"ಸಿದ್ದು ಸಿಎಂ" ; ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿರುವ ಹೊತ್ತಲ್ಲೇ ಹೊಸ ಟ್ವಿಸ್ಟ್ , ಸಿಎಂ ಯಾರೆಂದೂ ಇನ್ನೂ ಅಂತಿಮವಾಗಿಲ್ಲ ಎಂದ ಸುರ್ಜೇವಾಲ, ನೀವೆ ಸಿಎಂ ಆಗಿ ಎಂದು ಖರ್ಗೆಗೆ ಡಿಕೆಶಿ ಆಫರ್

17-05-23 04:38 pm       HK News Desk   ದೇಶ - ವಿದೇಶ

ಕರ್ನಾಟಕ ಸಿಎಂ ಆಯ್ಕೆ ವಿಚಾರ ಸದ್ಯ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ ಆಗೇ ಬಿಟ್ಟರು ಎಂದು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿರುವ ಹೊತ್ತಲ್ಲೇ ಹೊಸ ಟ್ವಿಸ್ಟ್ ಸಿಕ್ಕಿದೆ.

ನವದೆಹಲಿ, ಮೇ 17: ಕರ್ನಾಟಕ ಸಿಎಂ ಆಯ್ಕೆ ವಿಚಾರ ಸದ್ಯ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ ಆಗೇ ಬಿಟ್ಟರು ಎಂದು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿರುವ ಹೊತ್ತಲ್ಲೇ ಹೊಸ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿ, "ಕರ್ನಾಟಕ ಸಿಎಂ ಯಾರೆಂದೂ ಇನ್ನೂ ಅಂತಿಮವಾಗಿಲ್ಲ" ಎಂದು ಹೇಳುವ ಮೂಲಕ, ಪಿಚ್ಚರ್ ಇನ್ನೂ ಬಾಕಿ ಇದೆ ಎನ್ನುವ ಸಂದೇಶ ನೀಡಿದ್ದಾರೆ.

ಬುಧವಾರ ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಮುಖ್ಯಮಂತ್ರಿ ಯಾರು ಎಂದು ಇನ್ನೂ ತೀರ್ಮಾನ ಆಗಿಲ್ಲ ಎಂದರು. ಯಾವುದೇ ಊಹಾಪೋಹಗಳಿಗೆ ಕಿವಿ ಕೊಡದಂತೆ ಅವರು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯನ್ನು ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲಿದ್ದಾರೆ ಎಂದರು.

After Court Setback, Rahul Gandhi To Vacate Bungalow On Saturday: Sources

ಇನ್ನು 24 ಗಂಟೆಗಳಲ್ಲಿ ಸಿಎಂ ಹೆಸರನ್ನು ಘೋಷಣೆ ಮಾಡಲಾಗುವುದು, 72 ಗಂಟೆಗಳ ಒಳಗೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಸುರ್ಜೇವಾಲಾ ಸ್ಪಷ್ಟನೆ ನೀಡಿದ್ದಾರೆ. ಇಬ್ಬರೂ ನಾಯಕರು ಬಲವಾಗಿ ಪಟ್ಟು ಹಿಡಿದು ಕೂತಿರುವುದರಿಂದಲೇ ಸಿಎಂ ಆಯ್ಕೆ ಕಸರತ್ತು ಮುಂದುವರೆದಿದೆ.

Who will be Karnataka CM? Amid Shivakumar-Siddaramaiah face-off new names  emerge | Latest News India - Hindustan Times

ಹೈಕಮಾಂಡ್ ಜೊತೆ ಹಲವು ಸುತ್ತಿನ ಮಾತುಕತೆ ಬಳಿಕವೂ ಸಿಎಂ ಆಯ್ಕೆ ಇನ್ನೂ ಕಗ್ಗಂಟಾಗೇ ಉಳಿದುಕೊಂಡಿದೆ. ಡಿಕೆಶಿ ಯಾವುದೇ ಕಾರಣಕ್ಕೂ ಪಟ್ಟು ಬಿಡಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಕೂಡ ಯಾವುದೇ ಒತ್ತಡಕ್ಕೇ ಮಣಿಯುತ್ತಿಲ್ಲ, ತನಗೆ ಸಿಎಂ ಪಟ್ಟವೇ ಬೇಕು ಎಂದು ಹಠ ಹಿಡಿದಿದ್ದಾರೆ. ಸದ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ತಲೆನೋವು ಶುರುವಾಗಿದೆ.

ಈಗಾಗಲೇ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಆಯ್ಕೆಯಾಗಿದ್ದಾರೆ ಎನ್ನುವ ವದಂತಿಗಳು ಹರಡಿದ್ದು, ಅವರ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಗೊಂದಲ ಉಂಟಾಗುತ್ತದೆ ಎಂದು ಎಚ್ಚೆತ್ತ ಬೆನ್ನಲ್ಲೇ ರಣದೀಪ್ ಸಿಂಗ್ ಸುರ್ಜೆವಾಲಾ ಮಾಧ್ಯಮಗಳ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಆದರೂ, ಸಿದ್ದರಾಮಯ್ಯ ಅವರ ಅಭಿಮಾನಿಗಳು ಮಾತ್ರ ಸಿದ್ದರಾಮಯ್ಯ ಅವರೇ ಸಿಎಂ ಎಂದು ಫ್ಲೆಕ್ಸ್, ಬ್ಯಾನರ್ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

BJP Mukt Dakshin Bharat": Mallikarjun Kharge hits out at BJP after  Karnataka win

ನೀವೆ ಸಿಎಂ ಆಗಿ ಎಂದು ಖರ್ಗೆಗೆ ಡಿಕೆಶಿ ಆಫರ್ ; 

ಇನ್ನು ಡಿಕೆ ಶಿವಕುಮಾರ್ ಅವರು ನನಗೆ ಸಿಎಂ ಸ್ಥಾನ ಸಿಗದಿದ್ದರೆ ನೀವೆ ಸಿಎಂ ಆಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ನಾನು ಸಿಎಂ ಆಗದಿದ್ದರೂ ಪರವಾಗಿಲ್ಲ, ಸಿದ್ದರಾಮಯ್ಯ ಆಗಬಾರದು, ಅವರು ಅಧಿಕಾರ ಅನುಭವಿಸಿದ್ದಾರೆ, ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ, ಈಗ ನೀವೇ ಸಿಎಂ ಆಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿಎಂ ಆಯ್ಕೆ ಕಸರತ್ತು ಇನ್ನೊಂದು ಆಯಾಮ ಪಡೆದುಕೊಂಡಿದೆ.

As suspense continues over who will be chosen as the next chief minister of Karnataka between DK Shivakumar and Siddaramaiah, Congress leader and All India Congress Committee (AICC) in-charge of Karnataka Randeep Surjewala on Wednesday said that the party chief has been authorised to appoint the leader of the legislature party and that is why deliberations are currently underway.