ಬ್ರೇಕಿಂಗ್ ನ್ಯೂಸ್
31-10-20 01:36 pm Headline Karnataka News Network ದೇಶ - ವಿದೇಶ
ಬೆಂಗಳೂರು, ಅಕ್ಟೋಬರ್ 31: ಸರಕಾರಿ ಹುದ್ದೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ನಾಗರಿಕ ಸೇವೆ (ನಿಯಮ) 2020 ಅನ್ನು ತಿದ್ದುಪಡಿಗೊಳಿಸಿ ಕರಡು ಸಿದ್ಧಪಡಿಸಿದೆ.
ಕರಡು ಸಿದ್ಧಪಡಿಸಿ, ರಾಜ್ಯ ಸರಕಾರ ಗಜೆಟ್ ಪ್ರಕಟಣೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಕರಡು ಪ್ರಕಾರ, ಸರಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ನೌಕರರು ಏನು ಮಾಡಬಾರದು, ಏನು ಮಾಡಬಹುದು ಎನ್ನುವ ಬಗ್ಗೆ ವಿವರ ನೀಡಲಾಗಿದೆ.
ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೆ ಸರಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳು, ಸಿನಿಮಾ, ಧಾರವಾಹಿಗಳಲ್ಲಿ ನಟಿಸುವಂತಿಲ್ಲ. ಅಲ್ಲದೆ, ಪತ್ರಿಕೆ, ನಿಯತಕಾಲಿಕಗಳ ಪ್ರಕಟಣೆ, ಸಂಪಾದನೆಯಲ್ಲೂ ತೊಡಗುವಂತಿಲ್ಲ. ರೇಡಿಯೋ, ಟಿವಿ ಸೇರಿದಂತೆ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಯಾವುದೇ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವಂತಿಲ್ಲ. ಸಾಂದರ್ಭಿಕವಾಗಿ ಕಥೆ, ಕವನ ಸಾಹಿತ್ಯ ಕೃತಿಗಳನ್ನು ಬರೆದು ಪ್ರಕಟಿಸಿದರೂ, ಅಧಿಕಾರಿ ತನ್ನ ಹುದ್ದೆಯನ್ನು ಬಳಸುವಂತಿಲ್ಲ. ಆದರೆ, ಅದರಲ್ಲಿ ಆಕ್ಷೇಪಾರ್ಹ ವಿಷಯಗಳು ಇರಬಾರದು. ಅಲ್ಲದೆ, ಸರಕಾರದ ನೀತಿಗಳನ್ನು ಟೀಕಿಸುವಂತಿಲ್ಲ ಹೀಗೆ ಹಲವು ವಿಚಾರಗಳನ್ನು ಕರಡಿನಲ್ಲಿ ಒಳಪಡಿಸಲಾಗಿದೆ.
ಸರಕಾರಿ ಹುದ್ದೆಯಲ್ಲಿದ್ದುಕೊಂಡು ಸಿನಿಮಾದಲ್ಲಿ ನಟಿಸುವುದು, ಹುದ್ದೆಗಳನ್ನು ಬಳಸ್ಕೊಂಡು ಪ್ರಭಾವ ಬೀರುವ ವಿಚಾರ ಹೊರಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಬಗ್ಗೆ ನಿಯಮ ತಿದ್ದುಪಡಿಗೊಳಿಸಿದೆ.
The state government has decided that It is inexplicable that the government employees should not act in any films or serials.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 04:23 pm
Mangalore Correspondent
Golden Era of AI Business: YatiCorp Offers As...
30-08-25 04:11 pm
ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂ...
30-08-25 12:55 pm
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm