ಬ್ರೇಕಿಂಗ್ ನ್ಯೂಸ್
07-06-23 10:32 pm HK News Desk ದೇಶ - ವಿದೇಶ
ಕೊಲ್ಲಾಪುರ (ಮಹಾರಾಷ್ಟ್ರ), ಜೂನ್ 7 : ಸೋಷಿಯಲ್ ಮೀಡಿಯಾಗಳಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬನನ್ನು ವೈಭವೀಕರಿಸಿ ಹಂಚಿಕೊಂಡಿದ್ದು ಕೊಲ್ಲಾಪುರದಲ್ಲಿ ಹಿಂಸೆ ಹೊತ್ತಿಕೊಳ್ಳುವಂತೆ ಮಾಡಿದೆ. ಮುಸ್ಲಿಂ ಸಂಘಟನೆ ಸದಸ್ಯರು ಟಿಪ್ಪು ಮತ್ತು ಮೊಘಲ್ ದೊರೆ ಔರಂಗಜೇಬನ ಫೋಟೊ ಮತ್ತು ಆಕ್ಷೇಪಾರ್ಹ ಆಡಿಯೋ ಒಂದನ್ನು ಹಂಚಿಕೊಂಡಿದ್ದು ಒಂದು ಕೋಮಿನ ಸದಸ್ಯರು ಅದನ್ನು ತಮ್ಮ ಸ್ಟೇಟಸ್, ಪ್ರೊಫೈಲ್ ಗಳಲ್ಲಿ ಹಾಕ್ಕೊಂಡಿದ್ದರು. ಈ ರೀತಿಯ ಬೆಳವಣಿಗೆ ಖಂಡಿಸಿ ಹಿಂದು ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕಲ್ಲು ತೂರಾಟ, ಹಿಂಸಾಚಾರ ನಡೆದಿದೆ.
ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ‘ಆಡಿಯೋ’ ಸಂದೇಶದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಳಸಿರುವುದನ್ನು ಖಂಡಿಸಿ ಹಿಂದು ಸಂಘಟನೆಗಳು ‘ಕೊಲ್ಹಾಪುರ ಬಂದ್’ಗೆ ಕರೆ ನೀಡಿದ್ದವು. ಮತ್ತೊಂದು ವರದಿಯ ಪ್ರಕಾರ ಸ್ಥಳೀಯರು ಮೊಘಲ್ ಚಕ್ರವರ್ತಿ ಔರಂಗಜೇಬ್ ಅನ್ನು ಬೆಂಬಲಿಸುವ ಪೋಸ್ಟ್‌ಗಳನ್ನು ಹಾಕಿರುವುದು ವಿವಾದದ ಕಿಡಿಗೆ ತುಪ್ಪ ಸುರಿದಂತಾಗಿದೆ. ಇದನ್ನು ವಿರೋಧಿಸಿ ಶಿವಸೇನೆಯ ಸದಸ್ಯರು ಬೀದಿಗಿಳಿದಿದ್ದು ಟಿಪ್ಪು, ಔರಂಗಜೇಬನ್ನು ವೈಭವೀಕರಿಸಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಮುಗಿದು ಹಿಂತಿರುಗುವಷ್ಟರಲ್ಲಿ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದಿದೆ. ಪ್ರತಿಯಾಗಿ ಕಲ್ಲು ತೂರಾಟ ಆಗಿದ್ದು ಎರಡು ಗುಂಪುಗಳ ಸದಸ್ಯರು ಬೀದಿಗಿಳಿದು ಹಿಂಸೆಗೆ ತೊಡಗಿದ್ದಾರೆ.
ಘಟನೆ ಬಳಿಕ ಪೊಲೀಸ್ ಭದ್ರತೆ ಹೆಚ್ಚಿಸಿದ್ದು ಉದ್ರಿಕ್ತರನ್ನು ಚದುರಿಸಿದ್ದಾರೆ. ಹೆಚ್ಚುವರಿ ಪಡೆ ನಿಯೋಜನೆ ಮಾಡಲಾಗಿದೆ. ಈವರೆಗೆ 21 ಮಂದಿಯನ್ನು ಬಂಧಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ಜನರು ಶಾಂತವಾಗಿರುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮನವಿ ಮಾಡಿದ್ದು, ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳದಿರಿ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರನ್ನೂ ಬಿಡುವುದಿಲ್ಲ ಎಂದು ಶಿಂಧೆ ಹೇಳಿದ್ದಾರೆ.
ನಿರ್ದಿಷ್ಟ ಸಮುದಾಯದ ಒಂದು ವರ್ಗದ ಜನರು ಮೊಘಲ್ ಚಕ್ರವರ್ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸುವುದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ಡಿಸಿಎಂ ಫಡ್ನವಿಸ್ ಹೇಳಿದ್ದಾರೆ.
A row has erupted in Maharashtra’s Kolhapur over social media posts on Muslim rulers including Aurangzeb and Tipu Sultan on Wednesday. According to the reports, some rightwing outfits have staged a massive protest in the state’s Kolhapur. They have been protesting over social media posts on Aurangzeb and Tipu Sultan, which they claim are “constroversial”.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm