ಬ್ರೇಕಿಂಗ್ ನ್ಯೂಸ್
30-10-20 03:49 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 30: ಪಾಕಿಸ್ಥಾನದ ಬಾಲಾಕೋಟ್ ದಾಳಿಯ ಬಳಿಕ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ಥಾನದಲ್ಲಿ ಬಿದ್ದು ಅಲ್ಲಿನ ಸೇನೆಯ ವಶವಾಗಿದ್ದರು. ಆದರೆ, ಹೀಗೆ ಸೇನೆಯಿಂದ ಬಂಧಿಸಲ್ಪಟ್ಟ ಅಭಿನಂದನ್ ಅವರನ್ನು ಎರಡೇ ದಿನದಲ್ಲಿ ಪಾಕ್ ಸರಕಾರ ಸುರಕ್ಷಿತವಾಗಿ ಬಿಟ್ಟುಕೊಟ್ಟಿತ್ತು. ನರಿಬುದ್ಧಿಯ ಪಾಕಿಸ್ತಾನ ಅಂದು ಬಂಧಿಸಲ್ಪಟ್ಟ ವಿಂಗ್ ಕಮಾಂಡರ್ ಒಬ್ಬರನ್ನು ಹಾಗೇ ಬಿಟ್ಟುಕೊಟ್ಟಿದ್ದು ಭಾರತ ಅಲ್ಲದೆ ವಿಶ್ವ ರಾಷ್ಟ್ರಗಳಲ್ಲಿಯೂ ಅಚ್ಚರಿಗೆ ಕಾರಣವಾಗಿತ್ತು.
ಆದರೆ, ಹೀಗೆ ಎರಡೇ ದಿನದಲ್ಲಿ ಪಾಕ್ ಸರಕಾರ ಅಭಿನಂದನ್ ಅವರನ್ನು ಬಿಟ್ಟುಕೊಡಲು ಕಾರಣ ಏನಿತ್ತು ಎಂಬುದನ್ನು ಈಗ ಪಾಕಿಸ್ತಾನದ ಸಂಸತ್ತಿನಲ್ಲೇ ಅಲ್ಲಿನ ಸಂಸದರು ಹೇಳಿಕೊಂಡಿದ್ದಾರೆ. ಭಾರತದ ಸೇನೆ ದಾಳಿ ನಡೆಸುವ ಭೀತಿಯಿಂದ ಅಭಿನಂದನ್ ಅವರನ್ನು ಬಿಟ್ಟುಕೊಡಲು ತುರ್ತು ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪ್ರತಿಪಕ್ಷ ಮುಸ್ಲಿಂ ಲೀಗ್ – ನವಾಜ್ ಮುಖಂಡ ಅಯಾಜ್ ಸಾದಿಕ್ ಹೇಳಿದ್ದಾರೆ.
ಅಭಿನಂದನ್ ವಶಕ್ಕೆ ಪಡೆದ ಮರುದಿನ ಸೇನಾ ಮುಖ್ಯಸ್ಥ ಜ.ಖಮರ್ ಜಾವೇದ್ ಮತ್ತು ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ ತುರ್ತು ಸಭೆ ಕರೆದಿದ್ದರು. ಅಭಿನಂದನ್ ಬಿಟ್ಟು ಕೊಡದಿದ್ದರೆ ಭಾರತದ ಸೇನೆ ಇಂದು ರಾತ್ರಿ 9 ಗಂಟೆಗೆ ದಾಳಿ ನಡೆಸುವುದು ಖಂಡಿತ. ಹೀಗಾಗಿ ಅಭಿನಂದನ್ ನನ್ನು ಆದಷ್ಟು ಬೇಗ ಬಿಟ್ಟು ಕಳಿಸುವುದು ಸೂಕ್ತ ಎಂದಿದ್ದರು ಖುರೇಷಿ. ಈ ಮಾತು ಕೇಳುತ್ತಲೇ ಸೇನಾ ಮುಖ್ಯಸ್ಥರ ಕಾಲುಗಳು ಕಂಪಿಸುತ್ತಿದ್ದವು ಎಂದು ಸಾದಿಕ್ ಹೇಳುವ ಮೂಲಕ ಪಾಕಿಸ್ಥಾನ ಸರಕಾರ ಅಂದು ಭಾರತ ಪ್ರತಿ ದಾಳಿ ಮಾಡುವ ಭಯದಲ್ಲಿ ಭೀತಿಗೊಳಗೊಗಿತ್ತು ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಪುಲ್ವಾಮಾ ದಾಳಿ ಒಪ್ಪಿಕೊಂಡ ಪಾಪಿ
ಇದಲ್ಲದೆ, ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದು ಸಚಿವ ಫವಾದ್ ಚೌಧರಿ ಕಾಶ್ಮೀರದ ಪುಲ್ವಾಮಾ ದಾಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತದ ನೆಲದಲ್ಲೇ ನಾವು ಅವರನ್ನು ಹೊಡೆದಿದ್ದೆವು. ಇಮ್ರಾನ್ ನೇತೃತ್ವದಲ್ಲಿ ಪುಲ್ವಾಮಾ ದಾಳಿ ನಡೆಸಿದ್ದು ಅದರ ಯಶಸ್ಸು ಇಡೀ ಪಾಕಿಸ್ಥಾನೀಯರ ಸಾಧನೆ. ನೀವು ಮತ್ತು ನಾವೆಲ್ಲ ಈ ಯಶಸ್ಸಿನಲ್ಲಿ ಪಾಲು ಪಡೆದಿದ್ದೇವೆ ಎಂದು ಹೇಳುವ ಮೂಲಕ ಪುಲ್ವಾಮಾ ದಾಳಿಯನ್ನು ಪಾಕಿಸ್ಥಾನ ಸರಕಾರದ ಚಿತಾವಣೆಯಲ್ಲೇ ಮಾಡಲಾಗಿತ್ತು ಎಂಬುದನ್ನೂ ಹೇಳಿಕೊಂಡಿದ್ದಾರೆ.
ಪುಲ್ವಾಮಾ ದಾಳಿ ಪಾಕ್ ಸರಕಾರದ ಕುಕೃತ್ಯ ಎಂದು ಭಾರತ ವಿಶ್ವ ಸಮುದಾಯದಲ್ಲಿ ಹೇಳಿಕೊಂಡು ಬಂದರೂ, ಪಾಕ್ ಸರಕಾರ ಮಾತ್ರ ನಿರಾಕರಿಸುತ್ತಲೇ ಬಂದಿತ್ತು. ಆದರೆ, ಈಗ ಪಾಕ್ ಸಂಸತ್ತಿನಲ್ಲಿಯೇ ಸಚಿವನೊಬ್ಬ ಬಡಾಯಿ ಕೊಚ್ಚಿಕೊಂಡು ವಿಶ್ವ ರಾಷ್ಟ್ರಗಳ ಮುಂದೆ ಪಾಕಿಸ್ತಾನದ ಭಯೋತ್ಪಾದಕ ಕ್ಯತ್ಯವನ್ನು ಜಗಜ್ಜಾಹೀರು ಮಾಡಿದ್ದಾನೆ. ಪಾಕ್ ಸರಕಾರವೇ ಕುಮ್ಮಕ್ಕು ನೀಡುತ್ತಿರುವುದೂ ಈ ಮೂಲಕ ಸಾಬೀತಾಗಿದೆ.
ಪಾಕ್ ಸೇನಾ ನೆಲೆ ಪುಡಿಗಟ್ಟುತ್ತಿದ್ದೆವು !
ಪಾಕ್ ಸಂಸತ್ತಿನಲ್ಲಿ ಅಭಿನಂದನ್ ವಿಚಾರ ಧ್ವನಿಸುತ್ತಿದ್ದಂತೆ ನಿವೃತ್ತ ವಾಯುಸೇನಾ ಮುಖ್ಯಸ್ಥ ಬೀರೇಂದರ್ ಸಿಂಗ್ ಅಂದಿನ ಸ್ಥಿತಿಯನ್ನು ನೆನಪಿಸಿದ್ದಾರೆ. ಅಭಿನಂದನ್ ಅವರನ್ನು ಬಿಟ್ಟು ಕಳಿಸದಿದ್ದರೆ ಕಥೆಯೇ ಬೇರೆಯಾಗುತ್ತಿತ್ತು. ಪಾಕಿಸ್ಥಾನದ ಮುಂಚೂಣಿ ಸೇನಾ ನೆಲೆಗಳಿಗೆ ದಾಳಿ ನಡೆಸಲು ಸಜ್ಜಾಗಿದ್ದೆವು ಎಂದು ಹೇಳಿದ್ದಾರೆ. ಈ ವಿಚಾರ ಪಾಕ್ ಸರಕಾರಕ್ಕೆ ಗೊತ್ತಾಗಿಯೇ ಅಭಿನಂದನ್ ಅವರನ್ನು ಬಿಟ್ಟು ಕಳಿಸಿದ್ದರು ಎಂದಿದ್ದಾರೆ.
ಕಳೆದ 2019ರ ಫೆ.27ರಂದು ಭಾರತದ ಗಡಿಭಾಗವನ್ನು ದಾಟಿ ಬಂದಿದ್ದ ಪಾಕಿಸ್ಥಾನದ ಫೈಟರ್ ಜೆಟ್ ವಿಮಾನವನ್ನು ಭಾರತದ ವಿಂಗ್ ಕಮಾಂಡರ್ ಅಭಫಿನಂದನ್ ಮಿಗ್ -21 ಮೂಲಕ ಬೆನ್ನಟ್ಟಿದ್ದರು. ಈ ವೇಳೆ, ಪಾಕ್ ದಾಳಿಗೆ ಮಿಗ್ ಪತನಗೊಂಡಿದ್ದರೆ, ಪ್ಯಾರಾಚೂಟ್ ಮೂಲಕ ಹೊರಕ್ಕೆ ಹಾರಿದ್ದ ಅಭಿನಂದನ್ ಪಾಕ್ ನೆಲದಲ್ಲಿ ಬಿದ್ದು ಸೇನೆಯಿಂದ ಬಂಧಿತನಾಗಿದ್ದರು.
Pakistan Army Chief Qamar Javed Bajwa's "legs were shaking" as foreign minister Shah Mahmood Qureshi urged to release Indian pilot Wing Commander Abhinandan Varthaman who was captured after his jet was shot down during a standoff with India in 2019, a country's lawmaker claimed.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm