ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪಿಎ ಹೆಸರಲ್ಲಿ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಆಮಿಷ ; ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ ನಕಲಿ ಪಿಎ ಬಂಧನ

18-05-23 08:35 pm       HK News Desk   ದೇಶ - ವಿದೇಶ

ಗುಜರಾತ್ ಮೂಲದ ವ್ಯಕ್ತಿಯೊಬ್ಬ ತನ್ನನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪಿಎ ಎಂದು ಹೇಳಿಕೊಂಡು ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕರನ್ನು ಸಂಪರ್ಕಿಸಿ, ಸಚಿವ ಸ್ಥಾನ ಕೊಡಿಸುತ್ತೇನೆಂದು ಹೇಳಿ ಹಣ ಪೀಕಿಸಲು ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ನಾಗಪುರ ಪೊಲೀಸರು ಬಂಧಿಸಿದ್ದಾರೆ.

ನಾಗಪುರ, ಮೇ 18: ಗುಜರಾತ್ ಮೂಲದ ವ್ಯಕ್ತಿಯೊಬ್ಬ ತನ್ನನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪಿಎ ಎಂದು ಹೇಳಿಕೊಂಡು ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕರನ್ನು ಸಂಪರ್ಕಿಸಿ, ಸಚಿವ ಸ್ಥಾನ ಕೊಡಿಸುತ್ತೇನೆಂದು ಹೇಳಿ ಹಣ ಪೀಕಿಸಲು ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ನಾಗಪುರ ಪೊಲೀಸರು ಬಂಧಿಸಿದ್ದಾರೆ.

ಗುಜರಾತಿನ ಮೋರ್ಬಿ ಜಿಲ್ಲೆಯ ನೀರಜ್ ಸಿಂಗ್ ರಾಥೋಡ್ ಬಂಧಿತ ವ್ಯಕ್ತಿ. ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರಕಾರದಲ್ಲಿ ಸಚಿವ ಸ್ಥಾನ ಕೊಡಿಸುತ್ತೇನೆಂದು ಹೇಳಿ ನೀರಜ್ ಸಿಂಗ್ ಹಲವು ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದು ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದ. ಬಿಜೆಪಿ ಶಾಸಕರಾದ ವಿಕಾಸ್ ಕಾಂಭರೆ, ತೇಕ್ ಚಂದ್ ಸಾವರ್ಕರ್, ತಾನಾಜಿ ಮುಟ್ಕುಲೆ, ನಾರಾಯಣ್ ಕುಛೆ ಇವರನ್ನು ಸಂಪರ್ಕಿಸಿದ್ದ ನೀರಜ್ ಸಿಂಗ್, ಮುಂದಿನ ಬಾರಿ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನ ಕೊಡಿಸುತ್ತೇನೆಂದು ನಂಬಿಸಿದ್ದ. ಅಲ್ಲದೆ, ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.

ಇದಲ್ಲದೆ, ಫೋನಲ್ಲಿ ಜೆಪಿ ನಡ್ಡಾ ರೀತಿಯಲ್ಲೇ ಶಾಸಕರ ಜೊತೆಗೆ ಮಾತನಾಡುವಂತೆಯೂ ನೀರಜ್ ಸಿಂಗ್ ಮಾಡಿದ್ದ. ಶಾಸಕ ವಿಕಾಸ್ ಕಾಂಬರೆ ಅವರಿಗೆ ನಾಲ್ಕು ಬಾರಿ ಫೋನ್ ಮಾಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಸ್ಥಾನ ಕೊಡಿಸುವುದಾಗಿ ಹೇಳಿದ್ದ. ಪದೇ ಪದೇ ಫೋನ್ ಬಂದಿದ್ದರಿಂದ ಸಂಶಯಗೊಂಡ ವಿಕಾಸ್ ಕಾಂಬರೆ, ನಾಗಪುರ ಪೊಲೀಸರಿಗೆ ದೂರು ಕೊಟ್ಟಿದ್ದರು. 5-6 ಬಾರಿ ಫೋನಾಯಿಸಿ, ಗುಜರಾತಿನಲ್ಲಿ ದೊಡ್ಡ ಕಾರ್ಯಕ್ರಮ ನಡೆಸಲು ಹಣ ಎರೇಂಜ್ ಮಾಡುವಂತೆ ಜೆಪಿ ನಡ್ಡಾ ಪಿಎ ಹೆಸರಲ್ಲಿ ಕರೆ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ತನಿಖೆ ನಡೆಸಿದ ಪೊಲೀಸರು ಗುಜರಾತಿನ ನಕಲಿ ಪಿಎ ವ್ಯಕ್ತಿಯನ್ನು ಬಂಧಿಸಿದ್ದಾರೆ.

 The man from Gujarat's Ahmedabad arrested for allegedly taking money from three MLAs in Maharashtra on the promise of ministerial berths in the Eknath Shinde-led state government is being brought to Nagpur by the police for further action, a senior official said on Wednesday.