ಆದೂರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಪತ್ತೆ ; ಜಿಲೆಟಿನ್ ಕಡ್ಡಿ, ಡಿಟೋನೇಟರ್ ರಾಶಿ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು, ಕರ್ನಾಟಕಕ್ಕೆ ಒಯ್ಯಲು ತೆಗೆದಿಟ್ಟಿದ್ದಾಗಿ ಮಾಹಿತಿ 

30-05-23 10:31 pm       HK News Desk   ದೇಶ - ವಿದೇಶ

ಆದೂರು ಠಾಣೆ ವ್ಯಾಪ್ತಿಯ ಮುಳಿಯಾರು ಗ್ರಾಮದ ಕೊಳಚಿಯಡ್ಕ ಎಂಬಲ್ಲಿ ಮನೆ ಒಂದರಲ್ಲಿ ಬಚ್ಚಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಅಬಕಾರಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಕಾಸರಗೋಡು, ಮೇ 30 : ಇಲ್ಲಿನ ಆದೂರು ಠಾಣೆ ವ್ಯಾಪ್ತಿಯ ಮುಳಿಯಾರು ಗ್ರಾಮದ ಕೊಳಚಿಯಡ್ಕ ಎಂಬಲ್ಲಿ ಮನೆ ಒಂದರಲ್ಲಿ ಬಚ್ಚಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಅಬಕಾರಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 6,000 ಡಿಟೋನೇಟರ್‌ಗಳು ಮತ್ತು 2,800 ಜಿಲೆಟಿನ್ ಕಡ್ಡಿಗಳು ಸೇರಿದಂತೆ ಭಾರಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ನಸುಕಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಮುಳಿಯಾರು ನಿವಾಸಿ ಮಹಮ್ಮದ್ ಮುಸ್ತಫ ಎಂಬಾತನ ವಾಹನದಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದವು.   ಬಳಿಕ ಆತನ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. 

ಮನೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ ಮುಸ್ತಫಾ ವಾಶ್‌ರೂಮ್‌ಗೆ ಹೋಗಿದ್ದು, ಒಳಗಿನಿಂದ ಲಾಕ್ ಹಾಕಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ. ಅಧಿಕಾರಿಗಳು ಬಳಿಕ ಬಾಗಿಲು ಒಡೆದು ನೋಡಿದಾಗ ಕೈ ಕತ್ತರಿಸಿಕೊಂಡು ರಕ್ತ ಸೋರುತ್ತಿತ್ತು. ಕೂಡಲೇ ಆತನನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ. 

ಮುಸ್ತಫಾನನ್ನು ವಿಚಾರಣೆಗೆ ಒಳಪಡಿಸಿದಾಗ ಕರ್ನಾಟಕದ ಕ್ವಾರಿಗಳಿಗೆ ಸರಬರಾಜು ಮಾಡಲು ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ ಮುಸ್ತಫಾ ಹೇಳಿಕೆ ಬಗ್ಗೆ ಸಂಶಯಗೊಂಡ ಪೊಲೀಸರು ಹೆಚ್ಚುವರಿ ತಪಾಸಣೆ ಕೈಗೊಂಡಿದ್ದಾರೆ. ಕ್ವಾರಿ ಮಾಲೀಕರ ಬಗ್ಗೆ ಆತ ನೀಡಿದ ಮಾಹಿತಿಯಂತೆ, ಆ ಜಾಗದಲ್ಲಿ ಕ್ವಾರಿಗಳೇ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸದ್ಯಕ್ಕೆ ಆದೂರು ಠಾಣೆ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರ ಮಾಡಿದ್ದು ವಿಚಾರಣೆ ಕೈಗೊಂಡಿದ್ದಾರೆ. ಮುಸ್ತಫಾನಿಗೆ ಇಷ್ಟು ಭಾರೀ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿ ಸಿಕ್ಕಿರುವುದು ಹೇಗೆ ? ಅದನ್ನು ಸರಬರಾಜು ಮಾಡಿದ್ದು ಯಾರು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

A special team of the Excise department which came looking for drugs and contraband stumbled upon a huge quantity of explosives from a house here on Tuesday.A large collection of explosives, including a detonator and gelignite sticks, has been seized from the house at Kolachiaduka within the limits of the Adhur police station.