ಬ್ರೇಕಿಂಗ್ ನ್ಯೂಸ್
27-05-23 07:23 pm HK News Desk ದೇಶ - ವಿದೇಶ
ನವದೆಹಲಿ, ಮೇ 27 : ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.
ಶೃಂಗೇರಿಯ ಶಾರದಾ ಪೀಠದಿಂದ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ಸಂಸತ್ ಭವನ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ.
ಈ ಹಿಂದೆ ಸಂಸತ್ ಭವನದ ಮೇಲೆ ಲಾಂಛನ ಲೋಕಾರ್ಪಣೆ, ನೂತನ ಸಂಸತ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮಗಳ ಧಾರ್ಮಿಕ ವಿಧಿವಿಧಾನಗಳೂ ಕರ್ನಾಟಕದ ಶೃಂಗೇರಿಯ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ನಡೆದಿತ್ತು.
ನೂತನ ಸಂಸತ್ ಭವನದ ವಿಶೇಷತೆ ಏನು?
ಹಳೆಯ ಸಂಸತ್ ಭವನ ವೃತ್ತಾಕಾರದಲ್ಲಿದೆ. ಇದೀಗ ಹೊಸದಾಗಿ ಕಟ್ಟಿರುವ ಸಂಸತ್ ಭವನ ತ್ರಿಕೋನಾಕಾರದಲ್ಲಿ ಇದೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಸಂಸತ್ ಭವನವನ್ನ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡ ಬರೋಬ್ಬರಿ 150 ವರ್ಷ ಬಾಳಿಕೆ ಬರುತ್ತೆ ಅಂತಾ ತಜ್ಞರು ಅಂದಾಜಿಸಿದ್ದಾರೆ. ಭೂಕಂಪ ಆದ್ರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ಈ ಕಟ್ಟಡವನ್ನ ವಿನ್ಯಾಸ ಮಾಡಲಾಗಿದೆ. ಹಳೆಯ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಡಿಮೆ ಸ್ಥಳಾವಕಾಶ ಇತ್ತು. ಆದ್ರೆ, ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ವಿಶಾಲವಾಗಿವೆ. ಲೋಕಸಭೆಯಲ್ಲಿ 888 ಜನ ಕೂರುವಂತೆ ವಿನ್ಯಾಸ ಮಾಡಲಾಗಿದೆ. ರಾಜ್ಯಸಭೆಯಲ್ಲಿ 384 ಜನ ಕೂರಬಹುದಾಗಿದೆ. ಅಂದ್ರೆ ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ ಕೂಡಾ ಇಲ್ಲಿ ಸ್ಥಳಾವಕಾಶದ ಕೊರತೆ ಎದುರಾಗೋದಿಲ್ಲ. ಜೊತೆಗೆ ಈ ಕಟ್ಟಡದಲ್ಲಿ ಸಂಟ್ರಲ್ ಹಾಲ್ ಇರೋದಿಲ್ಲ. ಒಂದು ವೇಳೆ ಜಂಟಿ ಅಧಿವೇಶನ ನಡೆಸಬೇಕು ಅಂದ್ರೆ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳೋದಕ್ಕೆ ವ್ಯವಸ್ಥೆ ಮಾಡಬಹುದು. ಒಟ್ಟು 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವರು, ಹಲವು ಕಮಿಟಿಗಳಿಗೂ ರೂಂಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳಗೆ ವಿಶಾಲ ಜಾಗವನ್ನೂ ಬಿಡಲಾಗಿದೆ. ಇಲ್ಲಿ ಆಲದ ಮರ ನೆಡುವ ಉದ್ದೇಶ ಇದ್ಯಂತೆ.
ವಿರೋಧ ಏಕೆ?
ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಈ ಸಂಸತ್ತನ್ನು ಅಹಂಕಾರದಿಂದ ಅಲ್ಲ, ಮೌಲ್ಯಗಳಿಂದ ಕಟ್ಟಲಾಗಿದೆ ಅಂತಾರೆ ರಾಹುಲ್ ಗಾಂಧಿ.. ನಮ್ಮ ದೇಶದಲ್ಲಿ ರಾಷ್ಟ್ರಪತಿ ಹುದ್ದೆ ಅನ್ನೋದು ಪ್ರಜಾಪ್ರಭುತ್ವದ ಅತಿ ದೊಡ್ಡ ಹುದ್ದೆ. ಇನ್ನು ರಾಷ್ಟ್ರಪತಿಗಳು ಸಂಸತ್‌ನ ಅವಿಭಾಜ್ಯ ಅಂಗ. ಹೀಗಿರುವಾಗ ನೂತನ ಸಂಸತ್ ಭವನವನ್ನ ರಾಷ್ಟ್ರಪತಿಗಳು ಏಕೆ ಉದ್ಘಾಟನೆ ಮಾಡಬಾರದು ಅನ್ನೊದು ವಿರೋಧ ಪಕ್ಷಗಳ ಪ್ರಶ್ನೆ. ರಾಷ್ಟ್ರಪತಿಗಳು ಉದ್ಘಾಟನೆ ಮಾಡೋದಿರಲಿ, ಅವರನ್ನ ಈ ಕಾರ್ಯಕ್ರಮಕ್ಕೇ ಕರೆದಿಲ್ಲ ಏಕೆ ಅಂತಾ ಪ್ರಶ್ನೆ ಮಾಡ್ತಿವೆ ವಿಪಕ್ಷಗಳು. ಎಲ್ಲಕ್ಕಿಂತಾ ಹೆಚ್ಚಾಗಿ ಪ್ರಧಾನಿ ಮೋದಿ ಅವರು ಸಂಸತ್ ಭವನದ ಉದ್ಘಾಟನೆ ಮಾಡ್ತಿರೋದಕ್ಕೆ ವಿರೋಧ ಪಕ್ಷಗಳು ಸಿಟ್ಟಾಗಿವೆ. ಈ ಕಾರ್ಯಕ್ರಮಕ್ಕೆ ನಾವು ಬಹಿಷ್ಕಾರ ಹಾಕ್ತೇವೆ ಅಂತಾ ಕಾಂಗ್ರೆಸ್ ಸೇರಿದಂತೆ ದೇಶದ ಒಟ್ಟು 19 ವಿರೋಧ ಪಕ್ಷಗಳು ನಿರ್ಧಾರ ಮಾಡಿವೆ. ಕೇಂದ್ರ ಸರ್ಕಾರ ಮನವೊಲಿಕೆ ಮಾಡೋಕೆ ಪ್ರಯತ್ನ ಮಾಡ್ತು. ಆದ್ರೆ, ವಿರೋಧ ಪಕ್ಷಗಳು ಒಪ್ಪುವಂತೆ ಕಾಣ್ತಿಲ್ಲ.
Prime Minister Narendra Modi will inaugurate the newly constructed Parliament building tomorrow, May 28. During the ceremony, he will also install the historical and sacred ‘Sengol,’ which symbolizes the transfer of power from the British government to India, inside the Parliament house.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm