ಒಡಿಶಾದಲ್ಲಿ ಮತ್ತೆ ರೈಲು ದುರಂತ ; ಗೂಡ್ಸ್​ ರೈಲಿನಡಿ ಸಿಲುಕಿ ಆರು ಮಂದಿ ವಲಸೆ ಕಾರ್ಮಿಕರು ಸಾವು 

07-06-23 10:58 pm       HK News Desk   ದೇಶ - ವಿದೇಶ

ಬಾಲಸೋರ್​ ರೈಲು ದುರಂತ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆ ಒಂದು ಒಡಿಶಾದಲ್ಲಿ ನಡೆದಿದ್ದು ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಒಡಿಸಾ, ಜೂನ್ 7 :  ಬಾಲಸೋರ್​ ರೈಲು ದುರಂತ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆ ಒಂದು ಒಡಿಶಾದಲ್ಲಿ ನಡೆದಿದ್ದು ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಒಡಿಶಾದ ಜಜ್‌ಪುರ್ ಕಿಯೋಂಜರ್ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಗೂಡ್ಸ್​ ರೈಲಿನಡಿ ಸಿಲುಕಿ ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ಧಾರೆ ಎಂದು ವರದಿಯಾಗಿದೆ.

ಭಾರಿ ಮಳೆ ಸುರಿಯುತ್ತಿದ್ದ ಕಾರಣ ಕಾರ್ಮಿಕರು ರೈಲಿನ ಬೋಗಿಗಳಡಿ ಆಶ್ರಯ ಪಡೆದಿದ್ದರು. ಈ ವೇಳೆ ರೈಲು ಏಕಾಏಕಿ ಚಲಿಸಿದ ಕಾರಣ ಕಾರ್ಮಿಕರು ಬೇರೆಡೆ ತೆರಳಲು ಸಾಧ್ಯವಾಗದೆ ರೈಲಿನಡಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

ಗಾಯಾಳುಗಳನ್ನು ಕಟಕ್​ನಲ್ಲಿರುವ ಎಸ್​ಸಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ನೆರವನ್ನು ಒದಿಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

As many as six persons were killed and two injured after a goods train ran over them near Jajpur – Keonjhar Road station on Wednesday. The victims, all daily labourers had taken shelter under the bogie of a goods train stationed at Jajpur Road station today evening.