ಬ್ರೇಕಿಂಗ್ ನ್ಯೂಸ್
04-06-23 06:45 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 04: ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಮೂಲ ಕಾರಣ ಪತ್ತೆಯಾಗಿದೆ. ಮತ್ತೊಂದು ಕಡೆ ಹಳಿಗಳ ಮೇಲಿಂದ ಅವಶೇಷಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ಭಾನುವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಎಎನ್‌ಐ ಜೊತೆ ಅಪಘಾತ ಸ್ಥಳದಲ್ಲಿ ಮಾತನಾಡಿದರು. ಹಳಿಗಳ ಮೇಲಿಂದ ಅವಶೇಷ ತೆರವುಗೊಳಿಸುವ ಕಾರ್ಯವನ್ನು ಸಚಿವರು ಪರಿಶೀಲಿಸಿದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ರೈಲು ದುರಂತಕ್ಕೆ ಕಾರಣವೇನು?; ಸಚಿವರು ಮಾತನಾಡಿ, "ರೈಲ್ವೆ ಸುರಕ್ಷತಾ ಆಯುಕ್ತರು ಈಗಾಗಲೇ ಈ ರೈಲು ದುರಂತದ ಬಗ್ಗೆ ತನಿಖೆ ನಡೆಸಿದ್ದಾರೆ. ತನಿಖಾ ವರದಿ ಇನ್ನೂ ಕೈ ಸೇರಬೇಕಿದೆ. ಆದರೆ ಮೂಲ ಕಾರಣವನ್ನು ನಾವು ಪತ್ತೆ ಮಾಡಿದ್ದೇವೆ" ಎಂದು ಸಚಿವರು ಹೇಳಿದರು.
"ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಬದಲಾವಣೆಯಿಂದ ಈ ಘಟನೆ ನಡೆದಿದೆ. ರೈಲ್ವೆ ಸುರಕ್ಷತಾ ಆಯುಕ್ತರು ತಮ್ಮ ವರದಿಯಲ್ಲಿ ಇದಕ್ಕೆ ಕಾರಣ ಯಾರು? ಎಂದು ಹೇಳಲಿದ್ದಾರೆ. ವರದಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ" ಎಂದು ಸಚಿವರು ತಿಳಿಸಿದರು.
"ಈ ದುರಂತ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಬದಲಾವಣೆಯಿಂದ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದಂತೆ ಏನೂ ಆಗಿಲ್ಲ. ಈಗ ನಮ್ಮ ಗಮನ ಅವಶೇಷ ತೆರವುಗೊಳಿಸಿ, ಹಳಿಯನ್ನು ಸಂಚಾರಕ್ಕೆ ಮುಕ್ತವಾಗಿಸುವತ್ತ ಇದೆ" ಎಂದು ಸಚಿವರು ಸ್ಪಷ್ಟಪಡಿಸಿದರು.
ಘಟನೆಗೆ ಮೂಲ ಕಾರಣ ಪತ್ತೆ ಹಚ್ಚಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದಾರೆ. ಇಂದು ನಾವು ಹಳಿಯನ್ನು ಪುನರ್ ಸ್ಥಾಪನೆ ಮಾಡುತ್ತೇವೆ. ಬೋಗಿಯಲ್ಲಿ ಸಿಲುಕಿದ್ದ ಎಲ್ಲಾ ಶವಗಳನ್ನು ತೆರವು ಮಾಡಲಾಗಿದೆ. ಬುಧವಾರದ ಹೊತ್ತಿಗೆ ಹಳಿಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿಸುವ ಗುರಿ ನಮ್ಮದು" ಎಂದು ರೈಲ್ವೆ ಸಚಿವರು ಹೇಳಿದರು.
ಪವಾಡ ಸದೃಶ ಎಂಬಂತೆ ಬದುಕುಳಿದ ಲೋಕೊ ಪೈಲಟ್‌ಗಳು, ಗಾರ್ಡ್‌ಗಳು ;
ತ್ರಿವಳಿ ರೈಲು ಅಪಘಾತದಲ್ಲಿ ಮೂರೂ ರೈಲಿನ ಲೋಕೊ ಪೈಲಟ್‌ಗಳು, ಗಾರ್ಡ್‌ಗಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.
ತನ್ನ ನಿಗದಿತ ಹಳಿಯಲ್ಲಿ ಹೋಗದೇ ಲೂಪ್ ಲೈನ್‌ನಲ್ಲಿ ಗಂಟೆಗೆ 128 ಕಿ.ಮೀ. ವೇಗದಲ್ಲಿ ಹೋದ ಶಾಲಿಮಾರ್–ಕೋರಮಂಡಲ್ ರೈಲು ಅದೇ ಹಳಿಯಲ್ಲಿ ಅದಾಗಲೇ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಲ್ಲಿದ್ದ ಒಬ್ಬ ಲೋಕೊಪೈಲಟ್, ಸಹ ಲೋಕೊಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರ ಪರಿಸ್ಥಿತಿ ಏನೂ ಹೇಳುವಂತಿಲ್ಲ ಎಂದು ಆಗ್ನೇಯ ರೈಲ್ವೆದ ಖರಗ್‌ಪುರ್ ವಲಯದ ಮ್ಯಾನೇಜರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಗೂಡ್ಸ್ ರೈಲಿನಲ್ಲಿದ್ದ ಎಂಜಿನ್ ಡ್ರೈವರ್ ಹಾಗೂ ಗಾರ್ಡ್ ಅಷ್ಟೊಂದು ಗಂಭೀರವಲ್ಲದೇ ಗಾಯಗೊಂಡಿದ್ದು ಅವರನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಕೋರಮಂಡಲ್ ರೈಲು ಡಿಕ್ಕಿ ಆದ ಸಮಯದಲ್ಲಿ ಪಕ್ಕದ ಇನ್ನೊಂದು ಮುಖ್ಯ ಹಳಿಯಲ್ಲಿ 116 ಕಿಮೀನಲ್ಲಿ ಸಾಗುತ್ತಿದ್ದ ಬೆಂಗಳೂರು–ಹೌರಾ ರೈಲಿನ ಕೊನೆಯ ಎರಡು ಬೋಗಿಗಳಿಗೆ ಕೋರಮಂಡಲ್ ರೈಲಿನ ಕೆಲ ಬೋಗಿಗಳು ಅಪ್ಪಳಿಸಿದ್ದವು. ಇದರಿಂದ ಕೊನೆ ಬೋಗಿಯಲ್ಲಿದ್ದ ಬೆಂಗಳೂರು–ಹೌರಾ ರೈಲಿನ ಗಾರ್ಡ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೈಲಿನಲ್ಲಿದ್ದ ಲೋಕೊಪೈಲಟ್‌ಗಳಿಗೆ ಏನೂ ಆಗಿಲ್ಲ.
ಈ ರೈಲು ದುರಂತದಲ್ಲಿ ಇದುವರೆಗೆ 288 ಪ್ರಯಾಣಿಕರು ಮೃತಪಟ್ಟಿದ್ದು, 1000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Union Railway Minister Ashwini Vaishnaw, after visiting the accident site in Odisha's Balasore where a triple train collision happened, said on Sunday that the root cause of the accident has been identified. The minister said the inquiry into the train accident has been completed and rail safety commissioner will submit the report at the earliest.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm