ಬ್ರೇಕಿಂಗ್ ನ್ಯೂಸ್
31-10-20 12:16 pm Headline Karnataka News Network ದೇಶ - ವಿದೇಶ
ಅಯೋಧ್ಯೆ, ಅಕ್ಟೋಬರ್ 30: ಸುದೀರ್ಘ 28 ವರ್ಷಗಳ ಬಳಿಕ ದೀಪಾವಳಿ ಹಬ್ಬಕ್ಕೆ ಅಯೋಧ್ಯೆ ಝಗಮಗಿಸಲಿದೆ. ಈವರೆಗೂ ಟೆಂಟ್ ಒಳಗಿದ್ದ ರಾಮನ ವಿಗ್ರಹಕ್ಕೆ ದೀಪಗಳ ಹಬ್ಬದ ಸಡಗರದ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರತಿ ಎತ್ತಲಿದ್ದಾರೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ವಿವಾದಿತ ಪ್ರದೇಶವಾಗಿದ್ದ ಅಯೋಧ್ಯೆಯಲ್ಲಿ ಯಾವುದೇ ಹಬ್ಬಗಳ ಆಚರಣೆಗೂ ಅನುಮತಿ ಇರಲಿಲ್ಲ. ಈ ಬಾರಿ ಅಯೋಧ್ಯೆ ವಿವಾದ ಮುಕ್ತವಾಗಿದ್ದು, ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಇದೇ ವೇಳೆ, ದೀಪಾವಳಿ ಹಬ್ಬವನ್ನು ಸಡಗರದಿಂದ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.


ಇಷ್ಟು ವರ್ಷಗಳ ಕಾಲ ಪುಟ್ಟ ಟೆಂಟ್ ನಲ್ಲಿದ್ದ ರಾಮನ ವಿಗ್ರಹವನ್ನು ಮಂದಿರ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಆವರಣಕ್ಕೆ ಸ್ಥಳಾಂತರಿಸಿ ಪೂಜಿಸಲಾಗುತ್ತಿದೆ. ದಿನವೂ ಅರ್ಚನೆ, ಪೂಜೆಗಳು ನಡೆಯುತ್ತಿವೆ. ಇದೇ ಜಾಗದಲ್ಲಿ ಈ ಬಾರಿ ದೀಪಾವಳಿ ಆಚರಿಸಲಾಗುತ್ತಿದೆ. ದೀಪಾವಳಿಗೆ ಇಡೀ ರಾಮಮಂದಿರ ಪರಿಸರದಲ್ಲಿ ಲಕ್ಷಾಂತರ ದೀಪಗಳನ್ನು ಹಚ್ಚಿ ಬೆಳಗಿಸಲು ಯೋಜನೆ ಹಾಕಲಾಗಿದೆ. ಮಂದಿರದ ಆವರಣದಲ್ಲಿ ಅಲ್ಲದೆ, ರಾಮ ನಿರ್ಯಾಣಗೊಂಡ ಸರಯೂ ನದಿ ತೀರದಲ್ಲಿಯೂ ಲಕ್ಷಾಂತರ ದೀಪಗಳನ್ನು ಬೆಳಗಿಸಿ ವಿಶಿಷ್ಟವಾಗಿ ದೀಪಗಳ ಹಬ್ಬವನ್ನು ಆಚರಿಸಲು ಯೋಜನೆ ಹಾಕುತ್ತಿದ್ದಾರೆ.
ಕಳೆದ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿತ್ತು. ಅಂದು ಕೂಡ ಇಡೀ ಅಯೋಧ್ಯೆಯನ್ನು ಶೃಂಗರಿಸಿ ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಿದ್ದರು. ಈ ಬಾರಿ ಮೋದಿ ದೀಪಾವಳಿಗೆ ಅಯೋಧ್ಯೆ ಅಥವಾ ವಾರಣಾಸಿಗೆ ಬರುವುದು ಇನ್ನೂ ಅಂತಿಮಗೊಂಡಿಲ್ಲ.
For the first time since 1992, Diwali will be celebrated in the earlier disputed area where the foundation stone for the Ram Temple construction was laid back in August.
30-04-26 11:53 am
HK News Staffer
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
30-04-26 04:30 pm
HK News Staffer
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am
ಗಾಂಜಾ ಪ್ರಕರಣದಲ್ಲಿ ಹಣ ಕೇಳಿದ್ದಕ್ಕೆ ಬಿಎಸ್ಸಿ ವಿದ...
29-04-26 11:10 pm