ಟರ್ಕಿ, ಗ್ರೀಸ್ ನಲ್ಲಿ ಭೂಕಂಪ : 26 ಸಾವು, 800 ಕ್ಕೂ ಅಧಿಕ ಮಂದಿಗೆ ಗಾಯ!!

31-10-20 01:14 pm       Headline Karnataka News Network   ದೇಶ - ವಿದೇಶ

ಟರ್ಕಿ ಹಾಗೂ ಗ್ರೀಸ್​ ದೇಶಗಳಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಘಟನೆಯಿಂದ ಟರ್ಕಿ ದೇಶದ ಅಜ್ಮಿರ್ ನಗರದಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

ಟರ್ಕಿ, ಅಕ್ಟೋಬರ್ 31 : ಟರ್ಕಿ ಹಾಗೂ ಗ್ರೀಸ್​ ದೇಶಗಳಲ್ಲಿ ಭಾರೀ ಭೂಕಂಪ ಸಂಭವಿಸಿದ್ದು , ಏಜನ್ ಸಮುದ್ರದಲ್ಲಿ ಸುನಾಮಿ ಉಂಟಾಗಿದೆ. 

ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆಯ ದಾಖಲಾಗಿದ್ದು ಸಣ್ಣ ಮಟ್ಟದಲ್ಲಿ ಸುನಾಮಿ ಕಾಣಿಸಿಕೊಂಡಿದೆ. ಘಟನೆಯಿಂದ ಟರ್ಕಿ ದೇಶದ ಅಜ್ಮಿರ್ ನಗರದಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು ಕಟ್ಟಡಗಳ ಕುಸಿತ, ಪ್ರವಾಹಗಳಿಂದ 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಏಜಿಯನ್ ಸಮುದ್ರ ಪ್ರದೇಶದ ದ್ವೀಪಗಳಿಂದ 14 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಏಕಾಏಕಿ ಏರಿಕೆಯಾದ ಸಮುದ್ರದ ನೀರಿನಿಂದಾಗಿ ತೀರ ಪ್ರದೇಶದ ಅನೇಕ ಮನೆಗಳು, ಕಟ್ಟಡಗಳು ಜಲಾವೃತವಾಗಿವೆ. ದ್ವೀಪ ಪ್ರದೇಶದ ಮನೆಗಳ ಸಾಮಗ್ರಿಗಳನ್ನು ಸಮುದ್ರ ತನ್ನೊಂದಿಗೆ ಕೊಂಡೊಯ್ದಿದೆ.  ಸಮುದ್ರದ ನೀರು ಉಕ್ಕಿ ಸುತ್ತಮುತ್ತ ಜನವಸತಿ ಪ್ರದೇಶಗಳಿಗೆ ಹರಿದಿದ್ದು, ಹಲವೆಡೆ ಮನೆಗಳು ಮುಳುಗಿ ಹೋಗಿವೆ.

A strong earthquake struck the Aegean Sea between the Turkish coast and the Greek island of Samos on Friday, killing at least 26 people and injuring over 800 amid collapsed buildings and flooding, news agency The Associated Press quoted an official as saying.