9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಲಕ್ನೋದಲ್ಲಿ ಪತ್ತೆ ; ಯುವಕನೊಂದಿಗೆ ಓಡಿ ಹೋಗಿದ್ದಾಕೆ ಕಾಸರಗೋಡು ಪೊಲೀಸರ ವಶಕ್ಕೆ 

04-05-23 03:48 pm       HK News Desk   ದೇಶ - ವಿದೇಶ

ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಂಜೇಶ್ವರದ ವಿವಾಹಿತ ಮಹಿಳೆಯೊಬ್ಬರು ಯುವಕನೊಂದಿಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಪತ್ತೆಯಾಗಿದ್ದಾರೆ.

ಮಂಜೇಶ್ವರ, ಮೇ 4 : ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಂಜೇಶ್ವರದ ವಿವಾಹಿತ ಮಹಿಳೆಯೊಬ್ಬರು ಯುವಕನೊಂದಿಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಪತ್ತೆಯಾಗಿದ್ದಾರೆ.

ಕಾಸರಗೋಡು ಡಿವೈಎಸ್ಪಿ ಪಿ.ಕೆ ಸುಧಾಕರನ್ ನೇತೃತ್ವದ ತನಿಖಾ ತಂಡ ಜೋಡಿಯನ್ನು ಲಕ್ನೋದಲ್ಲಿ ವಶಕ್ಕೆ ಪಡೆದಿದ್ದು ಉತ್ತರ ಪ್ರದೇಶದಿಂದ ಕಾಸರಗೋಡಿಗೆ ಕರೆ ತಂದಿದ್ದಾರೆ. ಮೂಲತಃ ಪಾವೂರು ನಿವಾಸಿಯಾಗಿದ್ದು ಮಂಜೇಶ್ವರದ ಫ್ಲಾಟ್ನಲ್ಲಿ ವಾಸಿಸುತ್ತಿದ್ದ ಝಾಹಿದಾ (33) ಇದೀಗ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. 

ಝಾಹಿದಾ ಒಂಬತ್ತು ತಿಂಗಳ ಹಿಂದೆ ತನ್ನ 12 ವರ್ಷದ ಮಗನನ್ನು ಶಾಲೆಗೆ ಬಿಟ್ಟು ಬಂದು ಮಂಗಳೂರಿನ ಆಯುರ್ವೇದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೊರಗಡೆ ಹೋಗಿದ್ದು ಮತ್ತೆ ತಿರುಗಿ ಬಂದಿರಲಿಲ್ಲ. ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು ಝಾಹಿದಾ ಲಕ್ನೋದಲ್ಲಿರುವುದನ್ನು ಪತ್ತೆ ಮಾಡಿದ್ದರು. 

ಈ ನಡುವೆ, ಝಾಹಿದಾ ಮುಂಬೈನಲ್ಲಿರುವ ಮಾಹಿತಿ ಮೇರೆಗೆ ಮಂಜೇಶ್ವರ ಪೊಲೀಸರು ಅಲ್ಲಿಯೂ ಹುಡುಕಾ ನಡೆಸಿದ್ದರು. ಪೊಲೀಸರು ಬೆನ್ನು ಬಿದ್ದ ವಿಷಯ ತಿಳಿದು ಜೋಡಿ ಮುಂಬೈನಿಂದ ಲಕ್ನೋಗೆ ಪರಾರಿಯಾಗಿತ್ತು ಎನ್ನಲಾಗಿದೆ. ಇದೇ ವೇಳೆ, ಪೊಲೀಸ್ ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆಂದು ಕುಟುಂಬಸ್ಥರು ಮುಖ್ಯಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಗೃಹ ಇಲಾಖೆ ಸೂಚನೆ ಬಳಿಕ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಹುಡುಕಾಟ ನಡೆಸಲಾಗಿತ್ತು.

Woman who went missing from manjeshwar in Kasaragod  found with lover in Lucknow after 9 months. Shahida (38), a native of Talassery and wife of Harris, who is employed in the Gulf, was missing since 9 months. She was found missing after she went to drop her son to the school.