ಬ್ರೇಕಿಂಗ್ ನ್ಯೂಸ್
25-04-23 06:29 pm HK News Desk ದೇಶ - ವಿದೇಶ
ತೃಶ್ಯೂರು, ಎ.25: ಮೊಬೈಲ್ ಫೋನ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಮೃತಪಟ್ಟ ಘಟನೆ ಕೇರಳದ ತೃಶ್ಶೂರು ಜಿಲ್ಲೆಯ ತಿರುವಲಮಲ ಎಂಬಲ್ಲಿ ನಡೆದಿದೆ.
ಮೂರನೇ ಕ್ಲಾಸ್ ಓದುತ್ತಿದ್ದ ಆದಿತ್ಯಶ್ರೀ ಎಂಬ ಬಾಲಕಿ ಮೃತಪಟ್ಟವಳು. ನಿನ್ನೆ ರಾತ್ರಿ 10.30ರ ಸುಮಾರಿಗೆ ತನ್ನ ಮನೆಯಲ್ಲಿ ಅಜ್ಜಿಯ ಜೊತೆಗೆ ಕುಳಿತು ಮೊಬೈಲಿನಲ್ಲಿ ವಿಡಿಯೋ ನೋಡುತ್ತಿದ್ದಾಗಲೇ ಮೊಬೈಲ್ ಸ್ಫೋಟಗೊಂಡಿದೆ. ಮುಖ ಮತ್ತು ಕೈಗಳಿಗೆ ಗಂಭೀರ ಸುಟ್ಟು ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಮನೆಯವರು ಆಸ್ಪತ್ರೆಗೆ ತಲುಪಿಸಿದ್ದರು. ಅಷ್ಟರಲ್ಲಿ ಬಾಲಕಿ ಸಾವು ಕಂಡಿದ್ದಾಳೆ.
ಹೆಚ್ಚು ಹೊತ್ತು ವಿಡಿಯೋ ನೋಡುತ್ತಿದ್ದರಿಂದ ಬ್ಯಾಟರಿ ಬಿಸಿಯಾಗಿ ಮೊಬೈಲ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಫಾರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದು, ಹೇಗೆ ಬ್ಲಾಸ್ಟ್ ಆಯ್ತು, ಸ್ಫೋಟಗೊಂಡಿದ್ದೇ ಬಾಲಕಿ ಸಾವಿಗೆ ಕಾರಣವೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಆ ಮೊಬೈಲ್ ಫೋನನ್ನು ಮೂರು ವರ್ಷಗಳ ಹಿಂದೆ ಖರೀದಿಸಿದ್ದು, ಒಂದು ವರ್ಷದ ಹಿಂದೆ ಅದಕ್ಕೆ ಬ್ಯಾಟರಿ ಹಾಕಲಾಗಿತ್ತು.
ನಿನ್ನೆ ರಾತ್ರಿ ಸ್ಫೋಟಗೊಂಡ ಸಂದರ್ಭದಲ್ಲಿ ಅಜ್ಜಿ ಊಟ ತರಲೆಂದು ಒಳಗೆ ಹೋಗಿದ್ದರು. ಈ ವೇಳೆ, ಮೊಬೈಲ್ ಸ್ಫೋಟ ಆಗಿದ್ದು, ಮುಖ ಮತ್ತು ಕೈಗಳಿಗೆ ತೀವ್ರ ಗಾಯವಾಗಿತ್ತು. ಅಂಗೈ ಪೂರ್ತಿ ಒಡೆದು ಬಿರುಕು ಬಿಟ್ಟಿತ್ತು. ಅಷ್ಟರ ಮಟ್ಟಿಗೆ ಸ್ಫೋಟ ಆಗಿದ್ದು, ಇದರ ಆಘಾತದಿಂದ ಬಾಲಕಿ ಸಾವನ್ನಪ್ಪಿರುವ ಸಾಧ್ಯತೆಯಿದೆ. ಬಾಲಕಿಯ ತಂದೆ ಅಶೋಕ್ ಕುಮಾರ್ ಪಜಯನ್ನೂರು ಬ್ಲಾಕ್ ಪಂಚಾಯತ್ ಮಾಜಿ ಸದಸ್ಯರಾಗಿದ್ದು, ಬಾಲಕಿಯ ಸಾವು ಭಾರೀ ದಿಗ್ಭ್ರಾಂತಿ ಸೃಷ್ಟಿಸಿದೆ.
An eight-year-old girl was killed after a mobile phone exploded in her hand while she was watching a video at her house in Thiruvilwamala here. The deceased is Adithya Sree, daughter of a former member of Pazhayannur block panchayat Ashok Kumar and Soumya.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm