ಲಿ ಸಚಿವರಾಗಿದ್ದಾಗ, ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ) ವತಿಯಿಂದ ಒಪ್ಪಿಗೆಯ ಪ್ರಮಾಣ ಪತ್ರ ಕೊಡಿಸಲು ಲಂಚ ಪಡೆದಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಆ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ.ಯು, ಚಿದಂಬರಂ ಅವರು ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಿಂದ ತಾವು ಕೋಟ್ಯಂತರ ರೂ. ಲಂಚವನ್ನು ನೇರವಾಗಿ ಪಡೆದಿಲ್ಲ. ಅದನ್ನು ಕಾರ್ತಿ ಚಿದಂಬರಂ ಅವರ ಹೆಸರಿನಲ್ಲಿ ಕೆಲವಾರು ನಕಲಿ ಕಂಪನಿಗಳನ್ನು ತೆರೆದು ಅವುಗಳಲ್ಲಿ ಹೂಡಿಕೆ ಮಾಡಿಸಲಾಗಿದ್ದು, ಆ ಕಂಪನಿಗಳ ಹೆಸರಿನಲ್ಲಿ ಆಸ್ತಿಪಾಸ್ತಿಗಳನ್ನು ಖರೀದಿ ಮಾಡಲಾಗಿದೆ. ಅವುಗಳಲ್ಲಿ ಕೊಡಗಿನಲ್ಲಿರುವ ಆಸ್ತಿಗಳೂ ಸೇರಿವೆ. ಇದುವರೆಗೆ, ಕಾರ್ತಿ ಚಿದಂಬರಂ ಅವರು ಅಡಗಿಸಿಟ್ಟಿದ್ದ 65.88 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ವಿವರಿಸಿದೆ.

Assets worth ₹ 11.04 crore of Congress MP Karti Chidambaram and others have been seized by the Enforcement Directorate for alleged money laundering in the INX Media case. The seized assets include a property in Karnataka's Coorg district, the ED said in a statement.