ಮೋದಿ ಮ್ಯಾಜಿಕ್, ಹಿಂದುತ್ವದಿಂದ ಚುನಾವಣೆ ಗೆಲ್ಲಕ್ಕಾಗಲ್ಲ, ಪ್ರಾದೇಶಿಕ ನಾಯಕತ್ವ ಬಹುಮುಖ್ಯ ; ಇದೇ ರೀತಿ ಹೋದಲ್ಲಿ ಲೋಕಸಭೆ ಸೋಲು ಖಚಿತ ಎಂದ ಆರೆಸ್ಸೆಸ್

06-06-23 09:37 pm       HK News Desk   ದೇಶ - ವಿದೇಶ

ಮೋದಿ ಮ್ಯಾಜಿಕ್ ಮತ್ತು ಹಿಂದುತ್ವದ ಮಾತ್ರಕ್ಕೆ ಎಲ್ಲ ಚುನಾವಣೆಗಳನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಮುಖವಾಣಿ ದಿ ಆರ್ಗನೈಸರ್ ಪತ್ರಿಕೆ ಹೇಳಿದೆ.

ಮುಂಬೈ, ಜೂನ್ 6: ಮೋದಿ ಮ್ಯಾಜಿಕ್ ಮತ್ತು ಹಿಂದುತ್ವದ ಮಾತ್ರಕ್ಕೆ ಎಲ್ಲ ಚುನಾವಣೆಗಳನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಮುಖವಾಣಿ ದಿ ಆರ್ಗನೈಸರ್ ಪತ್ರಿಕೆ ಹೇಳಿದೆ.

ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಮತ್ತು 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ರೀತಿಯ ವಿಶ್ಲೇಷಣೆ ಹೊರಬಿದ್ದಿದೆ. ಮೋದಿ ಮ್ಯಾಜಿಕ್ ಮಾತ್ರಕ್ಕೆ ಚುನಾವಣೆ ಗೆಲ್ಲುವುದಕ್ಕೆ ಆಗಲ್ಲ. ಪ್ರಾದೇಶಿಕ ಮಟ್ಟದಲ್ಲಿ ಪ್ರಬಲ ನಾಯಕತ್ವ ಮತ್ತು ಕಾರ್ಯಕರ್ತರನ್ನು ಸೆಳೆಯಬಲ್ಲ ನಾಯಕರು ಬೇಕಾಗುತ್ತದೆ. ಅದಿಲ್ಲದೇ ಹೋದರೆ, ಕೇವಲ ಮೋದಿ ಚರಿಷ್ಮಾ ಮತ್ತು ಹಿಂದುತ್ವ ಸಿದ್ಧಾಂತ ಇಟ್ಟುಕೊಂಡು ಗೆಲುವು ತರಕ್ಕಾಗಲ್ಲ ಎಂದು ಪತ್ರಿಕೆ ಅಭಿಪ್ರಾಯ ಪಟ್ಟಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಜನರು ಮತ ನೀಡಿದ್ದಾರೆ. ಇದೇ ರೀತಿಯಾದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಸೋಲಾಗಬಹುದು. ಲೋಕಸಭೆ ಗೆಲ್ಲುವುದಕ್ಕಾಗಿ ಸೂಕ್ತ ನಿರ್ಧಾರಕ್ಕೆ ಬರಲು ಇದು ಸಕಾಲ. ಚುನಾವಣೆಯಲ್ಲಿ ಭ್ರಷ್ಟಾಚಾರ ವಿಚಾರಗಳು ಹೆಚ್ಚು ಪ್ರಭಾವ ಬೀರುತ್ತವೆ. ಮೋದಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಇದೇ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಭ್ರಷ್ಟಾಚಾರ ಪ್ರಕರಣವನ್ನು ಸಮರ್ಥನೆ ಮಾಡುವಂತಾಗಿತ್ತು. ಆಡಳಿತ ಪಕ್ಷ ರಾಷ್ಟ್ರ ಮಟ್ಟದಲ್ಲಿ ಯೋಜನೆಗಳನ್ನು ಜಾರಿಗೊಳಿಸಿ ಜನರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ತಳಮಟ್ಟದಲ್ಲಿ ಜನರನ್ನು ಆಕರ್ಷಿಸಲು ಯತ್ನ ಮಾಡಿದೆ. ಆಡಳಿತ ಪಕ್ಷವಾಗಿದ್ದರೂ, ಹಿಂದೆ ಗಳಿಸಿದ್ದ ಮತ ಗಳಿಕೆಯನ್ನು ಹಿಡಿದಿಡುವಲ್ಲಿ ಬಿಜೆಪಿ ಸೋಲು ಕಂಡಿದೆ. ಇದರಿಂದಾಗಿ ಹೆಚ್ಚು ಕಡೆಗಳಲ್ಲಿ ಸೋತಿದೆ. ಸಚಿವರ ವಿರುದ್ಧ ಎದುರಾಗಿದ್ದ ಆಡಳಿತ ವಿರೋಧಿ ಅಲೆಯೂ ಬಿಜೆಪಿಯನ್ನು ಸೋಲಿಸುವಲ್ಲಿ ಪರಿಣಾಮ ಬೀರಿದ ಅಂಶಗಳಲ್ಲಿ ಒಂದು.

ಕಾಂಗ್ರೆಸಿನಲ್ಲಿ ರಾಷ್ಟ್ರೀಯ ನಾಯಕರು ಪ್ರಚಾರದ ನೇತೃತ್ವ ವಹಿಸಿಕೊಂಡಿಲ್ಲ. ಕರ್ನಾಟಕದ ರಾಜ್ಯ ನಾಯಕರೇ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು. ಕುಟುಂಬ ಕೇಂದ್ರಿತ ಕಾಂಗ್ರೆಸ್ ಪಕ್ಷವು ರಾಜ್ಯ ಮಟ್ಟದಲ್ಲಿ ಪ್ರಮುಖ ನಾಯಕರನ್ನೇ ಮುಂಚೂಣಿಯಾಗಿ ತೋರಿಸಿಕೊಂಡಿತ್ತು. ಇದರಿಂದಾಗಿ 2018ರಲ್ಲಿ ಪಡೆದ ಮತಕ್ಕಿಂತ 5 ಶೇಕಡಾ ಹೆಚ್ಚುವರಿ ಮತಗಳನ್ನು ಪಡೆಯಲು ಯಶಸ್ವಿಯಾಗಿದೆ. ಚುನಾವಣೆ ಬಳಿಕ ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದ ಜೆಡಿಎಸ್ ಸ್ಥಾನಗಳನ್ನು ಕಳಕೊಂಡಿದ್ದು ಕಾಂಗ್ರೆಸಿಗೆ ಪ್ಲಸ್ ಆಗಿತ್ತು. ಆದರೆ, ಕಾಂಗ್ರೆಸ್ ಸ್ಥಿರ ಸರಕಾರ ಕೊಡುತ್ತಾ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಷ್ಟೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿ ಸರಕಾರ ನಡೆಸುವುದು ಕಷ್ಟವಾಗಲಿದೆ ಎಂದು ಆರ್ಗನೈಸರ್ ಹೇಳಿದೆ.

ಭಾಷೆ ಮತ್ತು ಜಾತಿ ಆಧಾರದಲ್ಲಿ ರಾಜ್ಯವನ್ನು ವಿಭಜಿಸಿ ಚುನಾವಣೆ ಎದುರಿಸಿದ್ದು ಅಪಾಯಕಾರಿ ಬೆಳವಣಿಗೆ. ಪ್ರಾದೇಶಿಕವಾದ ಹೊಸ ಟ್ರೆಂಡ್ ಆಗುತ್ತಿದ್ದು, ಕರ್ನಾಟಕದ ಚುನಾವಣೆ ಈ ರೀತಿಯ ವಾದಕ್ಕೆ ಪುಷ್ಟಿ ನೀಡಿರುವುದನ್ನು ಕಾಣಬಹುದು. ಈ ಬಗ್ಗೆ ಡಾ.ಅಂಬೇಡ್ಕರ್ ಕೂಡ ಎಚ್ಚರಿಕೆ ನೀಡಿದ್ದರು. ಕೆಲವರಂತೂ ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರು ಎನ್ನುವ ನೆಲೆಯಲ್ಲಿ ಟ್ರಂಪ್ ಕಾರ್ಡ್ ಎಸೆದಿದ್ದಾರೆ. ಈ ರೀತಿಯ ನಡೆ ಅಪಾಯಕಾರಿ. ಧರ್ಮಾಧರಿತ ರಾಜಕೀಯವೂ ಕಾಂಗ್ರೆಸನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮುಸ್ಲಿಂ ನಾಯಕರು ಚುನಾವಣೆ ಮೊದಲೇ ತಮ್ಮ ಮತ ಮುಂದಿಟ್ಟು ಸ್ಥಾನಗಳನ್ನು ಪಡೆಯಲು ಹವಣಿಸಿದ್ದರು. ಕ್ರಿಸ್ತಿಯನ್ ಮತಗಳೂ ಚರ್ಚ್ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಕ್ರೋಡೀಕರಣಗೊಂಡು ಕಾಂಗ್ರೆಸ್ ಗೆಲುವಿಗೆ ಕೊಡುಗೆ ನೀಡಿದೆ ಎಂದು ಆರ್ಗನೈಸರ್ ಮ್ಯಾಗಜಿನ್ ಅಭಿಪ್ರಾಯ ಪಟ್ಟಿದೆ.

The Karnataka election results have come out in the favour of Congress but losing in the 2024 Lok Sabha polls will be a daring proposition, it stated, adding that it was the right time for the BJP to take stock of the situation. It stated that corruption was the major issue in the elections and for the first time since Modi took the reins at the Centre, the BJP had to defend the corruption charges in an Assembly election.