ಬ್ರೇಕಿಂಗ್ ನ್ಯೂಸ್
02-06-23 11:30 pm HK News Desk ದೇಶ - ವಿದೇಶ
ಭುವನೇಶ್ವರ, ಜೂ.2: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್ಪ್ರೆಸ್ ರೈಲು ಭೀಕರ ಅಪಘಾತಕ್ಕೀಡಾಗಿದ್ದು 50ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಶುಕ್ರವಾರ ಸಂಜೆ ಅಪಘಾತಕ್ಕೀಡಾಗಿದೆ.
ಮಾಹಿತಿಯ ಪ್ರಕಾರ, ಈ ರೈಲು ಒಡಿಶಾದ ಬಾಲಸೋರ್ನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ 3 ಸ್ಲೀಪರ್ ಕೋಚ್ಗಳನ್ನು ಬಿಟ್ಟು ಉಳಿದ ಬೋಗಿಗಳು ಹಳಿತಪ್ಪಿದವು. ಆರಂಭಿಕ ಮಾಹಿತಿಯಲ್ಲಿ, ಈ ಕೋಚ್ಗಳ ಸಂಖ್ಯೆಯನ್ನು 18 ಎಂದು ಹೇಳಲಾಗಿದೆ.
ಈ ಬೋಗಿಗಳಲ್ಲಿ ಹೆಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳು ಸ್ಥಳಕ್ಕೆ ತೆರಳಿವೆ. ಪ್ರಸ್ತುತ ಸ್ಥಳಗದಲ್ಲಿಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಮತ್ತು ಎಸ್ಆರ್ಸಿಗೆ ರಾಜ್ಯ ಮಟ್ಟದಿಂದ ಯಾವುದೇ ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ಸ್ಥಳಕ್ಕೆ ತಲುಪಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿ ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.
ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಎರಡೂ ರೈಲುಗಳು ಒಂದೇ ಮಾರ್ಗದಲ್ಲಿ ಬಂದಿದ್ದರಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಿಗ್ನಲ್ ವೈಫಲ್ಯದಿಂದ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಚ್ಚಿನ ಸಂಖ್ಯೆಯ ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ರಕ್ಷಿಸಲು ಸ್ಥಳೀಯ ಜನರು ಜಮಾಯಿಸಿದ್ದಾರೆ. ಇದೀಗ ರಕ್ಷಣಾ ತಂಡಗಳೂ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.


ಈ ರೈಲು ಚೆನ್ನೈ ಸೆಂಟ್ರಲ್ನಿಂದ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣಕ್ಕೆ ಹೋಗುತ್ತಿತ್ತು. ರೈಲು ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಟು ಪುರಟ್ಚಿ ತಲೈವರ್ ಡಾ. ಎಂ.ಜಿ. ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ಸೇರುತ್ತದೆ. ರೈಲು ಮಧ್ಯಾಹ್ನ 3.30 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು ಸಂಜೆ 6.30 ಕ್ಕೆ ಬಾಲಸೋರ್ ನಿಲ್ದಾಣವನ್ನು ತಲುಪಿತು. ಇದು ನಾಳೆ ಸಂಜೆ 4.50ಕ್ಕೆ ಚೆನ್ನೈ ತಲುಪಬೇಕಿತ್ತು.
ಒಟ್ನಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದೆ. ಇನ್ನೊಂದ್ಕಡೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುವ ಭೀತಿ ಇದೆ. ಗಾಯಾಳುಗಳು ರೈಲಿನ ಬೋಗಿ ಒಳಗೆ ನರಳುತ್ತಿದ್ದು, ಸ್ಥಳೀಯರು ರೈಲಿನ ಒಳಗೆ ಸಿಲುಕಿರುವವರ ರಕ್ಷಣೆಗೆ ಸಹಾಯ ಮಾಡುತ್ತಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.
ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ;
ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.
ಸರ್ಕಾರದ ಸಹಾಯವಾಣಿ ಸಂಖ್ಯೆ: 033-26382217, 8972073925, 67822 62286, 9332392339
50 people died and over 350 more were injured after a passenger train hit derailed coaches of the Coromandel Express, which runs from Shalimar station in West Bengal to Chennai, in Odisha's Balasore district on Friday evening. A goods train was also involved in the accident, as per Odisha Chief Secretary Pradeep Jena.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm