Odisha Train Accident: ಘೋರ ತ್ರಿವಳಿ ರೈಲು ದುರಂತ ; ಪತ್ತೆಯಾಗಬೇಕಿದೆ 101 ಮೃತದೇಹಗಳ ಗುರುತು, ಶವಾಗಾರದಲ್ಲಿ ಸ್ಥಳದ ಅಭಾವ, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200 ಮಂದಿ ಚಿಕಿತ್ಸೆ

06-06-23 12:37 pm       HK News Desk   ದೇಶ - ವಿದೇಶ

ಶತಮಾನ ಕಂಡ ಅತ್ಯಂತ ಘೋರ ದುರಂತ ಒಡಿಶಾ ರೈಲು ಅಪಘಾತದಲ್ಲಿ ಕನಿಷ್ಠ 278 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು 101 ಕ್ಕಿಂತ ಹೆಚ್ಚು ಮೃತ ದೇಹಗಳನ್ನು ಗುರುತಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಸೋರ್, ಜೂ.6 : ಶತಮಾನ ಕಂಡ ಅತ್ಯಂತ ಘೋರ ದುರಂತ ಒಡಿಶಾ ರೈಲು ಅಪಘಾತದಲ್ಲಿ ಕನಿಷ್ಠ 278 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು 101 ಕ್ಕಿಂತ ಹೆಚ್ಚು ಮೃತ ದೇಹಗಳನ್ನು ಗುರುತಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಸುಮಾರು 1,100 ಜನರು ಗಾಯಗೊಂಡಿದ್ದು, ಈ ಪೈಕಿ ಸುಮಾರು 900 ಜನರನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ 278 ಜನರ ಪೈಕಿ 101 ಮೃತದೇಹಗಳನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಪೂರ್ವ ಮಧ್ಯ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಿಂಕೇಶ್ ರಾಯ್ಎಂದು ರಾಯ್ ಹೇಳಿದ್ದಾರೆ.

Odisha train accident – latest: Death toll rises again as more than 100  unclaimed bodies 'to be embalmed'

At least 261 dead in India's worst train accident in over two decades - CNA

ಭುವನೇಶ್ವರ್ ನಗರಸಭಾ ಕಮಿಷನರ್ ವಿಜಯ್ ಅಮೃತ್ ಕುಲಂಗೆ ಪ್ರತಿಕ್ರಿಯಿಸಿ ಭುವನೇಶ್ವರದಲ್ಲಿ ಇರಿಸಲಾಗಿರುವ 193 ಮೃತದೇಹಗಳಲ್ಲಿ 80 ದೇಹಗಳನ್ನು ಗುರುತಿಸಲಾಗಿದೆ. 55 ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದಿರುವ ದೇಹಗಳ ಗುರುತು ಕಾರ್ಯ ಮುಂದುವರೆದಿದೆ ಎಂದಿದ್ದಾರೆ.

ಇದೀಗ ಒಡಿಶಾ ಶವಾಗಾರದಲ್ಲಿ ಸ್ಥಳದ ಅಭಾವ ಉಂಟಾಗಿದೆ. ಇನ್ನೂ ಗುರುತು ಪತ್ತೆಯಾಗದ ಮೃತ ದೇಹಗಳು ಬಾಲಸೋರ್‌ನ ಶವಾಗಾರಗಳನ್ನು ತುಂಬಿವೆ. ಅವುಗಳಲ್ಲಿ 187 ಜನರನ್ನು ರಾಜಧಾನಿ ಭುವನೇಶ್ವರಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಈ ವಾರದ ಆರಂಭದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರಿಂದ ಶಾಲಾ ಆವರಣಗಳು ಸೇರಿದಂತೆ ತಾತ್ಕಾಲಿಕ ಸ್ಥಳಗಳನ್ನು ಸಂತ್ರಸ್ತರಿಗೆ ಇರಿಸಲು ಬಳಸಲಾಗಿದೆ.

India train crash: At least 288 dead and hundreds injured in Odisha  collision

Odisha train accident – latest: Death toll rises again as more than 100  unclaimed bodies 'to be embalmed'

ಭೀಕರ ರೈಲ್ವೇ ದುರಂತದ ಬಳಿಕ ಸತತ ಎರಡು ದಿನಗಳ ಅವಿರತ ದುರಸ್ತಿ ಕಾರ್ಯಾಚರಣೆ ಬಳಿಕ ಹಳಿಯಲ್ಲಿ ಮತ್ತೆ ಮೊದಲಿನಂತೆ ರೈಲ್ವೇ ಸಂಚಾರ ಆರಂಭಗೊಂಡಿದೆ. ಸೋಮವಾರ ಬೆಳಿಗ್ಗೆ 9.30 ಕ್ಕೆ ಮೊದಲ ಹೈಸ್ಪೀಡ್ ರೈಲು ಪುರಿ ವಂದೇ ಎಕ್ಸ್‌ಪ್ರೆಸ್ ಇಲ್ಲಿಂದ ಹಾದು ಹೋಯಿತು.

The death toll in the Odisha train crash has risen to 278 as three more people succumbed to their injuries, according to Railway Ministry data.  Eastern Central Railways official Rinkesh Ray said: “About 1,100 people were injured in the accident, out of which about 900 people were discharged after treatment. Around 200 people are being treated in various hospitals in the state”.