ಬೆಂಗಳೂರು- ಮಂಗಳೂರು- ಕಾಸರಗೋಡು ಡ್ರಗ್ಸ್ ಜಾಲ ; ಕಿಂಗ್ ಪಿನ್ ನೈಜೀರಿಯನ್ ಯುವತಿ ಬೇಕಲ ಪೊಲೀಸರ ಬಲೆಗೆ

18-05-23 10:17 pm       HK News Desk   ದೇಶ - ವಿದೇಶ

ಕಾಸರಗೋಡು, ಮಂಗಳೂರು, ಬೆಂಗಳೂರು ನಡುವೆ ಬೇರು ಬಿಟ್ಟಿದ್ದ ಭಾರೀ ಡ್ರಗ್ಸ್ ಜಾಲವನ್ನು ಬೇಕಲ ಪೊಲೀಸರು ಪತ್ತೆ ಮಾಡಿದ್ದು, ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯನ್ ಮೂಲದ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.

ಕಾಸರಗೋಡು, ಮೇ 18: ಕಾಸರಗೋಡು, ಮಂಗಳೂರು, ಬೆಂಗಳೂರು ನಡುವೆ ಬೇರು ಬಿಟ್ಟಿದ್ದ ಭಾರೀ ಡ್ರಗ್ಸ್ ಜಾಲವನ್ನು ಬೇಕಲ ಪೊಲೀಸರು ಪತ್ತೆ ಮಾಡಿದ್ದು, ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯನ್ ಮೂಲದ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.

ನೈಜೀರಿಯಾದ ಲಾಗೋಸ್ ನಿವಾಸಿ, ಸ್ಟೂಡೆಂಟ್ ಪಾಸ್ ಪೋರ್ಟ್ ನಲ್ಲಿ ಬೆಂಗಳೂರಿಗೆ ಬಂದು ಯಲಹಂಕದಲ್ಲಿ ಅವಿತುಕೊಂಡಿದ್ದ ಹಫ್ಸಾ ರಿಹಾನತ್ ಉಸ್ಮಾನ್ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎಪ್ರಿಲ್ ತಿಂಗಳಲ್ಲಿ ಬೇಕಲ ಬಳಿ ಬೆಂಗಳೂರಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿನಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಪ್ರಮುಖ ಆರೋಪಿ ಅಬುಬಕ್ಕರ್ ಗೆ ನೈಜೀರಿಯನ್ನರು ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ಪತ್ತೆಯಾಗಿತ್ತು.

ಎರಡೂವರೆ ವರ್ಷದಲ್ಲಿ ಕಾಸರಗೋಡು ಜಿಲ್ಲೆ ವ್ಯಾಪ್ತಿಯಲ್ಲಿ 35 ಬಾರಿ ಡ್ರಗ್ಸ್ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದರು. ಇತ್ತೀಚೆಗೆ ಬೇಕಲದಲ್ಲಿ 153 ಗ್ರಾಮ್ ಎಂಡಿಎಂಎ ಡ್ರಗ್ಸ್ ಅನ್ನು ಪತ್ತೆ ಮಾಡಿದ್ದು ದೊಡ್ಡ ಪ್ರಮಾಣದ್ದಾಗಿತ್ತು. ಹತ್ತು ಗ್ರಾಮ್ ಅಧಿಕ ಡ್ರಗ್ಸ್ ಪತ್ತೆಯಾದಲ್ಲಿ ಅದು ಕಮರ್ಶಿಯಲ್ ಎಂದು ಪೊಲೀಸರು ಪರಿಗಣಿಸುತ್ತಿದ್ದರು. ನಾವು ದೊಡ್ಡ ಮೀನನ್ನು ಹಿಡಿದಿದ್ದೇವೆ ಎಂದು ಕಾಸರಗೋಡು ಎಸ್ಪಿ ವೈಭವ್ ಸಕ್ಸೇನಾ ಹೇಳಿದ್ದಾರೆ. ಪೊಲೀಸರ ತನಿಖೆಯಲ್ಲಿ ಹಫ್ಸಾ ನಕಲಿ ಸಿಮ್ ಬಳಕೆ ಮಾಡುತ್ತಿರುವುದು ಕಂಡುಬಂದಿತ್ತು. ನಕಲಿ ಸಿಮ್ ಅನ್ನು ವಾಟ್ಸಪ್ ಗೆ ಮಾತ್ರ ಬಳಸುತ್ತಿದ್ದಳು.

ಆರೋಪಿ ಅಬುಬಕ್ಕರ್ ಪೇಟಿಎಂ ಮೂಲಕ ಹಣ ಕಳಿಸಿ, ಅದರ ಸ್ಕ್ರೀನ್ ಶಾಟನ್ನು ಆಕೆಗೆ ಕಳಿಸುತ್ತಿದ್ದ. ಆನಂತರವೇ, ಹಫ್ಸಾ ಪ್ರತಿ ಬಾರಿ ಎಂಡಿಎಂಎ ಡ್ರಗ್ಸ್ ಅನ್ನು ನಿಗದಿತ ವ್ಯಕ್ತಿಗಳ ಮೂಲಕ ಪೂರೈಸುತ್ತಿದ್ದಳು. ಆಕೆಯ ಖಾತೆಗೆ ಪ್ರತಿ ತಿಂಗಳು 60ರಿಂದ 70 ಲಕ್ಷ ಹಣ ರವಾನೆಯಾಗುತ್ತಿರುವುದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಅಬುಬಕ್ಕರ್ ಒಂದು ಲಕ್ಷ ರೂಪಾಯಿ ಹಣವನ್ನು ಪೇಟಿಎಂ ಮೂಲಕ ಕಳಿಸಿದ್ದನ್ನು ಆಧರಿಸಿ ಬೇಕಲ ಪೊಲೀಸರು ಆಕೆಯ ಬೆನ್ನು ಬಿದ್ದಿದ್ದರು. ಆದರೆ ರೂಬಿ ದೇವಿ ಎಂದು ವಾಟ್ಸಪ್ ಸಿಮ್ ತೋರಿಸುತ್ತಿದ್ದರೂ, ಅದು ಲೊಕೇಶನ್ ತೋರಿಸುತ್ತಿರಲಿಲ್ಲ. ಬೇಕಲ ಡಿವೈಎಸ್ಪಿ ಸುನಿಲ್ ಕುಮಾರ್, ಬಳಿಕ ಬೆಂಗಳೂರು ಪೊಲೀಸರು ನೆರವು ಪಡೆದು ತನಿಖೆ ನಡೆಸಿದಾಗ, ಹಫ್ಸಾ ಬೇರೆಯದ್ದೇ ಸಿಮ್ ಬಳಸುತ್ತಿರುವುದು ಮತ್ತು ಅದರ ಮೂಲಕ ಸಂವಹನ ನಡೆಸುತ್ತಿರುವುದು ಕಂಡುಬಂದಿತ್ತು.

ಯಲಹಂಕದಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದ ಹಫ್ಸಾಳ ಮನೆಗೆ ಪೊಲೀಸರು ದಾಳಿ ನಡೆಸಿದಾಗ, ಅಲ್ಲಿ ಎಲ್ಲವೂ ಚೊಕ್ಕವಾಗಿತ್ತು. ಯಾವುದೇ ಡ್ರಗ್ಸ್ ಸುಳಿವೂ ಇರಲಿಲ್ಲ. ವಿಚಾರಣೆ ನಡೆಸಿದಾಗ, ಆಕೆಯ ಬಳಿ ಪಾಸ್ ಪೋರ್ಟ್ ಇರಲಿಲ್ಲ. ಒಂದು ವರ್ಷದ ಸ್ಟೂಡೆಂಟ್ ವೀಸಾ ಮೇಲೆ ನೈಜೀರಿಯಾದಿಂದ ಬಂದಿರುವುದು ತಿಳಿದು ಪ್ರಶ್ನೆ ಮಾಡಿದಾಗ, ಬೆಂಗಳೂರಿನಲ್ಲಿ ಕಾಲೇಜು ಸೇರಿದ್ದೂ ಇಲ್ಲ ಎಂದು ಕಂಡುಬಂತು. ಪೊಲೀಸರು ಅದೇ ಆಧಾರದಲ್ಲಿ ವಶಕ್ಕೆ ಪಡೆದಿದ್ದಾರೆ. ಕಾಸರಗೋಡು ಪೊಲೀಸರು ಹಲವು ಬಾರಿ ಬೆಂಗಳೂರಿಗೆ ತೆರಳಿ, ಹುಡುಕಾಟ ನಡೆಸಿದ್ದರೂ, ಆಕೆಯ ಸುಳಿವು ಸಿಕ್ಕಿರಲಿಲ್ಲ. ಮೊಬೈಲ್ ಸಿಮ್ ನಕಲಿಯಾಗಿದ್ದರಿಂದ ಲೊಕೇಶನ್ ಪತ್ತೆ ಮಾಡುವುದು ಕಷ್ಟವಾಗಿತ್ತು.

ವಿಚಾರಣೆ ವೇಳೆ, ಹಫ್ಸಾ ಸೇರಿ ನಾಲ್ವರು ನೈಜೀರಿಯನ್ನರ ತಂಡ ಡ್ರಗ್ಸ್ ಪೂರೈಕೆ ಜಾಲದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಹಫ್ಸಾ ಬೆಂಗಳೂರಿನಲ್ಲಿ ಪ್ರಮುಖ ಕೊಂಡಿಯಾಗಿದ್ದರೆ, ಇನ್ನಿಬ್ಬರು ದೆಹಲಿಯಲ್ಲಿದ್ದಾರೆ. ಇನ್ನೊಬ್ಬ ಗೋವಾದಲ್ಲಿದ್ದುಕೊಂಡು ಡ್ರಗ್ಸ್ ಜಾಲ ನಡೆಸುತ್ತಿದ್ದರು. ನಾಲ್ವರು ಸದಸ್ಯರಿಗೆ ಹಫ್ಸಾ ರೆಹಾನತ್ ಚೀಫ್ ಎಕ್ಸಿಕ್ಯುಟಿವ್ ರೀತಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ಕಾಸರಗೋಡು ಎಸ್ಪಿ ವೈಭವ್ ಸಕ್ಸೇನಾ ತಿಳಿಸಿದ್ದಾರೆ. 

Bekal police, investigating the seizure of 153 g MDMA in April, have arrested a Nigerian woman fromBengaluru. They suspect she could be the 'chief executive' of a major racket supplying the synthetic party drug to Kasaragod. The woman identified as Hafsa Rihanath Usman alias Blessing Joy was picked up from Bengaluru by Bekal DySP Sunil Kumar C K.