ಬ್ರೇಕಿಂಗ್ ನ್ಯೂಸ್
07-05-23 10:45 pm HK News Desk ದೇಶ - ವಿದೇಶ
ಬೇನಿ, ಮೇ 7: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ 203 ಮಂದಿ ಮೃತಪಟ್ಟಿದ್ದು, ಇನ್ನೂ ನೂರಾರು ಜನರು ಕಣ್ಮರೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ ಎಂದು ಆಡಳಿತ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಬುಶುಶುವಿನಲ್ಲಿ ಅವಶೇಷಗಳ ಅಡಿಯಿಂದ 203 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಕಲೆಹೆ ಪ್ರದೇಶದ ಆಡಳಿತಗಾರ ಥಾಮಸ್ ಬಕೆಂಗಾ ತಿಳಿಸಿದ್ದಾರೆ.
ದಕ್ಷಿಣ ಕಿವು ಪ್ರಾಂತ್ಯದಲ್ಲಿನ ಕಲೆಹೆ ಪ್ರದೇಶದಲ್ಲಿ ಗುರುವಾರ ಭಾರಿ ಮಳೆ ಸುರಿದಿದೆ. ಇದರ ಪರಿಣಾಮ ನದಿಗಳು ಏಕಾಏಕಿ ಉಕ್ಕಿ ಹರಿದಿವೆ. ಬುಶುಶು ಮತ್ತು ನ್ಯಾಮುಕುಬಿ ಗ್ರಾಮಗಳು ಮುಳುಗಿ ಹೋಗಿವೆ. ನ್ಯಾಮುಕುಬಿಯಲ್ಲಿ ಗುರುವಾರ ವಾರದ ಮಾರುಕಟ್ಟೆ ನಡೆಯುವ ಸ್ಥಳದಲ್ಲಿ ಬೆಟ್ಟ ಕೂಡ ಕುಸಿದಿದ್ದರಿಂದ ಭಾರಿ ಅನಾಹುತವಾಗಿದೆ ಎಂದು ಬಕೆಂಗಾ ಹೇಳಿದ್ದಾರೆ.
ಈ ಪ್ರದೇಶದಲ್ಲಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕ ಅಣೆಕಟ್ಟುಗಳು ವಿಪರೀತ ಮಳೆಯ ಆರ್ಭಟವನ್ನು ಎದುರಿಸಲಾಗದೆ ಒಡೆದುಹೋಗಿವೆ. ಇದರಿಂದಾಗಿ ಅನೇಕ ಹಳ್ಳಿಗಳು ಜಲಾವೃತವಾಗಿವೆ. ಅನೇಕ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಜತೆಗೆ ಕೃಷಿ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ.
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಡೆನಿಸ್ ಮುಕ್ವೆಗೆ ಅವರು, ಜನರಿಗೆ ತುರ್ತು ವೈದ್ಯಕೀಯ ನೆರವುಗಳನ್ನು ಒದಗಿಸಲು ಸರ್ಜನ್ಗಳು, ಅನಸ್ತೇಶಿಯಾ ಪರಿಣತರು ಮತ್ತು ತಂತ್ರಜ್ಞರ ತಂಡವೊಂದನ್ನು ಈ ಪ್ರದೇಶಕ್ಕೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ರವಾಂಡದ ಜತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕಿವು ಪ್ರಾಂತ್ಯದಲ್ಲಿ ಆಗಾಗ್ಗೆ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸುತ್ತಿರುತ್ತವೆ. ಈ ವಾರ ಸುರಿದ ಭಾರಿ ಮಳೆಗೆ ರವಾಂಡದಲ್ಲಿ ಕೂಡ ನೆರೆ ಮತ್ತು ಭೂಕುಸಿತಗಳು ಉಂಟಾಗಿವೆ. 130 ಮಂದಿ ಗಾಯಗೊಂಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಕಾಂಗೋದಲ್ಲಿ 2014ರ ಅಕ್ಟೋಬರ್ನಲ್ಲಿ ಭಾರಿ ಮಳೆಯಿಂದ ಇದೇ ರೀತಿಯ ವಿನಾಶಕಾರಿ ಸನ್ನಿವೇಶ ನಿರ್ಮಾಣವಾಗಿತ್ತು. ಅದರಿಂದ 700ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿದ್ದವು. ಆ ವೇಳೆ 130ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿತ್ತು.
ಪೂರ್ವ ಆಫ್ರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಆರ್ಭಟಿಸುತ್ತಿದ್ದು, ಜನರ ಬದುಕನ್ನು ಹೈರಾಣಾಗಿಸಿದೆ. ಉಗಾಂಡಾ ಮತ್ತು ಕೀನ್ಯಾದ ಅನೇಕ ಭಾಗಗಳಲ್ಲಿ ಕೂಡ ವಿಪರೀತ ಮಳೆಯಾಗುತ್ತಿದೆ. ಹತ್ತು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಈ ನದಿಗಳಿಂದ ನಾಲ್ಕನೇ ಬಾರಿ ಇಷ್ಟು ಭೀಕರ ಅವಘಡ ಉಂಟಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Nearly 200 people died as a result of flash floods and landslides in the eastern Democratic Republic of Congo, with many more still missing in South Kivu. Heavy rainfall in Kalehe territory in South Kivu province caused rivers to overflow on Thursday, inundating hundreds of homes in Bushushu and Nyamukubi. Rescue workers and survivors had to dig through the ruins on Saturday, looking for bodies. At the scene, Thomas Bakenge, administrator of Kalehe, the worst-hit territory, told reporters on the scene that 203 bodies had been recovered so far, and further efforts are underway, reported the Associated Press. Villagers wept as they gathered around some of the bodies recovered so far, which lay on the grass covered in muddy clothes near a rescue workers' post.
21-07-25 05:56 pm
HK News Desk
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm