ಭ್ರಷ್ಟಾಚಾರ ಆರೋಪ ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್, ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲೇ ಬಂಧನ

09-05-23 04:48 pm       HK News Desk   ದೇಶ - ವಿದೇಶ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ಹೊರಭಾಗದಲ್ಲಿ ಅರೆಸೇನಾ ಪಡೆಯ ರೇಂಜರ್‌ಗಳು ಮಂಗಳವಾರ ಬಂಧಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ.

ಇಸ್ಲಾಮಾಬಾದ್, ಮೇ 9: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ಹೊರಭಾಗದಲ್ಲಿ ಅರೆಸೇನಾ ಪಡೆಯ ರೇಂಜರ್‌ಗಳು ಮಂಗಳವಾರ ಬಂಧಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ.

ಈ ವೇಳೆ ನಡೆದ ಘರ್ಷಣೆಯಲ್ಲಿ ಇಮ್ರಾನ್ ಖಾನ್ ಅವರ ಪರ ವಕೀಲರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಅವರ ತಲೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಲ್ ಖಾದಿರ್ ಟ್ರಸ್ಟ್ ಹಗರಣ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಈ ಬಂಧನದ ಬೆನ್ನಲ್ಲೇ ಇಸ್ಲಾಮಾಬಾದ್‌ನ ಅನೇಕ ವಲಯಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.

Former Pakistan PM Imran Khan arrested from outside Islamabad High Court,  says his party

ಇಮ್ರಾನ್ ಖಾನ್ ಅವರನ್ನು ಸುತ್ತುವರಿದು ಬಂಧಿಸಿದ ಐವತ್ತಕ್ಕೂ ಹೆಚ್ಚು ರೇಂಜರ್‌ಗಳು, ಅವರನ್ನು ವಾಹನದಲ್ಲಿ ಕೂರಿಸಿ ಬೇರೆ ಸ್ಥಳಕ್ಕೆ ಕರೆದೊಯ್ಯವುದು ವಿಡಿಯೋಗಳಲ್ಲಿ ಕಾಣಿಸಿದೆ. ತಮ್ಮ ವಿರುದ್ಧ ದಾಖಲಾದ ಹಲವು ಎಫ್‌ಐಆರ್‌ಗಳಲ್ಲಿ ಜಾಮೀನು ಪಡೆಯುವ ಸಲುವಾಗಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ತೆರಳಿದ್ದರು. ಅವರನ್ನು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಬಂಧಿಸಿದೆ. ಬಳಿಕ ಅವರನ್ನು ಕಪ್ಪು ಬಣ್ಣದ ವಿಗೋ ಕಾರಿನಲ್ಲಿ ಬೇರೆಡೆಗೆ ಸ್ಥಳಾಂತರಸಲಾಗಿದೆ.

"ರೇಂಜರ್‌ಗಳು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಅಪಹರಿಸಿದ್ದಾರೆ. ಅದರ ದೃಶ್ಯಗಳಿವು. ಪಾಕಿಸ್ತಾನದ ಧೈರ್ಯಶಾಲಿ ಜನರು ಹೊರಗೆ ಬಂದು ತಮ್ಮ ದೇಶದ ಪರ ಹೋರಾಡಬೇಕು" ಎಂದು ಪಿಟಿಐ ಟ್ವೀಟ್ ಮಾಡಿದೆ.

Imran Khan Arrest LIVE Updates: Former Pakistan PM taken into custody from outside  Islamabad High Court | Pakistan News,The Indian Express

Imran Khan arrested from outside Islamabad High Court

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಲಂಡನ್‌ನಲ್ಲಿ ಬ್ರಿಟನ್ ರಾಜ ಚಾರ್ಲ್ಸ್ ಅವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಅವರು ಮಂಗಳವಾರ ಸ್ವದೇಶಕ್ಕೆ ವಾಪಸಾಗಬೇಕಿತ್ತು. ಆದರೆ ಇನ್ನೂ ಒಂದು ದಿನ ಅವರು ಬ್ರಿಟನ್ ಪ್ರವಾಸ ವಿಸ್ತರಿಸಿದ್ದು ಹಾಗೂ ಅದೇ ವೇಳೆ ಇಮ್ರಾನ್ ಖಾನ್ ಬಂಧನವಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

Ex-Pakistan PM Imran Khan arrested from outside Islamabad High Court -  India Today

ಈ ಬಂಧನವನ್ನು ಖಚಿಪಡಿಸಿರುವ ಇಸ್ಲಾಮಾಬಾದ್ ಪೊಲೀಸ್ ಮಹಾ ನಿರ್ದೇಶಕ (ಐಜಿಪಿ) ಡಾ ಅಕ್ಬರ್ ನಾಸಿರ್ ಖಾನ್, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಇಮ್ರಾನ್ ಖಾನ್ ಬಂಧನದ ಬೆನ್ನಲ್ಲೇ ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಮೆರ್ ಫರೂಕ್ ಅವರು 15 ನಿಮಿಷಗಳ ಒಳಗೆ ಇಸ್ಲಾಮಾಬಾದ್ ಐಜಿ ಮತ್ತು ಒಳಾಡಳಿತ ಕಾರ್ಯದರ್ಶಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಕೋರ್ಟ್ ಮುಂದೆ 15 ನಿಮಿಷಗಳಲ್ಲಿ ಹಾಜರಾಗುವಂತೆ ಹೆಚ್ಚುವರಿ ಅಟಾರ್ನಿ ಜನರಲ್‌ಗೆ ಸೂಚಿಸಿದ ಅವರು, ಬಂಧನದ ಹಿಂದೆ ಯಾರಿದ್ದಾರೆ ಎಂದು ಈ ಕೂಡಲೇ ಪತ್ತೆ ಮಾಡುವಂತೆ ಆದೇಶಿಸಿದ್ದಾರೆ.

"ತನಿಖೆ ನಡೆಯಬೇಕಿದ್ದರೆ, ಪ್ರಧಾನಿ ಮತ್ತು ಸಚಿವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುತ್ತದೆ" ಎಂದ ಸಿಜೆ, "ಯಾವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ನನಗೆ ತಿಳಿಸಿ" ಎಂದು ನಿರ್ದೇಶಿಸಿದ್ದಾರೆ.

Pakistan's former prime minister Imran Khan was arrested by paramilitary Rangers on Tuesday while he was present at the Islamabad High Court for the hearing of a corruption case, a day after he took on the country's powerful army for allegedly hatching a plot to kill him.His party confirmed the arrest of the 70-year-old former cricketer-turned-politician. The arrest comes a day after the powerful army had accused Khan of levelling baseless allegations against a senior officer of the spy agency ISI.