ದಾಂತೇವಾಡ ; ನಕ್ಸಲ್ ಬಾಂಬ್ ದಾಳಿಯಲ್ಲಿ ಹತ್ತು ಪೊಲೀಸರ ಸಾವು, ಛಿದ್ರಗೊಂಡ ದೇಹಗಳು, ಸುಟ್ಟು ಹೋದ ವ್ಯಾನ್ !  

26-04-23 07:17 pm       HK News Desk   ದೇಶ - ವಿದೇಶ

ಛತ್ತೀಸ್ಗಢ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ ಭೀಕರ ನಕ್ಸಲ್ ದಾಳಿ ನಡೆದಿದ್ದು ಹತ್ತು ಮಂದಿ ಪೊಲೀಸರು ಸೇರಿ ಹನ್ನೊಂದು ಮಂದಿ ದುರ್ಮರಣಕ್ಕೀಡಾಗಿದ್ದಾರೆ. 

ರಾಯ್ ಪುರ, ಎ.26 : ಛತ್ತೀಸ್ಗಢ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ ಭೀಕರ ನಕ್ಸಲ್ ದಾಳಿ ನಡೆದಿದ್ದು ಹತ್ತು ಮಂದಿ ಪೊಲೀಸರು ಸೇರಿ ಹನ್ನೊಂದು ಮಂದಿ ದುರ್ಮರಣಕ್ಕೀಡಾಗಿದ್ದಾರೆ. 

ದಾಂತೆವಾಡ ಪ್ರದೇಶದಲ್ಲಿ ನಕ್ಸಲರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ದಳದ ಪೊಲೀಸರು ಆ ಭಾಗಕ್ಕೆ ತೆರಳಿದ್ದರು. ಅಲ್ಲಿಂದ ಖಾಸಗಿ ಮಿನಿ ವ್ಯಾನ್ ನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಐಇಡಿ ಬಾಂಬ್ ಸ್ಫೋಟಗೊಂಡಿದೆ. ಬಾಂಬ್ ದಾಳಿಯಲ್ಲಿ ವ್ಯಾನ್ ಛಿದ್ರಗೊಂಡಿದ್ದು ಅದರಲ್ಲಿದ್ದ ಚಾಲಕ ಸಹಿತ ಹನ್ನೊಂದು ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. 

Chhattisgarh Maoist (Naxal) attack live updates: 10 security personnel  killed

10 Policemen Among 11 Killed In Maoist Attack In Chhattisgarh's Dantewada -  odishabytes

ನಿನ್ನೆಯಷ್ಟೇ ಬಸ್ತಾರ್ ವಿಭಾಗದ ಐಜಿಪಿ ಸುಂದರ್ ರಾಜ್ ನಕ್ಸಲರ ಬಗ್ಗೆ ಮಾತನಾಡಿದ್ದರು. ಪ್ರತಿ ವರ್ಷ 400 ಮಂದಿ ಮಾವೋವಾದಿ ನಕ್ಸಲರು ಪೊಲೀಸರಿಗೆ ಶರಣಾಗುತ್ತಾರೆ. ಈ ಬಾರಿಯೂ ನೂರಾರು ನಕ್ಸಲ್ ವಾದಿಗಳು ಶರಣಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಕ್ಸಲ್ ಕಾರ್ಯಾಚರಣೆಗೆ ಪೊಲೀಸರು ಮುಂದಾಗಿದ್ದರು. ಇಂದು ಮಧ್ಯಾಹ್ನ ಪೊಲೀಸ್ ವ್ಯಾನ್ ಬರುತ್ತಿದ್ದಾಗಲೇ ಸ್ಫೋಟ ಆಗಿದ್ದು ಸ್ಥಳದಲ್ಲೇ ಹತ್ತು ಜನ ಪೊಲೀಸರು ಸಾವನ್ನಪ್ಪಿದ್ದಾರೆ. 

Chhattisgarh Naxal Attack live updates: PM Modi condoles death of jawans  killed in Dantewada attack - The Times of India

ಬಾಂಬ್ ದಾಳಿಯಾದ ಸ್ಥಳದಲ್ಲಿ ವ್ಯಾನ್ ಛಿದ್ರ ಛಿದ್ರಗೊಂಡಿದ್ದಲ್ಲದೆ, ಪೂರ್ತಿ ಸುಟ್ಟು ಹೋಗಿದೆ. ಪೊಲೀಸರ ದೇಹದ ಭಾಗಗಳು ಚದುರಿ ಬಿದ್ದಿದ್ದವು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿದ್ದು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. 

ಘಟನೆಯನ್ನು ಖಂಡಿಸಿರುವ ಛತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್, ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ. ಯಾರನ್ನೂ ಬಿಡುವುದಿಲ್ಲ. ಅತ್ಯಂತ ದುಃಖದ ಘಟನೆ ನಡೆದು ಹೋಗಿದೆ. ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಛತ್ತೀಸ್ಗಢ ಮುಖ್ಯಮಂತ್ರಿಗೆ ಫೋನ್ ಕರೆ ಮಾಡಿದ್ದು ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

Eleven people, including ten security personnel, were killed in an encounter with alleged Maoists in Chhattisgarh’s Dantewada on Wednesday afternoon. The deceased were jawans of District Reserve Guard (DRG), a locally raised anti-insurgency unit and were out for an anti-Naxal operations when they were ambushed, said the police.